ಅಮೆರಿಕ ಅಧ್ಯಕ್ಷರಾಗಿ ಎರಡನೇ ಬಾರಿ ಅಧಿಕಾರ ಸ್ವೀಕರಿಸಿದ ಮೊದಲ ಭಾಷಣದಲ್ಲೇ ಡೊನಾಲ್ಡ್ ಟ್ರಂಪ್ 20 ಸುಳ್ಳು ಅಥವಾ ನಿಖರವಲ್ಲದ ಅಥವಾ ತಪ್ಪು ಹೇಳಿಕೆಗಳನ್ನು ನೀಡಿದ್ದಾರೆ.
ಹೌದು, ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಪ್ರಮಾಣ ವಚನ ಸ್ವೀಕರಿಸದ ನಂತರ ಮಾಡಿದ ಮೊದಲ ಭಾಷಣದಲ್ಲೇ ಹಲವಾರು ಘೋಷಣೆಗಳನ್ನು ಮಾಡಿದರು. ಟ್ರಂಪ್ ಅವರ ಭಾಷಣವನ್ನು ಅಮೆರಿಕದ ಮಾಧ್ಯಮಗಳು ಅವಲೋಕನ ಮಾಡಿದ್ದು, 20 ಸುಳ್ಳುಗಳನ್ನು ಹೇಳಿರುವುದನ್ನು ಪತ್ತೆ ಹಚ್ಚಿವೆ.
ಡೊನಾಲ್ಡ್ ಟ್ರಂಪ್ ಮೊದಲ ಬಾರಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ 30,573 ತಪ್ಪು ಸಂದೇಶಗಳನ್ನು ನೀಡಿದ್ದರು. ಈ ಬಾರಿಯ ಮೊದಲ ಭಾಷಣದಲ್ಲೇ 20 ಮಾಡಿರುವ ಟ್ರಂಪ್ ತಮ್ಮದೇ ದಾಖಲೆಯನ್ನು ಮುರಿಯುತ್ತಾರೆಯೇ ಎಂದು ಪ್ರಶ್ನಿಸಿ ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.
ಡೊನಾಲ್ಡ್ ಟ್ರಂಪ್ ಪ್ರಮಾಣ ವಚನ ಸ್ವೀಕರಿಸುವ ಮುನ್ನ ಹಾಗೂ ನಂತರ ಎರಡು ಬಾರಿ ಭಾಷಣ ಮಾಡಿದ್ದಾರೆ. ಎರಡು ಬಾರಿಯೂ ಲಿಖಿತ ಭಾಷಣ ಮಾಡಿಲ್ಲ. ತಮ್ಮದೇ ಧಾಟಿಯಾಗಿ ಭಾಷಣ ಮಾಡಿ ಗಮನ ಸೆಳೆದಿದ್ದರು.
ಡೊನಾಲ್ಡ್ ತಮ್ಮ ಭಾಷಣದಲ್ಲಿ ವಲಸೆ ನೀತಿ, ತೆರಿಗೆ, ಶಿಕ್ಷಣ, ವಿದೇಶಾಂಗ ನೀತಿ ಸೇರಿದಂತೆ ಹಲವು ವಿಷಯಗಳನ್ನು ಪ್ರಸ್ತಾಪಿಸಿದರು. ಅಲ್ಲದೇ ಅಮೆರಿಕದ ಹೊಸ ಯುಗ ಆರಂಭ ಮಾಡುವುದಾಗಿ ಘೋಷಿಸಿದ್ದು, ಭಾಷಣವನ್ನು ತಜ್ಞರು ಅವಲೋಕನ ಮಾಡಿ 20 ತಪ್ಪುಗಳನ್ನು ಪತ್ತೆ ಮಾಡಿದ್ದಾರೆ.
2016ರಿಂದ 2020ರ ಅವಧಿಯಲ್ಲಿ ಡೊನಾಲ್ಡ್ ಟ್ರಂಪ್ ಮಾಡಿದ ಎಲ್ಲಾ ಭಾಷಣಗಳನ್ನು ಗಮನಿಸಲಾಗಿದ್ದು, ಈ ಭಾಷಣಗಳಿಂದ ಒಟ್ಟು 30,573 ತಪ್ಪು ನುಡಿದಿದ್ದಾರೆ ಎಂದು ಹೇಳಲಾಗಿದೆ. ಅದರಲ್ಲೂ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಮೊದಲ 100 ದಿನದಲ್ಲಿ 492 ಭಾಷಣದಲ್ಲಿ ತಪ್ಪು ಪತ್ತೆಯಾಗಿದ್ದವು.
2022ರಲ್ಲಿ ಶೇ. 9.1ರಷ್ಟು ಹಣದುಬ್ಬರ ಉಂಟಾಗಿದ್ದು, ಇದು ದೇಶದ ಹಣದುಬ್ಬರ ಇತಿಹಾಸದಲ್ಲೇ ಗರಿಷ್ಠ ಎಂದು ಟ್ರಂಪ್ ಹೇಳಿಕೆ ನೀಡಿದ್ದರು. ಆದರೆ ಈ ಅವಧಿಯಲ್ಲಿ ಹಣದುಬ್ಬ 2.9 ಆಗಿತ್ತು. 1923ರಲ್ಲಿ ಶೇ.23.7ರಷ್ಟು ಹಣದುಬ್ಬರ ಉಂಟಾಗಿದ್ದು, ಇತಿಹಾಸದಲ್ಲೇ ಗರಿಷ್ಠ ಎಂದು ದಾಖಲಾಗಿದೆ.