Thursday, September 19, 2024
Google search engine
Homeತಾಜಾ ಸುದ್ದಿನಟಿ ಅಮೃತಾ ಪಾಂಡೆ ಆತ್ಮಹತ್ಯೆ, ವಾಟ್ಸಪ್ ಸ್ಟೇಟಸ್ ವೈರಲ್!

ನಟಿ ಅಮೃತಾ ಪಾಂಡೆ ಆತ್ಮಹತ್ಯೆ, ವಾಟ್ಸಪ್ ಸ್ಟೇಟಸ್ ವೈರಲ್!

ನಟಿಯಾಗಿ ಅಮೃತಾ ಪಾಂಡೆಯಾಗಿ ಗುರುತಿಸಿಕೊಂಡಿದ್ದ ಭೋಜಪುರಿ ನಟಿ ಅನುಪಮಾ ಬಿಹಾರದ ಭಾಗಲ್ಪುರದ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನಟಿ ಆತ್ಮಹತ್ಯೆಗೂ ಮುನ್ನ ವಾಟ್ಸಪ್ ಸ್ಟೇಟಸ್ ಮತ್ತು ಇನ್ ಸ್ಟಾಗ್ರಾಂನಲ್ಲಿ ಮುಳುಗುವ ಹಡುಗಿನ ಪೋಸ್ಟ್ ಮಾಡಿರುವುದು ವೈರಲ್ ಆಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಅಮೃತಾ ಪಾಂಡೆ ಶವ ಕುತ್ತಿಗೆ ಸುತ್ತ ಸೀರೆ ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ಥಳದಲ್ಲಿದ್ದ ಮೊಬೈಲ್ ಹಾಗೂ ಇತರೆ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆತ್ಮಹತ್ಯೆ ಬಗ್ಗೆ ಸಾಕಷ್ಟು ಅನುಮಾನಗಳು ವ್ಯಕ್ತವಾಗಿವೆ.

ಅಮೃತಾ ಪಾಂಡೆ ಭೋಜಪುರಿ ಅಲ್ಲದೇ ಹಿಂದಿ ಸಿನಿಮಾ ಹಾಗೂ ಹಲವಾರು ಶೋ ಹಾಗೂ ಜಾಹಿರಾತುಗಳಲ್ಲಿ ಕಾಣಿಸಿಕೊಂಡಿದ್ದರು.

ಆತ್ಮಹತ್ಯೆಗೂ ಮುನ್ನ ಅಮೃತಾ ಪಾಂಡೆ, ನಾವು ಎರಡು ಹಡಗಿನಲ್ಲಿ ಪ್ರಯಾಣ ಮಾಡುತ್ತಿದ್ದೆವು. ನನ್ನ ಹಡಗು ಮುಳುಗಿಸಿ ಅವರ ಹಡಗು ಸುಗಮವಾಗಿ ಸಾಗುವಂತೆ ಮಾಡಿದ್ದೇನೆ ಎಂದು ವಾಟ್ಸಪ್ ಸ್ಟೇಟಸ್ ಹಾಕಿಕೊಂಡಿದ್ದಾರೆ. ಇದು ಈಗ ಭಾರೀ ಕುತೂಹಲಕ್ಕೆ ಕಾರಣವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments