Monday, June 29, 2026
Google search engine
Homeರಾಜ್ಯನೀರಿಗೆ ಜಾರಿ ಬಿದ್ದ ಮಗು ಉಳಿಸಲು ಹೋದ ಮೂವರು ಮುಳುಗಿ ಸಾವು

ನೀರಿಗೆ ಜಾರಿ ಬಿದ್ದ ಮಗು ಉಳಿಸಲು ಹೋದ ಮೂವರು ಮುಳುಗಿ ಸಾವು

ಬೆಂಗಳೂರು: ಚಿಕ್ಕಬಳ್ಳಾಪುರ ತಾಲೂಕಿನ ಶ್ರೀನಿವಾಸಸಾಗರ ಜಲಾಶಯದಲ್ಲಿ ನೀರಿಗೆ ಜಾರಿ ಬಿದ್ದಿದ್ದ ಮಗು ಉಳಿಸಲು ಹೋದ ಮೂವರು ಮುಳುಗಿ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.

ಚಿಕ್ಕಬಳ್ಳಾಪುರ ನಿವಾಸಿಗಳಾದ ಫರೀನಾ ಬೇಗಂ (35), ಬಶೀರ್ (35) ಮತ್ತು ಬೆಂಗಳೂರಿನ ಮುನಿರೆಡ್ಡಿಪಾಳ್ಯ ನಿವಾಸಿ ಇಮ್ರಾನ್ (45) ಮೃತ ದುರ್ದೈವಿಗಳು. ನೀರಿಗೆ ಜಾರಿ ಬಿದ್ದಿದ್ದ ಮಗು ಉಳಿಸಲು ಹೋಗಿ ಮೂವರು ಮೃತಪಟ್ಟಿದ್ದಾರೆ.

ರಂಜಾನ್ ಹಬ್ಬ ಹಿನ್ನೆಲೆಯಲ್ಲಿ ಪ್ರವಾಸಕ್ಕೆಂದು ಫರೀನಾ ಬೇಗಂ ಮತ್ತು ಅವರ ಸಂಬಂಧಿಕರು ಜಲಾಶಯಕ್ಕೆ ಭೇಟಿ ನೀಡಿದ್ದರು. ಇದಕ್ಕೂ ಮೊದಲು ಮೃತರು ನಂದಿಬೆಟ್ಟಕ್ಕೆ ತೆರಳಬೇಕು ಎಂದು ನಿರ್ಧರಿಸಿದ್ದರು. ಆದರೆ, ನಂದಿಬೆಟ್ಟ ಬಂದ್​ ಆಗಿರುವ ಹಿನ್ನೆಲೆಯಲ್ಲಿ ಶ್ರೀನಿವಾಸಸಾಗರ ಜಲಾಶಯಕ್ಕೆ ಹೋಗಿದ್ದಾರೆ.

ಜಲಾಶಯದ ಬಂಡೆಯ ಮೇಲೆ ಕುಳಿತು ಊಟ ಮಾಡುತ್ತಿದ್ದ ವೇಳೆ, ಪರಿಹಿನ್ ಎಂಬುವರ ಮಗು ಜಾರಿ ನೀರಿಗೆ ಬಿದ್ದಿದ್ದೆ. ಮಗುವನ್ನು ರಕ್ಷಿಸಲು ಹೋಗಿ ಮೂವರು ಮೃತಪಟ್ಟಿದ್ದಾರೆ. ಮಗುವನ್ನು ರಕ್ಷಿಸಲಾಗಿದೆ. ಮತ್ತೋರ್ವನ ಸ್ಥಿತಿ ಚಿಂತಾಜನಕವಾಗಿದೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments