Wednesday, June 10, 2026
Google search engine
Homeಕಾನೂನುದರ್ಶನ್ ಗ್ಯಾಂಗ್‌ನ ಐವರು ಆರೋಪಿಗಳ ಜಾಮೀನು ರದ್ದು ಅರ್ಜಿ ವಜಾ

ದರ್ಶನ್ ಗ್ಯಾಂಗ್‌ನ ಐವರು ಆರೋಪಿಗಳ ಜಾಮೀನು ರದ್ದು ಅರ್ಜಿ ವಜಾ

ಬೆಂಗಳೂರು:ಚಿತ್ರದರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸಹಚರರಾದ ಐವರು ಆರೋಪಿಗಳ ಜಾಮೀನು ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯ ತೀರ್ಪ ಪ್ರಕಟಗೊಂಡಿದೆ.

ನಟ ದರ್ಶನ್ ಗ್ಯಾಂಗ್‌ನ ಪವನ್, ರಾಘವೇಂದ್ರ, ನಂದೀಶ್, ವಿನಯ್ ಹಾಗೂ ಧನರಾಜ್ ಜಾಮೀನು ರದ್ದು ಕೋರಿದ್ದ ಪ್ರಾಸಿಕ್ಯೂಷನ್ ಅರ್ಜಿಯನ್ನು ಹೈಕೋರ್ಟ್  ವಜಾಗೊಳಿಸಿದೆ. ಇದರಿಂದ ಜಾಮೀನಿನ ಮೇಲೆ ಹೊರಗಿರುವ ಈ ಐವರು ಆರೋಪಿಗಳು ನಿರಾಳವಾಗಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಸೇರಿದಂತೆ ಒಟ್ಟು 17 ಮಂದಿ ಆರೋಪಿಗಳಿದ್ದರು. ಅವರಲ್ಲಿ 7 ಮಂದಿ ಆರೋಪಿಗಳ ಜಾಮೀನು ರದ್ದತಿಗೆ ಹೈಕೋರ್ಟ್ ಮೊರೆ ಹೋಗಿತ್ತು. ಈಗ ಐವರು ಆರೋಪಿಗಳಿಗೆ ಹೈಕೋರ್ಟ್‌ನಲ್ಲಿ ಜಯ ಸಿಕ್ಕಂತಾಗಿದ್ದು, ತನಿಖಾ ಸಂಸ್ಥೆಗೆ ಕಾನೂನಾತ್ಮಕವಾಗಿ ಹಿನ್ನಡೆಯಾದಂತಾಗಿದೆ.

ಈ ಆರೋಪಿಗಳು ಹೊರಬಂದಲ್ಲಿ ಸಾಕ್ಷ್ಯನಾಶಪಡಿಸುವ ಸಾಧ್ಯತೆಯಿದೆ ಎಂದು ವಾದಿಸಲಾಗಿತ್ತು. ಬುಧವಾರ ಪ್ರಾಸಿಕ್ಯೂಷನ್‌ ಅರ್ಜಿಯನ್ನು ವಜಾಗೊಳಿಸಿದ್ದು, ಆರೋಪಿಗಳ ಜಾಮೀನನ್ನು ಎತ್ತಿ ಹಿಡಿದಿದೆ.

ಸುಪ್ರೀಂ ಕೋರ್ಟ್ ಇತ್ತೀಚೆಗಷ್ಟೇ ದರ್ಶನ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಇದರಿಂದ ದರ್ಶನ್ ಪತ್ನಿ ವಿಜಯಲಕ್ಷ್ಮೀ ಭಾವುಕರಾಗಿದ್ದರು. ಕಳೆದ ದಿನಗಳಿಂದ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಭಾವುಕ ಪೋಸ್ಟ್‌ಗಳನ್ನ ಹಂಚಿಕೊಳ್ಳುವ ಮೂಲಕ ವಿಜಯಲಕ್ಷ್ಮೀ ದರ್ಶನ್ ಅವರು ತಮ್ಮ ನೋವು, ಅಸಮಾಧಾನ, ಬೇಸರವನ್ನ ಹೊರಹಾಕಿದ್ದರು. ಡಾಟಕ್ಕೆ ಬ್ರೇಕ್‌ ಹಾಕಲು ಪ್ರಾಸಿಕ್ಯೂಷನ್ ಈ ಕಾನೂನು ಹೋರಾಟವನ್ನು ಆರಂಭಿಸಿತ್ತು.

ಮೊದಲ ಬಾರಿ 2024 ಜೂನ್ 11 ರಂದು ಮೈಸೂರಿನಲ್ಲಿ ಬಂಧನಕ್ಕೆ ಒಳಗಾಗಿದ್ದ ದರ್ಶನ್ 2024 ಅಕ್ಟೋಬರ್ 30ರ ತನಕ ಅಂದರೆ 131 ದಿನಗಳ ಕಾಲ ಪರಪ್ಪನ ಅಗ್ರಹಾರ ಹಾಗೂ ಬಳ್ಳಾರಿ ಜೈಲಿನಲ್ಲೇ ಇದ್ದರು. ಇದಾದ ಬಳಿಕ ಜಾಮೀನು ಪಡೆದು ಹೊರ ಬಂದಿದ್ದರು.
ಆದರೆ ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನು ರದ್ದು ಆಗಿದ್ದಕ್ಕೆ ಮತ್ತೆ ಆರೋಪಿ ದರ್ಶನ್‌ನ ಬಂಧನವಾಗಿತ್ತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments