Tuesday, June 30, 2026
Google search engine
Homeಅಪರಾಧಕಡಿಮೆ ಪಡೆದ ಮಗಳನ್ನು ಹೊಡೆದು ಕೊಂದ ಪಾಪಿ ತಂದೆ!

ಕಡಿಮೆ ಪಡೆದ ಮಗಳನ್ನು ಹೊಡೆದು ಕೊಂದ ಪಾಪಿ ತಂದೆ!

ನೀಟ್ ಪರೀಕ್ಷೆಗೆ ನಡೆದ ಅಭ್ಯಾಸ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದ 17 ವರ್ಷದ ಮಗಳನ್ನು ತಂದೆಯೇ ಹೊಡೆದು ಕೊಂದ ಆಘಾತಕಾರಿ ಘಟನೆ ಮಹಾರಾಷ್ಟ್ರದ ಸಾಂಹ್ಲಿಯಲ್ಲಿ ನಡೆದಿದೆ.

ಕಳೆದ ವರ್ಷ 10ನೇ ತರಗತಿಯಲ್ಲಿ ಶೇ. 92.60ರಷ್ಟು ಅಂಕ ಗಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದ ಸಾಧನಾ ಭೋಂಸ್ಲೆ ಈಗ ಕಡಿಮೆ ಅಂಕ ಗಳಿಸಿದ್ದಕ್ಕೆ ಸಾವಿಗೀಡಾಗಿದ್ದಾಳೆ.

ಮುಂದಿನ ವರ್ಷದ ಸ್ಪರ್ಧಾತ್ಮಕ ಪರೀಕ್ಷೆ ಅಥವಾ ನೀಟ್ ಪರೀಕ್ಷೆ ಆಕಾಂಕ್ಷಿಯಾಗಿದ್ದ ಮಗಳು ಅಭ್ಯಾಸ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿದ್ದಾಳೆ ಎಂದು ತಂದೆ ಧೋನ್ ಧೀರಮ್ ಭೋಂಸ್ಲೆ ಮಗಳನ್ನೆ ಹೊಡೆದು ಕೊಂದಿದ್ದಾರೆ.

ಕಡಿಮೆ ಅಂಕ ಬಂದಿದೆ ಅಂತ ದೊಣ್ಣೆಯಿಂದ ಮಗಳನ್ನು ತಂದೆ ಥಳಿಸಿದ್ದಾರೆ. ಇದರಿಂದ ಗಂಭೀರವಾಗಿ ಗಾಯಗೊಂಡ ಮಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಗಳು ಅಸುನೀಗಿದ್ದಾಳೆ.

ಮಗಳು ಕಡಿಮೆ ಅಂಕ ಪಡೆದಿದ್ದಾಳೆ ಅಂತ ಪತಿ ಹೊಡೆದು ಕೊಂದರು ಎಂದು ಪತ್ನಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಮಗಳನ್ನು ಹೊಡೆದು ಕೊಂದಿದ್ದಾಗಿ ವಿಚಾರಣೆ ವೇಳೆ ತಂದೆ ಒಪ್ಪಿಕೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments