ಹಜ್ ಯಾತ್ರೆಗೆ ಆಗಮಿಸುವ ಭಾರತ ಸೇರಿದಂತೆ 14 ರಾಷ್ಟ್ರಗಳ ವೀಸಾವನ್ನು ಸೌದಿ ಅರೆಬಿಯಾ ತಾತ್ಕಾಲಿಕವಾಗಿ ರದ್ದುಗೊಳಿಸಿದೆ.
ಮೆಕ್ಕಾ ಯಾತ್ರೆಗೆ ತೆರೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಉದ್ಯಮಿ ಕುಟುಂಬ ಸೇರಿದಂತೆ ಹಲವು ದೇಶ ಹಾಗೂ ಸಮುದಾಯಗಳಿಗೆ ಜೂನ್ ಮಧ್ಯಭಾಗದವರೆಗೆ ವೀಸಾ ರದ್ದುಗೊಳಿಸಲಾಗಿದೆ.
ಸೂಕ್ತ ದಾಖಲಾತಿ ಇಲ್ಲದೇ ಹಜ್ ಗೆ ಭೇಟಿ ನೀಡುವವರಿಗೆ ಕಡಿವಾಣ ಹಾಕುವ ಉದ್ದೇಶದಿಂದ ತಾತ್ಕಾಲಿಕವಾಗಿ 14 ರಾಷ್ಟ್ರಗಳ ವೀಸಾ ರದ್ದುಗೊಳಿಸಲಾಗಿದೆ. ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಈಜಿಪ್ಟ್, ಇಂಡೋನೇಷ್ಯಾ, ಇರಾಕ್, ನೈಜಿರಿಯಾ, ಜೋರ್ಡಾನ್, ಅಲ್ಜೆರಿಯಾ, ಸುಡಾನ್, ಇಥಿಯೋಪಿಯಾ, ಟುನೆಷಿಯಾ, ಯೆಮೆನ್ ಮತ್ತು ಮೊರಾಕ್ಕೊ ದೇಶಗಳ ವೀಸಾ ರದ್ದುಗೊಳಿಸಲಾಗಿದೆ.



