ಕಿರುತೆರೆ ನಟಿ ಗೌತಮ ಜಾಧವ್ ಬಿಗ್ ಬಾಸ್ ಸೀಸನ್ 11ರ ಮನೆಯಿಂದ ಫಿನಾಲೆ ವಾರಕ್ಕೂ ಮುನ್ನವೇ ಡಬಲ್ ಎಲಿಮಿನೇಷನ್ ನಲ್ಲಿ ಹೊರಬಿದ್ದಿದ್ದಾರೆ.
ವಾರದ ಮಧ್ಯದಲ್ಲಿ ನಡೆಯಬೇಕಿದ್ದ ಡಬಲ್ ಎಲಿಮಿನೇಷನ್ ಕಳ್ಳಾಟದ ಕಾರಣ ಮುಂದೂಡಲಾಗಿದ್ದು, ಶನಿವಾರ ನಡೆದ ಕಿಚ್ಚ ಸುದೀಪ್ ವಾರದ ಸಂತೆ ಕಾರ್ಯಕ್ರಮದಲ್ಲಿ ಗೌತಮಿ ಜಾಧವ್ ಮೊದಲ ಸ್ಪರ್ಧಿಯಾಗಿ ಹೊರಬಿದ್ದಿದ್ದು, ಮತ್ತೊಬ್ಬ ಸ್ಪರ್ಧಿ ಭಾನುವಾರ ಎಲಿಮಿನೇಷನ್ ಆಗಲಿದ್ದಾರೆ.
ಪಾಸಿಟಿವ್ ಅಂತಲೇ ಬಿಗ್ ಬಾಸ್ ಮನೆ ಪ್ರವೇಶಿಸಿದ್ದ ಗೌತಮ್ ಜಾಧವ್ 111 ದಿನಗಳನ್ನು ಪೂರೈಸಿದ್ದು, ಫಿನಾಲೆ ವಾರ ಪ್ರವೇಶಿಸಲು ಪೂರೈಸಿದ್ದಾರೆ. ಈ ಮೂಲಕ ಮಿಡ್ ವೀಕ್ ಎಲಿಮಿನೇಷನ್ ನಲ್ಲಿ ಹೊರಹೋಗಬೇಕಿದ್ದ ಸ್ಪರ್ಧಿ ಇವರೇ ಎಂಬುದು ದೃಢಪಟ್ಟಿದೆ.
ಸತ್ಯ ಧಾರವಾಹಿಯ ಮೂಲಕ ಮನೆಮಾತಾಗಿದ್ದ ಗೌತಮಿ ಜಾಧವ್ ಪಾಸಿಟಿವ್ ಗೌತಮಿ ಎಂದೇ ಗಮನ ಸೆಳೆದಿದ್ದರು. ಮಂಜು ಜೊತೆಗಿನ ಸ್ನೇಹದಿಂದ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. ಬಿಗ್ ಬಾಸ್ 11ರ ಆವೃತ್ತಿಯಲ್ಲಿ ಒಂದು ಬಾರಿಯೂ ನಾಮಿನೇಟ್ ಮಾಡದ ಮಂಜು ಫಿನಾಲೆ ವಾರವೇ ನಾಮಿನೇಟ್ ಮಾಡಿ ಅಚ್ಚರಿ ಮೂಡಿಸಿದ್ದರು.
ಈ ಬಗ್ಗೆ ಮಂಜಣ್ಣನನ್ನು ಪ್ರಶ್ನಿಸಿದಾಗ ಉಳಿದ ಸ್ಪರ್ಧಿಗಳಿಗೆ ಹೋಲಿಸಿದರೆ ಗೌತಮಿ ಆಟದಲ್ಲಿ ಹಿಂದೆ ಉಳಿದಿದ್ದಾರೆ ಎಂದು ಹೇಳಿದ್ದರು. ಈ ಬಗ್ಗೆ ಗೌತಮಿ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದು, ನಾಮಿನೇಟ್ ಮಾಡಿದ ನಂತರ ಫಿನಾಲೆಗೆ ಮೋಕ್ಷಿತಾ ಜೊತೆ ನಾವು ಮೂವರು ಫಿನಾಲೆ ವಾರದಲ್ಲಿ ಇರುತ್ತೇವೆ ಎಂದು ಹೇಳಿದ್ದರು ಎಂದು ಪ್ರತಿಕ್ರಿಯಿಸಿದ್ದರು.