Sunday, July 12, 2026
Google search engine
Homeಕ್ರೀಡೆಬಿಸಿಸಿಐ ಗುತ್ತಿಗೆ ಪಟ್ಟಿ ಪ್ರಕಟ: ಕನ್ನಡತಿ ಶ್ರೇಯಾಂಕಾಗೆ `ಸಿ’ ದರ್ಜೆ, ಆರ್ ಸಿಬಿ ನಾಯಕಿ ಸ್ಮೃತಿ...

ಬಿಸಿಸಿಐ ಗುತ್ತಿಗೆ ಪಟ್ಟಿ ಪ್ರಕಟ: ಕನ್ನಡತಿ ಶ್ರೇಯಾಂಕಾಗೆ `ಸಿ’ ದರ್ಜೆ, ಆರ್ ಸಿಬಿ ನಾಯಕಿ ಸ್ಮೃತಿ ಮಂದಾನ ‘ಎ’ ದರ್ಜೆ!

ಭಾರತ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್, ಸ್ಮೃತಿ ಮಂದಾನ ಮತ್ತು ದೀಪ್ತಿ ಶರ್ಮ ಬಿಸಿಸಿಐ ಆಟಗಾರ್ತಿಯರ ಗುತ್ತಿಗೆ ಪಟ್ಟಿಯಲ್ಲಿ `ಎ’ ದರ್ಜೆ ನೀಡಿದೆ.

ಬಿಸಿಸಿಐ ಸೋಮವಾರ ಆಟಗಾರ್ತಿಯರ ವಾರ್ಷಿಕ ಗುತ್ತಿಗೆ ಪಟ್ಟಿಯನ್ನು ಪ್ರಕಟಿಸಿದ್ದು, ಶೆಫಾಲಿ ಶರ್ಮ, ರೇಣುಕಾ ಥಾಕೂರ್, ಜೆಮಿಹಾ ರೋಡ್ರಿಗಜ್ ಬಿ ದರ್ಜೆ ಗುತ್ತಿಗೆ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಮಹಿಳಾ ಕ್ರಿಕೆಟಿಗರ ಕೇಂದ್ರೀಯ ಗುತ್ತಿಗೆ ಒಪ್ಪಂದದ ಪ್ರಕಾರ ಎ ದರ್ಜೆಯಲ್ಲಿ ಸ್ಥಾನ ಪಡೆದವರಿಗೆ ವಾರ್ಷಿಕ 50 ಲಕ್ಷ ರೂ., ಬಿ ದರ್ಜೆ ಪಡೆದವರಿಗೆ 30 ಲಕ್ಷ ರೂ. ಹಾಗೂ ಸಿ ದರ್ಜೆ ಪಡೆದವರಿಗೆ 20 ಲಕ್ಷ ರೂ. ಪಂದ್ಯ ಶುಲ್ಕ ದೊರೆಯಲಿದೆ.

ಎ ದರ್ಜೆ ಆಟಗಾರ್ತಿಯರು:

ಹರ್ಮನ್ ಪ್ರೀತ್ ಕೌರ್, ಸ್ಮೃತಿ ಮಂದಾನ ಮತ್ತು ದೀಪ್ತಿ ಶರ್ಮ

ಬಿ ದರ್ಜೆ ಆಟಗಾರ್ತಿಯರು:

ಶೆಫಾಲಿ ಶರ್ಮ, ರೇಣುಕಾ ಥಾಕೂರ್, ಜೆಮಿಹಾ ರೋಡ್ರಿಗಜ್, ರೀಚಾ ಘೋಷ್

ಸಿ ದರ್ಜೆ ಆಟಗಾರ್ತಿಯರು

ಯಸ್ತಿಕಾ ಭಾಟಿಯಾ, ರಾಧಾ ಯಾದವ್, ಶ್ರೇಯಾಂಕ ಪಾಟೀಲ್, ಟೈಟಾಸ್ ಸಾಧು, ಅರುಂಧತಿ ರೆಡ್ಡಿ, ಅಮಂಜೋತ್ ಕೌರ್, ಉಮಾ ಚೆಟ್ರಿ, ಸ್ನೇಹ್ ರಾಣಾ, ಪೂಜಾ ವಸ್ತ್ರಕರ್.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments