Thursday, 29 October 2026 — Kannadavahini
BREAKING NEWS
Uncategorized ನೂತನ ನೀರಾವರಿ ಯೋಜನೆಗಳಿಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ಅಪರಾಧ ಮಡಿಕೇರಿಯಲ್ಲಿ 8 ಬೇಟೆಗಾರರ ಬಂಧನ ವಿದೇಶ ಸ್ಪೇನ್ ನಲ್ಲಿ ಭೀಕರ ರೈಲು ದುರಂತ: 64ಕ್ಕೆ ಏರಿದ ಸಾವಿನ ಸಂಖ್ಯೆ ಕ್ರೀಡೆ 3 ಬಾರಿ ಏಷ್ಯನ್‌ ಚಿನ್ನದ ಪದಕ ವಿಜೇತ ನೀರಜ್‌ ಯಾದವ್‌ ಶವವಾಗಿ ಪತ್ತೆ ರಾಜಕೀಯ ವಿಧಾನ ಪರಿಷತ್ತಿನ 4 ಕ್ಷೇತ್ರಗಳಿಗೆ ಮತದಾನ: 43 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ ಬೆಂಗಳೂರು ಬ್ಲೂ ಲೈನ್ ಮಟ್ರೋ ಕಾಮಗಾರಿ ಶೀಘ್ರ ಮುಗಿಸಿ: ಸಚಿವ ಕೃಷ್ಣ ಬೈರೇಗೌಡ ಸೂಚನೆ ರಾಜ್ಯ ಖಾಸಗಿ ಆಸ್ಪತ್ರೆಗಳ ಸುಲಿಗೆಗೆ ಬ್ರೇಕ್: ನ.1ರಿಂದ ದರಪಟ್ಟಿ ಪ್ರದರ್ಶನ ಕಡ್ಡಾಯ ಅಪರಾಧ ಪತ್ನಿ ಕೊಂದು ರಾಜಕಾಲುವೆಗೆ ಎಸೆದು ಪರಾರಿಯಾಗಿದ್ದ ಪತಿ ಅರೆಸ್ಟ್ Uncategorized ನೂತನ ನೀರಾವರಿ ಯೋಜನೆಗಳಿಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ಅಪರಾಧ ಮಡಿಕೇರಿಯಲ್ಲಿ 8 ಬೇಟೆಗಾರರ ಬಂಧನ ವಿದೇಶ ಸ್ಪೇನ್ ನಲ್ಲಿ ಭೀಕರ ರೈಲು ದುರಂತ: 64ಕ್ಕೆ ಏರಿದ ಸಾವಿನ ಸಂಖ್ಯೆ ಕ್ರೀಡೆ 3 ಬಾರಿ ಏಷ್ಯನ್‌ ಚಿನ್ನದ ಪದಕ ವಿಜೇತ ನೀರಜ್‌ ಯಾದವ್‌ ಶವವಾಗಿ ಪತ್ತೆ ರಾಜಕೀಯ ವಿಧಾನ ಪರಿಷತ್ತಿನ 4 ಕ್ಷೇತ್ರಗಳಿಗೆ ಮತದಾನ: 43 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ ಬೆಂಗಳೂರು ಬ್ಲೂ ಲೈನ್ ಮಟ್ರೋ ಕಾಮಗಾರಿ ಶೀಘ್ರ ಮುಗಿಸಿ: ಸಚಿವ ಕೃಷ್ಣ ಬೈರೇಗೌಡ ಸೂಚನೆ ರಾಜ್ಯ ಖಾಸಗಿ ಆಸ್ಪತ್ರೆಗಳ ಸುಲಿಗೆಗೆ ಬ್ರೇಕ್: ನ.1ರಿಂದ ದರಪಟ್ಟಿ ಪ್ರದರ್ಶನ ಕಡ್ಡಾಯ ಅಪರಾಧ ಪತ್ನಿ ಕೊಂದು ರಾಜಕಾಲುವೆಗೆ ಎಸೆದು ಪರಾರಿಯಾಗಿದ್ದ ಪತಿ ಅರೆಸ್ಟ್
ಅಪರಾಧ

BIG BREAKING ಮಂಗಳೂರು ಬ್ಯಾಂಕ್ ದರೋಡೆ: ಮೂವರು ಅರೆಸ್ಟ್

Vahini
ವರದಿ: Vahini ಮುಖ್ಯ ಸಂಪಾದಕರು (Chief Editor)
2 ನಿಮಿಷ ಓದು 3 ವೀಕ್ಷಣೆಗಳು
mangaluru bank cctv
mangaluru bank cctv

ಮಂಗಳೂರಿನ ಕೋಟೆಕಾರ್ ಬ್ಯಾಂಕ್ ನಲ್ಲಿ 12 ಕೋಟಿ ಚಿನ್ನಾಭರಣ ಮತ್ತು ನಗದು ದೋಚಿದ ದರೋಡೆಕೋರರ ಪೈಕಿ ಮೂವರನ್ನು ಬಂಧಿಸಲಾಗಿದೆ.

ಬಂಧಿತ ಮೂವರು ತಮಿಳುನಾಡಿನ ತಿರುವನ್ನೆಲ್ಲಿ ನಿವಾಸಿಗಳಾಗಿದ್ದು, ದರೋಡೆ ಮಾಡಿ ಕೇರಳ ಮೂಲಕ ತಮಿಳುನಾಡಿಗೆ ಪರಾರಿಯಾಗಿದ್ದರು.

ಜನವರಿ 17 ರಂದು ಉಳ್ಳಾಲ ರಸ್ತೆಯ ಕೆಸಿ ರಸ್ತೆಯ ಕೋಟೆಕಾರ್ ಬ್ಯಾಂಕ್ ಗೆ ನುಗ್ಗಿದ ೫ ಮಂದಿ ದರೋಡೆಕೋರರು 5 ನಿಮಿಷದಲ್ಲಿ 12 ಕೋಟಿ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ದೋಚಿ ಪರಾರಿಯಾಗಿದ್ದರು.

5 ಮಂದಿ ದರೋಡೆಕೋರರ ಪೈಕಿ ಮೂವರನ್ನು ಬಂಧಿಸಲಾಗಿದ್ದು, ಬಂಧಿತರು ಬಳಸಿದ್ದ 2 ಪಿಸ್ತೂಲು, ತಲ್ವಾರ್ ಹಾಗೂ ೨ ಚಿನ್ನ ತುಂಬಿಕೊಂಡು ಹೋಗಿದ್ದ ಬ್ಯಾಗ್ ಕೂಡ ವಶಪಡಿಸಿಕೊಳ್ಳಲಾಗಿದ್ದು, ಉಳಿದವರ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಮಂಗಳೂರು ಪೊಲಸ್ ಆಯುಕ್ತ ಅನುಪಮ್ ಅಗರ್ ವಾಲ್ ತಿಳಿಸಿದ್ದಾರೆ.

ದರೋಡೆ ಆರಂಭದಲ್ಲಿ ನಮಗೆ ಯಾವುದೇ ಮಾಹಿತಿ ಇರಲಿಲ್ಲ. ಆದರೆ ತಾಂತ್ರಿಕ ನೆರವು ಹಾಗೂ ವಾಹನ ಮುಂತಾದ ಮಾಹಿತಿಗಳನ್ನು ಆಧರಿಸಿ ತನಿಖೆ ಆರಂಭಿಸಲಾಗಿತ್ತು. ಬಂಧಿತರ ವಿಚಾರಣೆ ನಡೆಯುತ್ತಿದ್ದು, ಅಲ್ಲದೇ ವಶಪಡಿಸಿಕೊಂಡ ಚಿನ್ನಾಭರಣಗಳ ಮೌಲ್ಯ ಲೆಕ್ಕಾಚಾರ ನಡೆಯುತ್ತಿದೆ ಎಂದು ಅವರು ಹೇಳಿದರು.

ದರೋಡೆಕೋರರು ಮುಂಬೈ ಮೂಲದ ಕಾರಿಗೆ ಬೆಂಗಳೂರು ನೇಮ್ ಪ್ಲೇಟ್ ಬಳಸಿದ್ದು, ಸಾಕಷ್ಟು ಯೋಜನಾಬದ್ಧವಾಗಿ ದರೋಡೆ ಮಾಡಿದ್ದರು. ಸ್ಥಳೀಯ ಪೊಲೀಸರ ಮಾಹಿತಿ ಆಧರಿಸಿ ದರೋಡೆಕೋರರನ್ನು ಬಂಧಿಸಲಾಗಿದ್ದು, ಬಂಧಿತರ ವಿಚಾರಣೆ ನಡೆಯುತ್ತಿದೆ. ಇದಕ್ಕೂ ಮೊದಲು ಎಲ್ಲೆಲ್ಲಿ ಯಾವೆಲ್ಲಾ ಕೃತ್ಯಗಳನ್ನು ಎಸಗಿದ್ದಾರೆ ಎಂಬ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಅವರು ವಿವರಿಸಿದರು.

👑

JOIN OUR COMMUNITY

✈️
Get Latest Updates, News, Offers & More
ಮುಖ್ಯ ಸಂಪಾದಕರು (Chief Editor) ✍️ 8392 ಲೇಖನಗಳು

Vahini

Vahini ಅವರು ಸಮಕಾಲೀನ ವಿದ್ಯಮಾನಗಳು, ರಾಜ್ಯ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಬರೆಯುವ ಜವಾಬ್ದಾರಿಯುತ ಲೇಖಕರಾಗಿದ್ದಾರೆ.

Leave a comment