Wednesday, July 29, 2026
Google search engine
Homeದೇಶಬಾಂಗ್ಲಾಗೆ ಭಾರತ ಮತ್ತೊಂದು ಬರೆ: ಸಿದ್ಧ ಉಡುಪು ಆಮದಿಗೆ ಭೂಮಾರ್ಗ ಬಂದ್

ಬಾಂಗ್ಲಾಗೆ ಭಾರತ ಮತ್ತೊಂದು ಬರೆ: ಸಿದ್ಧ ಉಡುಪು ಆಮದಿಗೆ ಭೂಮಾರ್ಗ ಬಂದ್

ನವದೆಹಲಿ: ಈಶಾನ್ಯ ಭೂ ಗಡಿಗಳ ಮೂಲಕ ಬಾಂಗ್ಲಾದೇಶದಿಂದ ಆಮದಾಗುವ ಸಿದ್ಧ ಉಡುಪುಗಳು ಮತ್ತು ಇತರ ಉತ್ಪನ್ನಗಳ ಮೇಲೆ ಭಾರತವು ಕಠಿಣ ನಿರ್ಬಂಧಗಳನ್ನು ವಿಧಿಸಿದೆ.

ಈ ಕ್ರಮವು ಅಸ್ಸಾಂ, ಮೇಘಾಲಯ, ತ್ರಿಪುರಾ, ಮಿಜೋರಾಂ ಹಾಗೂ ಪಶ್ಚಿಮ ಬಂಗಾಳದ ಫುಲ್ಬರಿ ಮತ್ತು ಚಂಗ್ರಾಬಂಧದ ಗಡಿ ಕೇಂದ್ರಗಳನ್ನು ಒಳಗೊಂಡಿದೆ.

ಬಾಂಗ್ಲಾದೇಶದ ಹಂಗಾಮಿ ಮುಖ್ಯ ಸಲಹೆಗಾರ ಮುಹಮ್ಮದ್ ಯೂನುಸ್ ಅವರ ವಿವಾದಾತ್ಮಕ ಹೇಳಿಕೆಯ ನಂತರ ಈ ನಿಧರ್ಾರ ಕೈಗೊಳ್ಳಲಾಗಿದೆ.

ವಿದೇಶಿ ವ್ಯಾಪಾರದ ಮಹಾನಿದರ್ೆಶನಾಲಯದ ನಿದರ್ೆಶನದ ಮೇರೆಗೆ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಬಾಂಗ್ಲಾದೇಶದಿಂದ ಆಮದಾಗುವ ಹಲವು ಸರಕುಗಳ ಮೇಲೆ ತಕ್ಷಣದಿಂದ ಬಂದರು ನಿರ್ಬಂಧಗಳನ್ನು ಜಾರಿಗೊಳಿಸಿದೆ.

ಈ ನಿರ್ಬಂಧಗಳು ಸಿದ್ಧ ಉಡುಪುಗಳು, ಪ್ಲಾಸ್ಟಿಕ್, ಮೆಲಮೈನ್, ಪೀಠೋಪಕರಣಗಳು, ಜ್ಯೂಸ್ಗಳು, ಕಾಬರ್ೊನೇಟೆಡ್ ಪಾನೀಯಗಳು, ಬೇಕರಿ ಉತ್ಪನ್ನಗಳು, ಮಿಠಾಯಿಗಳು ಮತ್ತು ಸಂಸ್ಕರಿಸಿದ ಆಹಾರಗಳನ್ನು ಒಳಗೊಂಡಿವೆ.

ಈ ಸರಕುಗಳನ್ನು ಈಗ ಕೋಲ್ಕತ್ತಾ ಅಥವಾ ನವ ಶೆವಾ (ಮಹಾರಾಷ್ಟ್ರ) ಬಂದರುಗಳ ಮೂಲಕ ಆಮದು ಮಾಡಬೇಕಾಗುತ್ತದೆ. ಇದರಿಂದ ಸಾಗಣೆ ವೆಚ್ಚ ಹೆಚ್ಚಾಗಲಿದೆ ಮತ್ತು ಬಾಂಗ್ಲಾದೇಶದ ರಫ್ತುದಾರರ ಮೇಲೆ ಒತ್ತಡ ಹೆರಲಿದೆ.

ಇದರ ಜೊತೆಗೆ, ಹಣ್ಣಿನ ಸುವಾಸನೆಯ ಪಾನೀಯಗಳು, ಸಂಸ್ಕರಿಸಿದ ಆಹಾರ, ಹತ್ತಿ ತ್ಯಾಜ್ಯ, ಪಿವಿಡಿ, ಪ್ಲಾಸ್ಟಿಕ್ನ ಸಿದ್ಧ ಉತ್ಪನ್ನಗಳು ಮತ್ತು ಪೀಠೋಪಕರಣಗಳ ಆಮದನ್ನು ಅಸ್ಸಾಂ, ಮೇಘಾಲಯ, ತ್ರಿಪುರಾ, ಮಿಜೋರಾಂ ಹಾಗೂ ಪಶ್ಚಿಮ ಬಂಗಾಳದ ಚಂಗ್ರಾಬಂಧ ಮತ್ತು ಫುಲ್ಬರಿಯ ಭೂ ಗಡಿ ಕಸ್ಟಮ್ಸ್ ಠಾಣೆಗಳು ಮತ್ತು ಸಮಗ್ರ ಗಡಿ ತಪಾಸಣಾ ಕೇಂದ್ರಗಳಲಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಈ ಕ್ರಮವನ್ನು ಬಾಂಗ್ಲಾದೇಶವು ಭಾರತೀಯ ನೂಲು, ಅಕ್ಕಿ ಮತ್ತು ಇತರ ಸರಕುಗಳ ಮೇಲೆ ವಿಧಿಸಿದ ಇತ್ತೀಚಿನ ನಿರ್ಬಂಧಗಳಿಗೆ ಮತ್ತು ಭಾರತೀಯ ಸರಕುಗಳಿಗೆ ಸಾಗಣೆ ಶುಲ್ಕ ವಿಧಿಸಿದ ನಿಧರ್ಾರಕ್ಕೆ ಪ್ರತಿಕ್ರಿಯೆಯಾಗಿಯೂ ಪರಿಗಣಿಸಲಾಗುತ್ತಿದೆ.

ಯೂನುಸ್ರ ವಿವಾದಾತ್ಮಕ ಹೇಳಿಕೆ

ಬಾಂಗ್ಲಾದೇಶದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನುಸ್ ಅವರು ಚೀನಾದಲ್ಲಿ ನೀಡಿದ ಭಾಷಣದಲ್ಲಿ ಭಾರತದ ಈಶಾನ್ಯ ರಾಜ್ಯಗಳನ್ನು “ಸಮುದ್ರ ಸಂಪರ್ಕವಿಲ್ಲದ ಭೂಬಂಧಿತ ಪ್ರದೇಶ” ಎಂದು ವಿವರಿಸಿದ್ದರು.
ಭಾರತದ ಪೂರ್ವ ಭಾಗದಲ್ಲಿರುವ ಏಳು ರಾಜ್ಯಗಳು, ಸೆವೆನ್ ಸಿಸ್ಟಸರ್್ ಎಂದು ಕರೆಯಲ್ಪಡುವ ಈ ಪ್ರದೇಶಕ್ಕೆ ಸಾಗರವನ್ನು ತಲುಪಲು ಯಾವುದೇ ಮಾರ್ಗವಿಲ್ಲ. ಈ ಪ್ರದೇಶಗಳಿಗೆ ನಾವು ಮಾತ್ರ ಸಾಗರದ ರಕ್ಷಕರು ಎಂದು ಅವರು ಹೇಳಿದ್ದರು.

ಈ ಹೇಳಿಕೆಯನ್ನು ಭಾರತ ಸಕಾರಾತ್ಮಕವಾಗಿ ಸ್ವೀಕರಿಸಲಿಲ್ಲ. ಇದಕ್ಕೆ ಪ್ರತಿಕ್ರಿಯೆಯಾಗಿ, ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು, ಈಶಾನ್ಯ ಭಾರತವು ಸಂಪರ್ಕ ಕೇಂದ್ರವಾಗಿ ಹೊರಹೊಮ್ಮುತ್ತಿದೆ ಎಂದು ಒತ್ತಿ ಹೇಳಿದರು. ವ್ಯಾಪಕ ಮೂಲಸೌಕರ್ಯ ಜಾಲಗಳು ಈ ಪ್ರದೇಶವನ್ನು ಬಂಗಾಳ ಕೊಲ್ಲಿಗೆ ಸಂಪಕರ್ಿಸುತ್ತಿವೆ ಎಂದು ಸ್ಪಷ್ಟಪಡಿಸಿ, ಯೂನುಸ್ರ ಭೂಬಂಧಿತ ಎಂಬ ವರ್ಣನೆಯನ್ನು ತಳ್ಳಿಹಾಕಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments