ಚಳ್ಳಕೆರೆ: ತಾಲ್ಲೂಕಿನ ಹೆಗ್ಗೆರೆ ಗ್ರಾಮದ ಫ್ಯಾಕ್ಟರಿ ಸಮೀಪ ರಾಷ್ಟ್ರೀಯ ಹೆದ್ದಾರಿ 150 ಎ ಟೆಂಪೋ ಟ್ರಾವೆಲರ್ ವಾಹನಕ್ಕೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮವಾಗಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು ಏಳು ಮಂದಿಗೆ ಗಂಭೀರ ಗಾಯಗಳಾಗಿವೆ.
ಬೆಂಗಳೂರಿನಿಂದ ತಮ್ಮ ಗ್ರಾಮವಾದ ತಳಕು ಜೆಮ್ಲಾ ನಾಯಕನಹಟ್ಟಿ ಗ್ರಾಮಕ್ಕೆ ಟಿ.ಟಿ ವಾಹನದಲ್ಲಿ ಬರುತ್ತಿರುವಾಗ ಟಿಪ್ಪರ್ ವಾಹನ ಟಿಟಿ ವಾಹನಕ್ಕೆ ಡಿಕ್ಕಿ ಹೊಡೆದಿದೆ.
ಟಿ.ಟಿ ವಾಹನದಲ್ಲಿ ಒಟ್ಟು ಚಾಲಕ ಸೇರಿದಂತೆ ಒಟ್ಟು 10 ಮಂದಿ ಇದ್ದು ಇವರಲ್ಲಿ ಮಾರ ನಾಯ್ಕ್ (46) ಶಂಕರ್ ಬಾಯಿ (65), ಶ್ವೇತಾ, ಎ.(38) ಮೃತಪಟ್ಟಿದ್ದಾರೆ. ಗಾಯಳುಗಳಾದ ಲಕ್ಷ್ಮ ಬಾಯಿ,(75) ಪ್ರಶಾಂತ (38) ಶೈಲಜ 38 ಪುಷ್ಪವತಿ(19) ಟಿ.ಕೆ.ಪ್ರೀತಮ್ ಕುಮಾರ್ (16) ತಿಪ್ಪೇಸ್ವಾಮಿ(43) ಎಂದು ಗುರುತಿಸಲಾಗಿದೆ.
ಗಾಯಳುಗಳನ್ನು ಚಳ್ಳಕೆರೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಚಳ್ಳಕೆರೆ ಪೊಲೀಸರು ಭೇಟಿ ನೀಡಿದ್ದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.



