Sunday, June 28, 2026
Google search engine
Homeದೇಶವಯನಾಡು ಭೂಕುಸಿತ ಸಂತ್ರಸ್ತರಿಗೆ `ಕೈ’ ಕೊಟ್ಟ ಕೇಂದ್ರ!

ವಯನಾಡು ಭೂಕುಸಿತ ಸಂತ್ರಸ್ತರಿಗೆ `ಕೈ’ ಕೊಟ್ಟ ಕೇಂದ್ರ!

ತಿರುವನಂತಪುರ: ದೇವರ ನಾಡೆಂದೇ ಕರೆಸಿಕೊಳ್ಳುವ ಕೇರಳದ ವಯನಾಡು ಪ್ರದೇಶದಲ್ಲಿ ಭೂಕುಸಿತ ಸಂಭವಿಸಿ ಅಪಾರ ಸಾವು-ನೋವಾಗಿ ತಿಂಗಳುಗಳೇ ಕಳೆದರೂ ರಾಜಕೀಯ ಜಂಜಾಟ ಮಾತ್ರ ಇನ್ನೂ ನಿಂತಿಲ್ಲ.

ಭೂಕುಸಿತ ಸಂತ್ರಸ್ತರಿಗೆ ಮರು ವಸತಿ ಮತ್ತಿತರ ಪರಿಹಾರ ಕಾರ್ಯಗಳಿಗೆ ಕೊಡಬೇಕಿದ್ದ ನೆರವಿನ ಹಣವನ್ನು ಕೊಡದೇ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರವು ಆಟವಾಡಿಸುತ್ತಿದೆ.

ವಯನಾಡ್ ಭೂಕುಸಿತ ದುರಂತದ ಸಂತ್ರಸ್ತರ ಪುನರ್ವಸತಿಗಾಗಿ ಕೇಂದ್ರದಿಂದ ಯಾವುದೇ ನೆರವು ಬಂದಿಲ್ಲ. ಆದರೆ ಮುಖ್ಯಮಂತ್ರಿಗಳ ವಿಪತ್ತು ಪರಿಹಾರ ನಿಧಿಗೆ ಬಂದಿರುವ 712.89 ಕೋಟಿ ರೂ.ಗಳನ್ನು ಬಳಸಲಾಗುವುದು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗುರುವಾರ ಹೇಳಿದ್ದಾರೆ.

ಭೂಕುಸಿತ ಸಂತ್ರಸ್ತರ ಪುನರ್ವಸತಿಗಾಗಿ ರಾಜ್ಯವು ಆರಂಭದಲ್ಲಿ ಕೇಂದ್ರದಿಂದ 2,221 ಕೋಟಿ ರೂ. ಮೊತ್ತವನ್ನು ಕೋರಿತ್ತು. ಆದರೆ ವಿಪತ್ತಿನ ನಂತರದ ಅಗತ್ಯಗಳ ಮೌಲ್ಯಮಾಪನ (ಪಿಡಿಎನ್‌ಎ) ವರದಿಯ ಪ್ರಕಾರ, ಹೆಚ್ಚಿನ ಪರಿಹಾರವನ್ನು ನಿರೀಕ್ಷಿಸಲಾಗಿದೆ.

ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಕುರುಕ್ಕೋಳಿ ಮೊಯ್ದೀನ್ ಅವರು ಕೇಳಿದ ಪ್ರಶ್ನೆಗೆ ಸಿಎಂ ವಿವರವಾದ ಉತ್ತರ ನೀಡಿದ್ದಾರೆ.

ಸಿಎಂಡಿಆರ್‌ಎಫ್‌ನಲ್ಲಿ ಬಂದಿರುವ ಹಣವನ್ನು ಸಂತ್ರಸ್ತರ ಅನುಕೂಲಕ್ಕಾಗಿ ಬಳಸಲಾಗುವುದು ಮತ್ತು ಪುನರ್ವಸತಿ ಪ್ರಕ್ರಿಯೆಯನ್ನು ಶೀಘ್ರವಾಗಿ ಪೂರ್ಣಗೊಳಿಸಲಾಗುವುದು ಎಂದು ವಿಜಯನ್ ಭರವಸೆ ನೀಡಿದ್ದಾರೆ. ಅಲ್ಲದೇ ಉದ್ದೇಶಿತ ಟೌನ್‌ಶಿಪ್‌ಗಳ ಹೊರಗೆ ಉಳಿಯಲು ಬಯಸುವ ವ್ಯಕ್ತಿಗಳಿಗೆ ತಲಾ 15 ಲಕ್ಷ ರೂ. ನೀಡಲಾಗುವುದು ಎಂದೂ ಅವರು ಹೇಳಿದ್ದಾರೆ.

“ಕೇಂದ್ರ ಸರ್ಕಾರವು ವಯನಾಡು ಭೂಕುಸಿತವನ್ನು ‘ತೀವ್ರ ಸ್ವರೂಪದ ವಿಪತ್ತು’ ಎಂದು ಘೋಷಿಸಿರುವುದರಿಂದ, ದೇಶಾದ್ಯಂತದ ಸಂಸದರು 1 ಕೋಟಿ ರೂ.ಗಳವರೆಗೆ ದೇಣಿಗೆ ನೀಡಬಹುದಾಗಿದೆ. ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಸಹಾಯ ಕೋರಿ ನಾನು ಈಗಾಗಲೇ ದೇಶದ ಎಲ್ಲಾ ಸಂಸದರಿಗೆ ಪತ್ರ ಬರೆದಿದ್ದೇನೆ” ಎಂದು ವಿಜಯನ್ ಅವರು ಹೇಳಿದರು.

ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಯುಡಿಎಫ್ ಶಾಸಕ ಕುರುಕೋಲಿ ಮೊಯಿದ್ದೀನ್ ಅವರು ವಯನಾಡ್ ಪ್ಯಾಕೇಜ್‌ಗೆ ಪಡೆದ ಮೊತ್ತದ ಬಗ್ಗೆ ಕೇಳಿದ ಪ್ರಶ್ನೆಗೆ ಸಿಎಂ ಉತ್ತರಿಸುತ್ತಿದ್ದರು.

2024ರ ಜುಲೈ 30ರಂದು ನಡೆದ ಈ ದುರಂತದಲ್ಲಿ ಪುಂಜಿರಿಮಟ್ಟಂ, ಚೂರಲ್ಮಲ ಹಾಗೂ ಮುಂಡಕ್ಕೈ ಎನ್ನುವ ಮೂರು ಗ್ರಾಮಗಳು ನಾಮಾವಾಶೇಷವಾಗಿದ್ದವು. 200ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments