Saturday, June 27, 2026
Google search engine
Homeಕ್ರೀಡೆಗಿಲ್-ಸಾಯಿ ದ್ವಿಶತಕದ ಜೊತೆಯಾಟ: ಗುಜರಾತ್ ಜೊತೆ ಆರ್ ಸಿಬಿ, ಪಂಜಾಬ್ ಪ್ಲೇಆಫ್ ಗೆ ಲಗ್ಗೆ

ಗಿಲ್-ಸಾಯಿ ದ್ವಿಶತಕದ ಜೊತೆಯಾಟ: ಗುಜರಾತ್ ಜೊತೆ ಆರ್ ಸಿಬಿ, ಪಂಜಾಬ್ ಪ್ಲೇಆಫ್ ಗೆ ಲಗ್ಗೆ

ಆರಂಭಿಕ ಸಾಯಿ ಸುದರ್ಶನ್ ಚೊಚ್ಚಲ ಶತಕ ಹಾಗೂ ನಾಯಕ ಶುಭಮನ್ ಗಿಲ್ ಅಜೇಯ 93 ರನ್ ಸಿಡಿಸಿ ಅಜೇಯ 200 ರನ್ ಜೊತೆಯಾಟದ ನೆರವಿನಿಂದ ಗುಜರಾತ್ ಟೈಟಾನ್ಸ್ 10 ವಿಕೆಟ್ ಗಳ ಭಾರೀ ಅಂತರದಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿ ಐಪಿಎಲ್ ಟಿ-20 ಟೂರ್ನಿಯಲ್ಲಿ ಅಧಿಕೃತವಾಗಿ ಪ್ಲೇಆಫ್ ಪ್ರವೇಶಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಕೆಎಲ್ ರಾಹುಲ್ ಶತಕದ ಸಾಹಸದಿಂದ ಡೆಲ್ಲಿ ಕ್ಯಾಪಿಟಲ್ಸ್ 3 ವಿಕೆಟ್ ಗೆ 199 ರನ್ ಕಲೆ ಹಾಕಿತು. ಕಠಿಣ ಗುರಿ ಬೆಂಬತ್ತಿದ ಗುಕರಾತ್ ಟೈಟಾನ್ಸ್ ಒಂದು ಓವರ್ ಬಾಕಿ ಇರುವಂತೆಯೇ ವಿಕೆಟ್ ನಷ್ಟವಿಲ್ಲದೇ ಜಯಭೇರಿ ಬಾರಿಸಿತು.

ಈ ಗೆಲುವಿನೊಂದಿಗೆ ಗುಜರಾತ್ ಟೈಟಾನ್ಸ್ 12 ಪಂದ್ಯಗಳಿಂದ 9 ಜಯ ಹಾಗೂ 3 ಸೋಲಿನೊಂದಿಗೆ 18 ಅಂಕ ಸಂಪಾದಿಸಿ ಪ್ಲೇಆಫ್ ಪ್ರವೇಶಿಸಿತು. ಅಲ್ಲದೇ ತಲಾ 17 ಅಂಕ ಸಂಪಾದಿಸಿದ ಆರ್ ಸಿಬಿ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಪ್ಲೇಆಫ್ ನಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಂಡವು. ಇದೀಗ ಉಳಿದ ಒಂದು ಸ್ಥಾನಕ್ಕಾಗಿ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಪೈಪೋಟಿ ನಡೆಸಬೇಕಾಗಿದೆ.

ಪ್ಲೇಆಫ್ ಪ್ರವೇಶಿಸಲು ಕನಿಷ್ಠ 16 ಅಂಕಗಳ ಅಗತ್ಯವಿದ್ದು, ಡೆಲ್ಲಿ ಕ್ಯಾಪಿಟಲ್ಸ್ 12 ಪಂದ್ಯಗಳಲ್ಲಿ 6 ಜಯ ಹಾಗೂ 5 ಸೋಲಿನೊಂದಿಗೆ 13 ಅಂಕ ಸಂಪಾದಿಸಿ ಪ್ಲೇಆಫ್ ರೇಸ್ ಹಾದಿಯನ್ನು ಮತ್ತಷ್ಟು ದುರ್ಗಮಗೊಳಿಸಿಕೊಂಡಿತು.

ಮುಂಬೈ ಇಂಡಿಯನ್ಸ್ 14 ಅಂಕ ಗಳಿಸಿದ್ದು, ಉಳಿದೆರಡು ಪಂದ್ಯ ಗೆದ್ದರೂ 18 ಅಂಕ ಸಂಪಾದಿಸಲಿದೆ. ಮೇ 21ರಂದು ಮುಂಬೈ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಗೆದ್ದರೆ ಮುಂಬೈ ಹೊರಗೆ ಬೀಳಲಿದೆ. ಡೆಲ್ಲಿ ಸೋತರೆ ಪ್ಲೇಆಫ್ ಆಸೆ ಭಗ್ನಗೊಳ್ಳಲಿದೆ. ಲಕ್ನೋ ಸೂಪರ್ ಜೈಂಟ್ಸ್ ತಂಡ ಈ ಫಲಿತಾಂಶದಿಂದ ಟೂರ್ನಿಯಿಂದ ಹೊರಬಿದ್ದಂತಾಗಿದೆ.

ರಾಹುಲ್ ಶತಕ ವ್ಯರ್ಥ: ಗುಜರಾತ್ ಗೆ ಸಾಯಿ ಸುದರ್ಶನ್ ಶತಕದ ಬಲ

ಕಠಿಣ ಗುರಿ ಬೆಂಬತ್ತಿದ ಸಾಯಿ ಸುದರ್ಶನ್ ಮತ್ತು ಶುಭಮನ್ ಗಿಲ್ ದ್ವಿಶತಕದ ಜೊತೆಯಾಟದಿಂದ ಗುಜರಾತ್ ಗೆ 10 ವಿಕೆಟ್ ಗಳ ಸುಲಭ ಜಯ ತಂದುಕೊಟ್ಟರು. ಇದರಿಂದ ಕೆಎಲ್ ರಾಹುಲ್ ಶತಕ ವ್ಯರ್ಥಗೊಂಡಿತು.

ಸಾಯಿ ಸುದರ್ಶನ್ 61 ಎಸೆತಗಳಲ್ಲಿ 12 ಬೌಂಡರಿ ಮತ್ತು 4 ಸಿಕ್ಸರ್ ನೆರವಿನೊಂದಿಗೆ 108 ರನ್ ಬಾರಿಸಿ ಅಜೇಯರಾಗಿ ಉಳಿದರೆ, ಗಿಲ್ 53 ಎಸೆತಗಳಲ್ಲಿ 3 ಬೌಂಡರಿ ಮತ್ತು 7 ಸಿಕ್ಸರ್ ಒಳಗೊಂಡ 93 ರನ್ ಬಾರಿಸಿ ಔಟಾಗದೇ ಉಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments