Friday, September 11, 2026
Google search engine
Homeಕ್ರೀಡೆAustrelian Open: 19 ವರ್ಷದ ಬಸವರೆಡ್ಡಿ ಮುಂದೆ ಜೊಕೊವಿಕ್ ಗೆ ಪ್ರಯಾಸದ ಜಯ

Austrelian Open: 19 ವರ್ಷದ ಬಸವರೆಡ್ಡಿ ಮುಂದೆ ಜೊಕೊವಿಕ್ ಗೆ ಪ್ರಯಾಸದ ಜಯ

ವಿಶ್ವದ ಅಗ್ರಮಾನ್ಯ ಆಟಗಾರ ಸರ್ಬಿಯಾದ ನೊವಾಕ್ ಜೊಕೊವಿಕ್ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಭಾರತೀಯ ಮೂಲದ ನಿತಿಶ್ ಬಸವರೆಡ್ಡಿ ಪ್ರಯಾಸದ ಗೆಲುವು ದಾಖಲಿಸಿದ್ದಾರೆ.

ಮೆಲ್ಬೋರ್ನ್ ಕೋರ್ಟ್ ನಲ್ಲಿ ಸೋಮವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲೇ ತಮ್ಮದೇ ಅಭಿಮಾನಿ ಆಟಗಾರನ ವಿರುದ್ಧ ಸೋಲಿನ ಭೀತಿಗೆ ಸಿಲುಕಿದ್ದರು. ಆದರೆ ಅಂತಿಮವಾಗಿ 4-6, 6-3, 6-4, 6-2 ಸೆಟ್ ಗಳಿಂದ ಗೆದ್ದು ನಿಟ್ಟುಸಿರುಬಿಟ್ಟರು.

ಭಾರತೀಯ ಮೂಲದ ಅಮೆರಿಕದ 19 ವರ್ಷದ ಯುವ ಆಟಗಾರ ನಿತಿಶ್ ಬಸವರೆಡ್ಡಿ ಮೊದಲ ಸೆಟ್ ಗೆದ್ದು ಜೊಕೊವಿಕ್ ಗೆ ಅಚ್ಚರಿ ಮೂಡಿಸಿದರು. ಆದರೆ ಅನುಭವಿ ಆಟಗಾರ ಜೊಕೊವಿಕ್ ಒತ್ತಡವನ್ನು ಮೆಟ್ಟಿ ನಿಂತು ಗೆಲುವಿನ ನಗೆ ಬೀರಿದರು.

ಈ ಹುಡುಗ ನಿಜಕ್ಕೂ ಉತ್ತಮ ಪ್ರದರ್ಶನ ನೀಡಿದರು. ಮೆಚ್ಚುಗೆಗೆ ಪಾತ್ರವಾಗುವ ಆಟಾಡಿದ್ದಾನೆ. ನಿಜವಾಗಿಯೂ ನಾನು ಇತ್ತೀಚೆಗೆ ಈತನ ಆಟ ನೋಡಿರಲಿಲ್ಲ. ಸಾಕಷ್ಟು ಉತ್ತಮವಾಗಿ ರೂಪುಗೊಳ್ಳುತ್ತಿದ್ದಾನೆ ಎಂದು ನಿತಿಶ್ ಬಗ್ಗೆ ಜೊಕೊವಿಕ್ ಮೆಚ್ಚುಗೆ ಮಾತುಗಳನ್ನಾಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments