Monday, May 25, 2026
Google search engine
Homeವಿದೇಶಹಾಂಕಾಂಗ್ ನಲ್ಲಿ ದಿಢೀರ್ ಕೋವಿಡ್ ಸಂಖ್ಯೆ ಹೆಚ್ಚಳ: ಹೊಸ ಅಲೆಯ ಭೀತಿ

ಹಾಂಕಾಂಗ್ ನಲ್ಲಿ ದಿಢೀರ್ ಕೋವಿಡ್ ಸಂಖ್ಯೆ ಹೆಚ್ಚಳ: ಹೊಸ ಅಲೆಯ ಭೀತಿ

ಹಾಂಕಾಂಗ್ ಮತ್ತು ಸಿಂಗಾಪುರದಲ್ಲಿ ದಿಢೀರನೆ ಕೊರೊನಾ ವೈರಸ್ ಸೋಂಕು ಪ್ರಕರಣಗಳಲ್ಲಿ ಏರಿಕೆಯಾಗಿದ್ದು, ಆರೋಗ್ಯಾಧಿಕಾರಿಗಳು ಹೊಸ ಅಲೆಯ ಭೀತಿ ವ್ಯಕ್ತಪಡಿಸಿ ಕಟ್ಟೆಚ್ಚರ ವಹಿಸುವಂತೆ ಸೂಚಿಸಿದ್ದಾರೆ.

ಹಾಂಕಾಂಗ್ ನಲ್ಲಿ ಭಾರೀ ದೊಡ್ಡ ಪ್ರಮಾಣದಲ್ಲಿ ಸೋಂಕು ಹರಡುತ್ತಿದೆ ಎಂದು ನಗರದ ಆರೋಗ್ಯ ಕೇಂದ್ರದ ಸೋಂಕು ವಿಭಾಗದ ಮುಖ್ಯಸ್ಥ ಅಲ್ಬರ್ಟ್ ಅಲು ತಿಳಿಸಿದ್ದಾರೆ.

ಇತ್ತೀಚೆಗೆ ಸೋಂಕಿತರ ಮಾದರಿಯನ್ನು ಪರೀಕ್ಷೆಗೊಳಪಡಿಸಲಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಅತೀ ಹೆಚ್ಚು ಸೋಂಕಿತರು ಕಂಡು ಬಂದಿದ್ದಾರೆ ಎಂದು ಅವರು ಹೇಳಿದ್ದಾರೆ.

ಮೇ 3ರ ವೇಳೆಗೆ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 31ಕ್ಕೆ ಏರಿಕೆಯಾಗಿದೆ. ಇದು ಕಳೆದ ವರ್ಷಕ್ಕಿಂತ ಹೆಚ್ಚಾಗಿದೆ. ಒಳಚರಂಡಿ ವ್ಯವಸ್ಥೆಯಿಂದ ಸೋಂಕು ಹೆಚ್ಚಾಗುತ್ತಿದೆ ಎಂದು ಹೇಳಲಾಗಿದೆ. ಅಲ್ಲದೇ ಸೋಂಕಿತರ ಸಂಖ್ಯೆ ಎರಡು ವರ್ಷಗಳಲ್ಲೇ ಹೆಚ್ಚು ಕಂಡು ಬರುತ್ತಿದೆ.

ಇದೇ ವೇಳೆ ಸಿಂಗಾಪುರದಲ್ಲಿ ಕೋವಿಡ್ ಅಬ್ಬರ ಹೆಚ್ಚಾಗುತ್ತಿದ್ದು, ಒಂದೇ ವಾರದಲ್ಲಿ 14,200 ಹೊಸ ಪ್ರಕರಣಗಳು ಕಂಡು ಬಂದಿದ್ದು, ದಿಢೀರನೆ ಶೇ.28ರಷ್ಟು ಸೋಂಕು ಹೆಚ್ಚಾಗಿದೆ. ಆಸ್ಪತ್ರೆಗೆ ದಾಖಲಾದವರ ಸಂಖ್ಯೆ ಶೇ.30ರಷ್ಟು ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments