Sunday, May 17, 2026
Google search engine
Homeಕಾನೂನುಸಿಜೆಐ ಬಿಆರ್ ಗವಾಯಿ ಸನ್ಮಾನ ಸಮಾರಂಭಕ್ಕೆ ಮಹಾರಾಷ್ಟ್ರ ಮುಖ್ಯ ಕಾರ್ಯದರ್ಶಿ, ಡಿಜಿಪಿ ಗೈರು!

ಸಿಜೆಐ ಬಿಆರ್ ಗವಾಯಿ ಸನ್ಮಾನ ಸಮಾರಂಭಕ್ಕೆ ಮಹಾರಾಷ್ಟ್ರ ಮುಖ್ಯ ಕಾರ್ಯದರ್ಶಿ, ಡಿಜಿಪಿ ಗೈರು!

ದೇಶದ ಎರಡನೇ ದಲಿತ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಬಿಆರ್ ಗವಾಯಿ ಅವರ ಸನ್ಮಾನ ಸಮಾರಂಭದಲ್ಲಿ ಮಹಾರಾಷ್ಟ್ರ ಮುಖ್ಯ ನ್ಯಾಯಮೂರ್ತಿ, ಡಿಜಿಪಿ ಹಾಗೂ ಮುಂಬೈ ಪೊಲೀಸ್ ಆಯುಕ್ತ ಗೈರು ಹಾಜರಾಗಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.

ತವರು ಮಹಾರಾಷ್ಟ್ರಕ್ಕೆ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಮೊದಲ ಬಾರಿ ಭೇಟಿ ನೀಡಿದ ಬಿಆರ್ ಗವಾಯಿ ನಂತರ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಜನ್ಮಭೂಮಿಗೆ ಭೇಟಿ ನೀಡಿದರು.

ಬಿಆರ್ ಗವಾಯಿ ಭೇಟಿ ವೇಳೆ ಮಹಾರಾಷ್ಟ್ರ ಬಾರ್ ಕೌನ್ಸಿಲ್ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಭಾಷಣ ಮಾಡುವ ವೇಳೆ ತಮ್ಮ ಭೇಟಿ ವೇಳೆ ರಾಜ್ಯದ ಪ್ರಮುಖ ಮೂವರು ಉನ್ನತಾಧಿಕಾರಿಗಳ ಗೈರು ಹಾಜರಿಯನ್ನು ಪ್ರಸ್ತಾಪಿಸಿದರು.

ಪ್ರಜಾಪ್ರಭುತ್ವದ ಮೂರು ಆಧಾಸ್ತಂಭಗಳು ಸಮಾನವಾಗಿವೆ. ಯಾವುದೇ ಮೇಲಲ್ಲ, ಕೆಳಗೂ ಇಲ್ಲ. ಒಂದು ಸಂಸ್ಥೆ ಮತ್ತೊಂದು ಸಂಸ್ಥೆಯನ್ನು ಕೀಳಾಗಿ ನೋಡಬಾರದು. ಪರಸ್ಪರ ಗೌರವಿಸಬೇಕು ಎಂದರು.

ಮಹಾರಾಷ್ಟ್ರದ ವ್ಯಕ್ತಿಯೊಬ್ಬರು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಸ್ಥಾನವನ್ನು ಮೊದಲ ಬಾರಿ ಅಲಂಕರಿಸಿದ್ದಾರೆ. ಮೊದಲ ಬಾರಿ ತವರಿಗೆ ಮರಳಿದಾಗ ಮಹಾರಾಷ್ಟ್ರದ ಮುಖ್ಯ ಕಾರ್ಯದರ್ಶಿ, ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಮತ್ತು ಪೊಲೀಸ್ ಕಮಿಷನರ್ ಉಪಸ್ಥಿತರಿಲ್ಲ ಅಂದರೆ ಅದು ಅವರು ಅವರದ್ದೇ ಸಂಸ್ಥೆಗೆ ತೋರುವ ಅಗೌರವ. ಪ್ರೊಟೊಕಾಲ್ ಅನ್ನೋದು ಹೊಸ ವಿಷಯ ಅಲ್ಲ. ಅದು ಒಂದು ಸಂಸ್ಥೆ ಮತ್ತೊಂದು ಸಂಸ್ಥೆಯನ್ನು ಗೌರವಿಸುವುದಾಗಿದೆ. ಸಂಸ್ಥೆಗಳು ವ್ಯಕ್ತಿಗಳಿಗೆ ನೀಡಿರುವ ಗೌರವ ಅದು ಎಂದು ಗವಾಯಿ ನುಡಿದರು.

ಒಂದು ಸಂಸ್ಥೆಯ ಉನ್ನತ ಸ್ಥಾನದಲ್ಲಿರುವವರು ತಮ್ಮ ಊರಿಗೆ ಬಂದಾಗ ಗುರುತಿಸುವುದು ದೊಡ್ಡ ಗೌರವ. ಆರ್ಟಿಕಲ್ 142 ಬಗ್ಗೆ ಮತ್ತೊಮ್ಮೆ ಚರ್ಚೆ ನಡೆಸುವ ಅಗತ್ಯವಿದೆ. ಇದೆಲ್ಲಾ ಸಣ್ಣ ವಿಷಯ. ಆದರೆ ಜನರು ಇದನ್ನು ಗಂಭೀರವಾಗಿ ಗಮನಿಸುತ್ತಿರುತ್ತಾರೆ ಎಂದು ಅವರು ಹೇಳಿದರು.

ಮುಖ್ಯ ನ್ಯಾಯಮೂರ್ತಿ ಗವಾಯಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮಭೂಮಿಗೆ ಭೇಟಿ ನೀಡುವ ಸಂದರ್ಭದಲ್ಲಿ ಈ ಮೂರೂ ಪ್ರಮುಖ ಸಂಸ್ಥೆಗಳ ಉನ್ನತಾಧಿಕಾರಿಗಳು ಉಪಸ್ಥಿತರಿದ್ದರು. ನ್ಯಾಯಮೂರ್ತಿಗಳ ಹೇಳಿಕೆ ಬಗ್ಗೆ ಮುಖ್ಯ ನ್ಯಾಯಮೂರ್ತಿ ಸುಜಾತಾ ಸುನಿಕ್ ಪ್ರತಿಕ್ರಿಯಿಸಲು ನಿರಾಕರಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments