Saturday, May 16, 2026
Google search engine
Homeದೇಶನಾಳೆಯಿಂದ ಸಿಬಿಎಸ್ ಇ 10, 12ನೇ ತರಗತಿ ಪರೀಕ್ಷೆ: ಮಾರ್ಗಸೂಚಿ ಪ್ರಕಟ

ನಾಳೆಯಿಂದ ಸಿಬಿಎಸ್ ಇ 10, 12ನೇ ತರಗತಿ ಪರೀಕ್ಷೆ: ಮಾರ್ಗಸೂಚಿ ಪ್ರಕಟ

ದೇಶಾದ್ಯಂತ ಸಿಬಿಎಸ್ ಇ (ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ) 10 ಮತ್ತು 12ನೇ ತರಗತಿಯ ಪರೀಕ್ಷೆಗಳು ಶನಿವಾರದಿಂದ ಆರಂಭಗೊಳ್ಳಲಿವೆ.

ಫೆಬ್ರವರಿ 15ರಂದು ಆರಂಭಗೊಳ್ಳಲಿರುವ ಪರೀಕ್ಷೆಯಲ್ಲಿ 42 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಭಾರತ ಅಲ್ಲದೇ 26 ವಿದೇಶಗಳಲ್ಲಿ ಸೇರಿದಂತೆ 7842 ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿವೆ.

ಪರೀಕ್ಷೆಗಳು ಸುಲಲಿತವಾಗಿ ನಡೆಯಲು ಫೆಬ್ರವರಿ 14ರಂದು ಮಧ್ಯಾಹ್ನ 2.30ಕ್ಕೆ ಅಧಿಕೃತ ಯೂಟ್ಯೂಬ್ ನಲ್ಲಿ ವೆಬ್ ಕಾಸ್ಟ್ ಮೂಲಕ ಮಾರ್ಗಸೂಚಿಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಗಿದೆ.

ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಸಿಬಿಎಸ್ ಸಿ ಅಡ್ಮಿಟ್ ಕಾರ್ಡ್ ಮತ್ತು ಶಾಲೆಯ ಗುರುತುಪತ್ರ ಕಡ್ಡಾಯವಾಗಿ ತರಬೇಕು.
ಇಂಗ್ಲೀಷ್ ಭಾಷೆ ಮೂಲಕ ಸಿಬಿಎಸ್ ಇ 10ನೇ ತರಗತಿ ಪರೀಕ್ಷೆ ಆರಂಭವಾಗಲಿದ್ದು, ಶನಿವಾರ ಬೆಳಿಗ್ಗೆ 10.30ರಿಂದ ಮಧ್ಯಾಹ್ನ 1.30ರವರೆಗೆ ನಡೆಯಲಿದೆ. 12ನೇ ತರಗತಿ ಪರೀಕ್ಷೆಗಳು ಉದ್ಯಮಶೀಲತೆ ಪತ್ರಿಕೆ ಮೂಲಕ ಆರಂಭವಾಗಲಿದೆ.

10ನೇ ತರಗತಿ ಪರೀಕ್ಷೆಗಳು ಮಾರ್ಚ್ 18ರಂದು ಪೂರ್ಣಗೊಳ್ಳಲಿದ್ದರೆ, 12ನೇ ತರಗತಿ ವಿದ್ಯಾರ್ಥಿಗಳ ಪರೀಕ್ಷೆ ಏಪ್ರಿಲ್ ೪ರಂದು ಅಂತ್ಯಗೊಳ್ಳಲಿವೆ.

ಸಲಹೆಗಳು
ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ. ಏಕಾಗ್ರತೆಯತ್ತ ಗಮನ ಹರಿಸಿ. ಒತ್ತಡ ಬೀಳದಂತೆ ಎಚ್ಚರಿಕೆ ವಹಿಸಿ.

ಮೊದಲ 15 ನಿಮಿಷ ಮುಖ್ಯ

ಪ್ರಶ್ನೆ ಪತ್ರಿಕೆ ನೀಡಿದ ಮೊದಲ 15 ನಿಮಿಷ ಪ್ರಶ್ನೆ ಪತ್ರಿಕೆ ಓದಲು ನೀಡಲಾಗುತ್ತದೆ. ಈ ಸಮಯದಲ್ಲಿ ಸಾಧ್ಯವಾದಷ್ಟು ಬೇಗ ಪ್ರಶ್ನೆ ಪತ್ರಿಕೆ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ. ಅದರಲ್ಲೂ ವಿಭಾಗದ ಪ್ರಶ್ನೆಗಳು, ಫಾರ್ಮುಲಾ ಪ್ರಶ್ನೆಗಳು, ಗೊಂದಲ ಸೃಷ್ಟಿಸುವ ಪ್ರಶ್ನೆಗಳ ಕುರಿತು ಗಮನ ಹರಿಸಿ.

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments