Monday, August 17, 2026
Google search engine
Homeಕ್ರೀಡೆಚಾಂಪಿಯನ್ಸ್ ಟ್ರೋಫಿಯಲ್ಲಿ ಜೋಶ್: 351 ರನ್ ಚೇಸ್ ಮಾಡಿ ದಾಖಲೆ ಬರೆದ ಆಸ್ಟ್ರೇಲಿಯಾ!

ಚಾಂಪಿಯನ್ಸ್ ಟ್ರೋಫಿಯಲ್ಲಿ ಜೋಶ್: 351 ರನ್ ಚೇಸ್ ಮಾಡಿ ದಾಖಲೆ ಬರೆದ ಆಸ್ಟ್ರೇಲಿಯಾ!

ಮಧ್ಯಮ ಕ್ರಮಾಂಕದಲ್ಲಿ ಜೋಶ್ ಇಂಗ್ಲೀಸ್ ಸಿಡಿಸಿದ ಶತಕದ ನೆರವಿನಿಂದ ಇಂಗ್ಲೆಂಡ್ ಒಡ್ಡಿದ 351 ರನ್ ಗಳ ಅಸಾಧ್ಯ ಗುರಿಯನ್ನು ಯಶಸ್ವಿಯಾಗಿ ಬೆಂಬತ್ತುವ ಮೂಲಕ ಆಸ್ಟ್ರೇಲಿಯಾ ತಂಡ ಚಾಂಪಿಯನ್ಸ್ ಟ್ರೋಫಿಯಲ್ಲಿ 5 ವಿಕೆಟ್ ಗಳ ದಾಖಲೆ ಬರೆದಿದೆ.

ಲಾಹೋರ್ ನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡ ಬೆನ್ ಡುಕೆಟ್ ಸಿಡಿಸಿದ 165 ರನ್ ಸಹಾಯದಿಂದ 50 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 351 ರನ್ ಪೇರಿಸಿತು. ಕಠಿಣ ಗುರಿ ಬೆಂಬತ್ತಿದ ಆಸ್ಟ್ರೇಲಿಯಾ ತಂಡ ಜೋಶ್ ಇಂಗ್ಲೀಸ್ ಸಿಡಿಸಿದ ಅಜೇಯ 120 ರನ್ ನೆರವಿನಿಂದ 47.3 ಓವರ್ ಗಳಲ್ಲಿಯೇ 5 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.

ಕಠಿಣ ಗುರಿ ಬೆಂಬತ್ತಿದ ಆಸ್ಟ್ರೇಲಿಯಾ ತಂಡ ಆರಂಭಿಕ ಮ್ಯಾಥ್ಯೂ ಶಾರ್ಟ್ ಗಳಿಸಿದ ಅರ್ಧಶತಕದ ಹೊರತಾಗಿಯೂ ಆರಂಭಿಕ ಆಘಾತಕ್ಕೆ ಒಳಗಾಯಿತು. ಟ್ರಾವಿಸ್ ಹೆಡ್ (6) ಮತ್ತು ನಾಯಕ ಸ್ಟೀವನ್ ಸ್ಮಿತ್ (5) ಪೆವಿಲಿಯನ್ ಸೇರಿಕೊಂಡಾಗ ಶಾರ್ಟ್ ಮತ್ತು ಮಾರ್ಕೂಸ್ ಲ್ಯಾಂಬ್ ಚೇಂಗೆ (47) ಮೂರನೇ ವಿಕೆಟ್ ಗೆ 95 ರನ್ ಜೊತೆಯಾಟ ನಿಭಾಯಿಸಿದರು.

ಇವರಿಬ್ಬರು ಔಟಾದಾಗ ತಂಡ ಮತ್ತೊಮ್ಮೆ ಒತ್ತಡಕ್ಕೆ ಸಿಲುಕಿತು. ಈ ಹಂತದಲ್ಲಿ ತಾಳ್ಮೆಯಿಂದ ಇನಿಂಗ್ಸ್ ಕಟ್ಟಿದ ಜೋಶ್ ಇಂಗ್ಲೀಸ್ ಮತ್ತು ಅಲೆಕ್ಸ್ ಕ್ಯಾರಿ 5ನೇ ವಿಕೆಟ್ ಗೆ 156 ರನ್ ಜೊತೆಯಾಟದಿಂದ ತಂಡದಲ್ಲಿ ಗೆಲುವಿನ ಭರವಸೆ ಮೂಡಿಸಿದರು.

ಕ್ಯಾರಿ 63 ಎಸೆತಗಳಲ್ಲಿ 8 ಬೌಂಡರಿ ಸೇರಿದ 69 ರನ್ ಬಾರಿಸಿ ಔಟಾಗದೇ ಉಳಿದರೆ, ಇಂಗ್ಲೀಸ್ 86 ಎಸೆತಗಳಲ್ಲಿ 8 ಬೌಂಡರಿ ಮತ್ತು 6 ಸಿಕ್ಸರ್ ನೊಂದಿಗೆ 120 ರನ್ ಬಾರಿಸಿ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು. ಕೊನೆಯಲ್ಲಿ ಗ್ಲೆನ್ ಮ್ಯಾಕ್ಸ್ ವೆಲ್ 15 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 32 ರನ್ ಬಾರಿಸಿ ಉತ್ತಮ ಬೆಂಬಲ ನೀಡಿದರು.

ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡ ಆರಂಭಿಕ ಬೆನ್ ಡುಕೆಟ್ ಸಿಡಿಸಿದ 165 ರನ್ ಸಹಾಯದಿಂದ ಬೃಹತ್ ಮೊತ್ತ ದಾಖಲಿಸಿತು. ಡುಕೆಟ್ 143 ಎಸೆತಗಳಲ್ಲಿ 17 ಬೌಂಡರಿ ಮತ್ತು 3 ಸಿಕ್ಸರ್ ಸಹಾಯದಿಂದ ಬೃಹತ್ ಮೊತ್ತ ದಾಖಲಿಸಿದರು.

ಡುಕೆಟ್ ಗೆ ಉತ್ತಮ ಬೆಂಬಲ ನೀಡಿದ ಜೋ ರೂಟ್ 78 ಎಸೆತಗಳಲ್ಲಿ 4 ಬೌಂಡರಿ ಒಳಗೊಂಡ 68 ರನ್ ಬಾರಿಸಿದರು. ಇವರಿಬ್ಬರ ನಂತರ ತಂಡ ನಾಟಕೀಯ ಕುಸಿತ ಅನುಭವಿಸಿದ್ದರಿಂದ ತಂಡ ಇನ್ನೂ ಹೆಚ್ಚು ರನ್ ಗಳಿಸುವ ಅವಕಾಶ ಕಳೆದುಕೊಂಡಿತು. ಆಸ್ಟ್ರೇಲಿಯಾ ಪರ ಬೆನ್ ದ್ವಾರ್ಸೂಸ್ 3 ವಿಕೆಟ್ ಕಿತ್ತರೆ, ಆಡಂ ಜಂಪಾ ಮತ್ತು ಮಾರ್ಕೂಸ್ ತಲಾ 2 ವಿಕೆಟ್ ಗಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments