Friday, May 15, 2026
Google search engine
Homeರಾಜ್ಯಕಾಶ್ಮೀರದಲ್ಲಿ ಸಿಲುಕಿದ್ದ 180 ಕನ್ನಡಿಗರನ್ನು ಸುರಕ್ಷಿತವಾಗಿ ಕರೆತಂದ ಸಚಿವ ಸಂತೋಷ್ ಲಾಎ್

ಕಾಶ್ಮೀರದಲ್ಲಿ ಸಿಲುಕಿದ್ದ 180 ಕನ್ನಡಿಗರನ್ನು ಸುರಕ್ಷಿತವಾಗಿ ಕರೆತಂದ ಸಚಿವ ಸಂತೋಷ್ ಲಾಎ್

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರ ಸೂಚನೆ ಆದೇಶದ ಮೇರೆಗೆ ಕಾಶ್ಮೀರದ ಪಹಲ್ಗಾಮ್ ನಲ್ಲಿ ಸಿಲುಕಿದ್ದ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲಾಗಿದೆ.

ಪಹಲ್ಗಮ್ನಿಂದ ಸುಮಾರು 180 ಕನ್ನಡಿಗರನ್ನು ಸುರಕ್ಷಿತವಾಗಿ ಸಚಿವ ಸಂತೋಷ್ ಲಾಡ್ ಬೆಂಗಳೂರಿಗೆ ಗುರುವಾರ ಮಧ್ಯಾಹ್ನ ವಾಪಸ್ ಕರೆದುಕೊಂಡು ಬಂದರು.

ಸಿಎಂ ಸೂಚನೆ ಮೇರೆಗೆ ಜಮ್ಮು ಕಾಶ್ಮೀರಕ್ಕೆ ಬುಧವಾರ ಬೆಳಗಿನ ಜಾವ 3.00 ಕ್ಕೆ ಜಮ್ಮು ಕಾಶ್ಮೀರಕ್ಕೆ ತೆರಳಿದ್ದ  ಸಚಿವ ಸಂತೋಷ್ ಲಾಡ್ ಉಗ್ರರ ದಾಳಿಯಿಂದ ಆತಂಕಗೊಂಡಿದ್ದ ಕನ್ನಡಿಗರನ್ನು ವಾಪಸ್ ಕರೆತಂದರು.

ಇಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸುರಕ್ಷಿತವಾಗಿ ಕನ್ನಡಿಗರನ್ನು ಕರೆತಂದಿದ್ದು, ನಂತರ ಅವರು ತಮ್ಮ ತವರಿಗೆ ಮರಳಲಿದ್ದಾರೆ.

ಬುಧವಾರ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಕರ್ನಾಟಕದ ಮೂವರು ಸೇರಿದಂತೆ 26 ಮಂದಿ ಅಸುನೀಗಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments