ಅಕ್ರಮವಾಗಿ ಭಾರತದ ಗಡಿ ಪ್ರವೇಶಿಸಿದ್ದ ಪಾಕಿಸ್ತಾನದ ರೇಂಜರ್ ನನ್ನು ಭಾರತೀಯ ಭದ್ರತಾ ಸಿಬ್ಬಂದಿ ರಾಜಸ್ಥಾನ್ ನಲ್ಲಿ ಬಂಧಿಸಿದೆ.
ಕೆಲವು ದಿನಗಳ ಹಿಂದೆಯಷ್ಟೇ ಭಾರತೀಯ ಗಡಿ ಭದ್ರತಾ ಪಡೆಯ ಯೋಧ ಗಡಿ ದಾಟಿದ್ದಕ್ಕಾಗಿ ಪಾಕಿಸ್ತಾನಿ ಸೇನೆ ಬಂಧಿಸಿದ ಬೆನ್ನಲ್ಲೇ ಇದೀಗ ಭಾರತೀಯ ಭದ್ರತಾ ಸಿಬ್ಬಂದಿ ಪಾಕಿಸ್ತಾನಿ ಯೋಧನನ್ನು ವಶಕ್ಕೆ ಪಡೆದಿದೆ.
ಪೆಹಲ್ಗಾಮ್ ದಾಳಿ ನಂತರ ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಎರಡೂ ದೇಶಗಳ ಗಡಿಯಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಅಲ್ಲದೇ ಪಾಕಿಸ್ತಾನ ಪದೇಪದೆ ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸುತ್ತಿದೆ.
ಬಂಧಿಸಲಾದ ಪಾಕಿಸ್ತಾನ ರೇಂಜರ್ ಅವರ ಗುರುತು ಬಹಿರಂಗಪಡಿಸಲು ಭದ್ರತಾ ಸಿಬ್ಬಂದಿ ನಿರಾಕರಿಸಿದೆ.



