ದ್ವೀಪರಾಷ್ಟ್ರ ಜಪಾನ್ ನಲ್ಲಿ ಸೋಮವಾರ ಸಂಜೆ ಪ್ರಬಲ ಭೂಕಂಪನ ಸಂಭವಿಸಿದ್ದು, ನಾಗರಿಕರಿಗೆ ಸುನಾಮಿ ಎಚ್ಚರಿಕೆ ನೀಡಲಾಗಿದೆ.
ಜಪಾನ್ ನ ದಕ್ಷಿಣ ಭಾಗದ ಕ್ಯುಶುದಲ್ಲಿ ಸೋಮವಾರ ಸ್ಥಳೀಯ ಕಾಲಮಾನ ಪ್ರಕಾರ ರಾತ್ರಿ 9.28ರ ವೇಳೆ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.9ರಷ್ಟು ತೀವ್ರತೆಯಲ್ಲಿ ಭೂಕಂಪನ ದಾಖಲಾಗಿದೆ.
ಭೂಮಿಯಿಂದ 39 ಕಿ.ಮೀ. ಆಳದಲ್ಲಿ ಭೂಕಂಪನದ ಕೇಂದ್ರಬಿಂದು ಪತ್ತೆಯಾಗಿದ್ದು, ಕಳೆದ ವರ್ಷ ಆಗಸ್ಟ್ ೮ರಂದು 6.9 ಮತ್ತು 7.1ರ ತೀವ್ರತೆಯಲ್ಲಿ ಭೂಕಂಪನ ಸಂಭವಿಸಿತ್ತು. ಜನವರಿ 1ರಂದು ಸಂಭವಿಸಿದ 7.6 ತೀವ್ರತೆಯ ಭೂಕಂಪನದಲ್ಲಿ ೩೦೦ ಮಂದಿ ಅಸುನೀಗಿದ್ದರು.