Friday, May 15, 2026
Google search engine
Homeದೇಶಅಕ್ರಮವಾಗಿ 11,000 ಕೆಜಿ ಗನ್ ಪೌಡರ್ ಸಂಗ್ರಹಿಸಿದ ಉಗ್ರಾಣದಲ್ಲಿ ಸ್ಫೋಟ!

ಅಕ್ರಮವಾಗಿ 11,000 ಕೆಜಿ ಗನ್ ಪೌಡರ್ ಸಂಗ್ರಹಿಸಿದ ಉಗ್ರಾಣದಲ್ಲಿ ಸ್ಫೋಟ!

ಉಗ್ರಾಣಕ್ಕೆ ಬೆಂಕಿ ಬಿದ್ದು ಅಕ್ರಮವಾಗಿ 11 ಸಾವಿರ ಕೆಜಿ ಗನ್ ಪೌಡರ್ ಸಂಗ್ರಹಿಸಲಾಗಿದ್ದ ಗನ್ ಪೌಡರ್ ಸ್ಫೋಟಗೊಂಡ ಘಟನೆ ಗೋವಾದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಕಳೆದ ವಾರ ದಕ್ಷಿಣ ಗೋವಾದಲ್ಲಿ ಶಸ್ತ್ರಾಸ್ತ್ರ ತಯಾರಿಸುವ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿದ್ದು, ಇಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗಿದ್ದ 11 ಸಾವಿರ ಕೆಜಿ ಗನ್ ಪೌಡರ್ ಸ್ಫೋಟಗೊಂಡು ಭಸ್ಮವಾಗಿದೆ ಎಂಬ ಅಂಶ ತಡವಾಗಿ ಬೆಳಕಿಗೆ ಬಂದಿದೆ.

ಗನ್ ಗಳ ಮ್ಯಾಗ್ ಜೈನ್ ತುಂಬಲು ಗನ್ ಪೌಡರ್ ಅಕ್ರಮವಾಗಿ ಸಂಗ್ರಹಿಸಲಾಗಿತ್ತು. ಯಾವುದೇ ಅನುಮತಿ ಪತ್ರ ಪಡೆದಿರಲಿಲ್ಲ ಎಂದು ಹೇಳಲಾಗಿದೆ.

ಮಾರ್ಚ್ 21ರಂದು ಸಂಭವಿಸಿದ ಸ್ಫೋಟದಲ್ಲಿ ಸುಮಾರು 14.5 ಟನ್ ಗನ್ ಪೌಡರ್ ನಾಶವಾಗಿದೆ. ಸ್ಫೋಟದಿಂದ ಅಕ್ಕಪಕ್ಕದ ಮನೆಗೂ ಕಿಡಿಗಳು ಬಿದ್ದು ಹಾನಿಯಾಗಿವೆ ಎಂದು ಹೇಳಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments