Friday, May 15, 2026
Google search engine
Homeಕ್ರೀಡೆ10 ರನ್ ರೋಚಕ ಜಯ ಸಾಧಿಸಿ ಪ್ಲೇಆಫ್ ಸಮೀಪಿಸಿದ ಪಂಜಾಬ್ ಕಿಂಗ್ಸ್!

10 ರನ್ ರೋಚಕ ಜಯ ಸಾಧಿಸಿ ಪ್ಲೇಆಫ್ ಸಮೀಪಿಸಿದ ಪಂಜಾಬ್ ಕಿಂಗ್ಸ್!

ಪಂಜಾಬ್ ಕಿಂಗ್ಸ್ ತಂಡ 10 ರನ್ ಗಳಿಂದ ರಾಜಸ್ಥಾನ್ ರಾಯಲ್ಸ್ ವಿರುದ್ಧ ರೋಚಕ ಜಯ ಸಾಧಿಸಿ ಐಪಿಎಲ್ ಟಿ-20 ಟೂರ್ನಿಯಲ್ಲಿ 10 ವರ್ಷಗಳ ನಂತರ ಮೊದಲ ಬಾರಿ ಪ್ಲೇಆಫ್ ಪ್ರವೇಶಿಸಲು ಮತ್ತಷ್ಟು ಸಮೀಪ ಸಾಗಿದೆ.

ಜೈಪುರದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 219 ರನ್ ಸಂಪಾದಿಸಿತು. ಕಠಿಣ ಗುರಿ ಬೆಂಬತ್ತಿದ ರಾಜಸ್ಥಾನ್ ರಾಯಲ್ಸ್ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 109 ರನ್ ಗಳಿಸಲಷ್ಟೇ ಶಕ್ತವಾಯಿತು.

ಪಂಜಾಬ್ ಕಿಂಗ್ಸ್ 12 ಪಂದ್ಯಗಳಲ್ಲಿ 8 ಜಯ, 3 ಸೋಲು ಹಾಗೂ ರದ್ದಾದ ಪಂದ್ಯದಿಂದ 1 ಅಂಕ ಸೇರಿದಂತೆ 17 ಅಂಕ ಸಂಪಾದಿಸಿ ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದರೂ ಪ್ಲೇಆಫ್ ನಲ್ಲಿ ತನ್ನ ಸ್ಥಾನ ಖಚಿತಪಡಿಸಿಕೊಂಡಿಲ್ಲ. ಆದರೆ ಪ್ಲೇಆಫ್ ನಲ್ಲಿ ಬಹುತೇಕ ಪ್ರವೇಶಿಸಿದ್ದು, 2014ರ ನಂತರ ಮೊದಲ ಬಾರಿ ಪ್ಲೇಆಫ್ ಪ್ರವೇಶಿಸುವ ಭರವಸೆ ಮೂಡಿಸಿದೆ.

ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಯಶಸ್ವಿ ಜೈಸ್ವಾಲ್ ಮತ್ತು ವೈಭವ್ ಸೂರ್ಯವಂಶಿ ಮೊದಲ ವಿಕೆಟ್ ಗೆ 4.5 ಓವರ್ ಗಳಲ್ಲಿ 76 ರನ್ ರನ್ ಜೊತೆಯಾಟದಿಂದ ಮಿಂಚಿನ ಆರಂಭ ನೀಡಿದರು. ಆದರೆ ನಂತರದ ಬ್ಯಾಟ್ಸ್ ಮನ್ ಗಳು ವಿಕೆಟ್ ಕೈಚೆಲ್ಲಿದ್ದರಿಂದ ತಂಡ ಸೋಲಿನ ಹಾದಿ ಹಿಡಿಯಿತು. ಪಂಜಾಬ್ ಪರ ಮೊದಲ ಪಂದ್ಯವಾಡಿದ ಹರ್ಪೀರ್ ಬ್ರಾರ್ 3 ವಿಕೆಟ್ ಪಡೆದು ಪರಾಜಸ್ಥಾನ್ ಗೆ ಕಡಿವಾಣ ಹಾಕಿದರು.

ವೈಭವ್ ಸೂರ್ಯವಂಶಿ (40 ರನ್, 15 ಎಸೆತ, 4 ಬೌಂಡರಿ, 4 ಸಿಕ್ಸರ್) ಜೈಸ್ವಾಲ್ (50 ರನ್, 25 ಎಸೆತ, 9 ಬೌಂಡರಿ, 1 ಸಿಕ್ಸರ್) ನಂತರ ಮಧ್ಯಮ ಕ್ರಮಾಂಕದಲ್ಲಿ ವಿಕೆಟ್ ಕೀಪರ ಧ್ರುವ ಜುರೆಲ್ 31 ಎಸೆತಗಳಲ್ಲಿ 3 ಬೌಂಡರಿ, 4 ಸಿಕ್ಸರ್ ನೊಂದಿಗೆ 52 ರನ್ ಗಳಿಸಿದರು.

ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ 34 ರನ್ ಗೆ 3 ವಿಕೆಟ್ ಕಳೆದುಕೊಂಡು ತತ್ತರಿಸಿತು. ಈ ಹಂತದಲ್ಲಿ ನೇಹಲ್ ವಧೇರ 37 ಎಸೆತಗಳಲ್ಲಿ 5 ಬೌಂಡರಿ ಮತ್ತು ಸಿಕ್ಸರ್ ಸಿಡಿಸಿ 70 ರನ್ ಸಿಡಿಸಿದರೆ, ಶಶಾಂಕ್ ಸಿಂಗ್ 30 ಎಸೆತಗಳಲ್ಲಿ 5 ಬೌಂಡರಿ ಮತ್ತು 3 ಸಿಕ್ಸರ್ ಒಳಗೊಂಡ 59 ರನ್ ಸಿಡಿಸಿ ತಂಡವನ್ನು ಆಧರಿಸಿದರು. ನಾಯಕ ಶ್ರೇಯಸ್ ಅಯ್ಯರ್ (30) ಮತ್ತು ಅಜಮುಲ್ಲಾಹ್ ಒಮರಾಜಿ (ಅಜೇಯ 21) ತಂಡವನ್ನು 200ರ ಗಡಿ ದಾಟಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments