ನಾನು ಕೂಡ ಮನುಷ್ಯನೇ ನಾನು ಸಾಕಷ್ಟು ತಪ್ಪು ಮಾಡಿದ್ದೇನೆ. ನಾನೇನು ದೇವರಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಜಿರೋದಾ ಮುಖ್ಯಸ್ಥ ನಿಖಿಲ್ ಕಾಮತ್ ಗೆ ನೀಡಿದ ಪಾಡ್ ಕಾಸ್ಟ್ ವಿಶೇಷ ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿರುವ ಮೋದಿ, ತಪ್ಪುಗಳು ಆಗುತ್ತವೆ. ನನ್ನಿಂದಲೂ ಆಗಿದೆ. ನಾನೇನು ದೇವರಲ್ಲ, ಸಾಮಾನ್ಯ ಮನುಷ್ಯ ಎಂದು ಹೇಳಿದ್ದಾರೆ.
ಕ್ಷಮಿಸಿ ನನ್ನ ಹಿಂದಿ ಸರಿಯಾಗಿಲ್ಲ, ನಾನು ದಕ್ಷಿಣ ಭಾರತದವನು. ನಾನು ಬಹುತೇಕ ಬೆಳೆದಿದ್ದು ಬೆಂಗಳೂರಿನಲ್ಲಿ, ನನ್ನ ತಾಯಿ ಮೈಸೂರಿನವರು. ನನ್ನ ತಂದೆ ಮಂಗಳೂರಿನವರು. ಶಾಲೆಯಲ್ಲಿ ಹಿಂದಿ ಕಲಿತಿದ್ದು ಎಂದು ನಿಖಿಲ್ ಕಾಮತ್ ಹೇಳಿದಾಗ ಪ್ರತಿಕ್ರಿಯಿಸಿದ ಮೋದಿ ನನ್ನ ಹಿಂದಿ ಕೂಡ ಕೆಟ್ಟದಾಗಿದೆ ಎಂದರು.
ಸುಮಾರು 2 ಗಂಟೆಗಳ ಕಾಲ ನಡೆದ ಸುದೀರ್ಘ ಸಂದರ್ಶನದಲ್ಲಿ ಬಾಲ್ಯ, ಶಿಕ್ಷಣ, ರಾಜಕೀಯ ಸೇರಿದಂತೆ ಹಲವು ವಿಷಯಗಳನ್ನು ಪ್ರಧಾನಿ ಮೋದಿ ಹಂಚಿಕೊಂಡಿದ್ದು, ನನಗೂ ಈ ಸಂದರ್ಶನ ಹೇಗೆ ಹೋಗುತ್ತದೆ ಎಂಬುದು ಗೊತ್ತಿಲ್ಲ. ನಾನು ಒತ್ತಡದಲ್ಲಿ ಇದ್ದೇನೆ. ಆದರೆ ಇದೇ ರೀತಿ ನಾವು ಸಂಭಾಳಿಸೋಣ ಎಂದು ಹೇಳಿದ್ದಾರೆ.
ನಾನು ಬಾಲ್ಯದಲ್ಲಿ ಹೊಂಡದಲ್ಲಿ ಆಟವಾಡಲು ಹೋಗಬೇಕಾದರೆ ಮನೆಮಂದಿಯ ಬಟ್ಟೆಗಳನ್ನೆಲ್ಲಾ ಒಗೆದು ಹೋಗುತ್ತಿದ್ದೆ ಎಂದು ಅವರು ಹೇಳಿದ್ದಾರೆ.