Thursday, 29 October 2026 — Kannadavahini
BREAKING NEWS
Uncategorized ನೂತನ ನೀರಾವರಿ ಯೋಜನೆಗಳಿಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ಅಪರಾಧ ಮಡಿಕೇರಿಯಲ್ಲಿ 8 ಬೇಟೆಗಾರರ ಬಂಧನ ವಿದೇಶ ಸ್ಪೇನ್ ನಲ್ಲಿ ಭೀಕರ ರೈಲು ದುರಂತ: 64ಕ್ಕೆ ಏರಿದ ಸಾವಿನ ಸಂಖ್ಯೆ ಕ್ರೀಡೆ 3 ಬಾರಿ ಏಷ್ಯನ್‌ ಚಿನ್ನದ ಪದಕ ವಿಜೇತ ನೀರಜ್‌ ಯಾದವ್‌ ಶವವಾಗಿ ಪತ್ತೆ ರಾಜಕೀಯ ವಿಧಾನ ಪರಿಷತ್ತಿನ 4 ಕ್ಷೇತ್ರಗಳಿಗೆ ಮತದಾನ: 43 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ ಬೆಂಗಳೂರು ಬ್ಲೂ ಲೈನ್ ಮಟ್ರೋ ಕಾಮಗಾರಿ ಶೀಘ್ರ ಮುಗಿಸಿ: ಸಚಿವ ಕೃಷ್ಣ ಬೈರೇಗೌಡ ಸೂಚನೆ ರಾಜ್ಯ ಖಾಸಗಿ ಆಸ್ಪತ್ರೆಗಳ ಸುಲಿಗೆಗೆ ಬ್ರೇಕ್: ನ.1ರಿಂದ ದರಪಟ್ಟಿ ಪ್ರದರ್ಶನ ಕಡ್ಡಾಯ ಅಪರಾಧ ಪತ್ನಿ ಕೊಂದು ರಾಜಕಾಲುವೆಗೆ ಎಸೆದು ಪರಾರಿಯಾಗಿದ್ದ ಪತಿ ಅರೆಸ್ಟ್ Uncategorized ನೂತನ ನೀರಾವರಿ ಯೋಜನೆಗಳಿಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ಅಪರಾಧ ಮಡಿಕೇರಿಯಲ್ಲಿ 8 ಬೇಟೆಗಾರರ ಬಂಧನ ವಿದೇಶ ಸ್ಪೇನ್ ನಲ್ಲಿ ಭೀಕರ ರೈಲು ದುರಂತ: 64ಕ್ಕೆ ಏರಿದ ಸಾವಿನ ಸಂಖ್ಯೆ ಕ್ರೀಡೆ 3 ಬಾರಿ ಏಷ್ಯನ್‌ ಚಿನ್ನದ ಪದಕ ವಿಜೇತ ನೀರಜ್‌ ಯಾದವ್‌ ಶವವಾಗಿ ಪತ್ತೆ ರಾಜಕೀಯ ವಿಧಾನ ಪರಿಷತ್ತಿನ 4 ಕ್ಷೇತ್ರಗಳಿಗೆ ಮತದಾನ: 43 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ ಬೆಂಗಳೂರು ಬ್ಲೂ ಲೈನ್ ಮಟ್ರೋ ಕಾಮಗಾರಿ ಶೀಘ್ರ ಮುಗಿಸಿ: ಸಚಿವ ಕೃಷ್ಣ ಬೈರೇಗೌಡ ಸೂಚನೆ ರಾಜ್ಯ ಖಾಸಗಿ ಆಸ್ಪತ್ರೆಗಳ ಸುಲಿಗೆಗೆ ಬ್ರೇಕ್: ನ.1ರಿಂದ ದರಪಟ್ಟಿ ಪ್ರದರ್ಶನ ಕಡ್ಡಾಯ ಅಪರಾಧ ಪತ್ನಿ ಕೊಂದು ರಾಜಕಾಲುವೆಗೆ ಎಸೆದು ಪರಾರಿಯಾಗಿದ್ದ ಪತಿ ಅರೆಸ್ಟ್
ದೇಶ

GST ಸಂಗ್ರಹದಲ್ಲಿ ಇಳಿಕೆ; UPI ಪಾವತಿ ಕುಸಿತ

Vahini
ವರದಿ: Vahini ಮುಖ್ಯ ಸಂಪಾದಕರು (Chief Editor)
2 ನಿಮಿಷ ಓದು 4 ವೀಕ್ಷಣೆಗಳು
upi
upi

ನವದೆಹಲಿ: ಜೂನ್ನಲ್ಲಿ ನಿವ್ವಳ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸಂಗ್ರಹವು ಮೇ ತಿಂಗಳಿಗೆ ಹೋಲಿಸಿದರೆ ಕುಸಿದಿದೆ ಎಂದು ಸರಕಾರಿ ಮಾಹಿತಿ ತಿಳಿಸಿದೆ.

ಹಣಕಾಸು ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಜೂನ್ನಲ್ಲಿ ನಿವ್ವಳ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸಂಗ್ರಹವು ವರ್ಷದ ಹಿಂದಿನ ಮಟ್ಟಕ್ಕೆ ಮೇ ತಿಂಗಳಿಗೆ ಹೋಲಿಸಿದರೆ ಶೇ.20.4ರಷ್ಟು ಏರಿಕೆಯಾಗಿದ್ದು, ಒಟ್ಟು ಸಂಗ್ರಹ ರೂ.1.59 ಟ್ರಿಲಿಯನ್ಗೆ ತಲುಪಿದೆ. ಆದರೆ, ಕಳೆದ ಮೇ ತಿಂಗಳಿನ ರೂ.1.73 ಟ್ರಿಲಿಯನ್ಗೆ ಹೋಲಿಸಿದರೆ, ಜೂನ್ನಲ್ಲಿ ನಿವ್ವಳ ಜಿಎಸ್ಟಿ ಆದಾಯ ಶೇ.8.09ರಷ್ಟು ಕುಸಿದಿದೆ.

2025-26ರ ಮೊದಲ ತ್ರೈಮಾಸಿಕದಲ್ಲಿ (ಕಿ1) ನಿವ್ವಳ ಜಿಎಸ್ಟಿ ಸಂಗ್ರಹ ಶೇ.10.7ರಷ್ಟು ಏರಿಕೆಯಾಗಿ ರೂ.5.42 ಟ್ರಿಲಿಯನ್ಗೆ ತಲುಪಿದ್ದು, ಒಟ್ಟು ಸಂಗ್ರಹ ಶೇ.12ರಷ್ಟು ಏರಿಕೆಯಾಗಿ ರೂ.6.22 ಟ್ರಿಲಿಯನ್ಗೆ ತಲುಪಿದೆ. ಮೇ ತಿಂಗಳ ವಹಿವಾಟುಗಳ ಆಧಾರದ ಮೇಲೆ ಜೂನ್ನಲ್ಲಿ ಪರೋಕ್ಷ ತೆರಿಗೆಯಿಂದ ಬಂದ ಆದಾಯದ ಮೇಲೆ ಮರುಪಾವತಿಗಳ ಶೇ.28.4ರಷ್ಟು ಏರಿಕೆಯಿಂದ ರೂ.25,491 ಕೋಟಿಗೆ ತಲುಪಿದೆ.

ದೇಶೀಯ ವಹಿವಾಟುಗಳಿಂದ ನಿವ್ವಳ ಸಂಗ್ರಹ ಶೇ.3.7ರಷ್ಟು ಏರಿಕೆಯಾಗಿ ರೂ.1.26 ಟ್ರಿಲಿಯನ್ಗೆ ತಲುಪಿದ್ದು, ಮೇ ತಿಂಗಳಿನ ರೂ.1.31 ಟ್ರಿಲಿಯನ್ಗೆ ಹೋಲಿಸಿದರೆ ಶೇ.9.7ರಷ್ಟು ಏರಿಕೆಯಾಗಿದೆ.

ಮೇ ತಿಂಗಳಲ್ಲಿ ಮರುಪಾವತಿಗಳು ವರ್ಷದಿಂದ ವರ್ಷಕ್ಕೆ ಶೇ.4ರಷ್ಟು ಕುಸಿದು ರೂ.27,210 ಕೋಟಿಗೆ ತಲುಪಿದ್ದವು.ಜೂನ್ನಲ್ಲಿ ಒಟ್ಟು ಜಿಎಸ್ಟಿ ಸಂಗ್ರಹ ಶೇ.6.2ರಷ್ಟು ಏರಿಕೆಯಾಗಿ ರೂ.1.84 ಟ್ರಿಲಿಯನ್ಗೆ ತಲುಪಿದ.
ಆದರೆ ಮೇ ತಿಂಗಳಿನ ರೂ.2.01 ಟ್ರಿಲಿಯನ್ (ಶೇ.16.4ರಷ್ಟು ಬೆಳವಣಿಗೆ) ಗೆ ಹೋಲಿಸಿದರೆ ಕಡಿಮೆಯಾಗಿದೆ.

ಜೂನ್ನಲ್ಲಿ ಒಟ್ಟು ರೂ.25,491 ಕೋಟಿ ಮರುಪಾವತಿಯಲ್ಲಿ, ದೇಶೀಯ ವ್ಯವಹಾರಗಳಿಗೆ ರೂ.12,643 ಕೋಟಿ ಬಿಡುಗಡೆಯಾಗಿದ್ದು, ವರ್ಷದಿಂದ ವರ್ಷಕ್ಕೆ ಶೇ.14.1ರಷ್ಟು ಏರಿಕೆಯಾಗಿದೆ. ರಫ್ತುದಾರರಿಗೆ ರೂ.12,848 ಕೋಟಿ ಮರುಪಾವತಿಯಾಗಿದ್ದು, ಶೇ.46.4ರಷ್ಟು ಏರಿಕೆಯಾಗಿದೆ.

ಯುಪಿಐ ಪಾವತಿಯಲ್ಲಿ ಕುಸಿತ

ಏಕೀಕೃತ ಪಾವತಿ ಇಂಟಫರ್ೆಸ್ (ಯುಪಿಐ) ವಹಿವಾಟುಗಳು ಜೂನ್ನಲ್ಲಿ ಶೇ.1.5ರಷ್ಟು ಕುಸಿದು 18.4 ಬಿಲಿಯನ್ಗೆ ತಲುಪಿದ್ದು, ಮೇ ತಿಂಗಳಿನ 18.68 ಬಿಲಿಯನ್ಗಿಂತ ಕಡಿಮೆಯಾಗಿದೆ.

ವಹಿವಾಟಿನ ಮೌಲ್ಯವು ಶೇ.4ರಷ್ಟು ಕುಸಿದು ರೂ.24.04 ಟ್ರಿಲಿಯನ್ಗೆ ತಲುಪಿದ್ದು, ಮೇ ತಿಂಗಳಿನ ರೂ.25.14 ಟ್ರಿಲಿಯನ್ಗಿಂತ ಕಡಿಮೆಯಾಗಿದೆ. ಆದರೆ, ವರ್ಷದಿಂದ ವರ್ಷಕ್ಕೆ ವಹಿವಾಟುಗಳು ಶೇ.32ರಷ್ಟು ಮತ್ತು ಮೌಲ್ಯ ಶೇ.20ರಷ್ಟು ಏರಿಕೆಯಾಗಿದೆ. ದೈನಂದಿನ ವಹಿವಾಟುಗಳ ಸಂಖ್ಯೆ ಮೇ ತಿಂಗಳ 602 ಮಿಲಿಯನ್ನಿಂದ ಜೂನ್ನಲ್ಲಿ 613 ಮಿಲಿಯನ್ಗೆ ಏರಿಕೆಯಾಗಿದೆ. ಆದರೆ ದೈನಂದಿನ ಮೌಲ್ಯವು ರೂ.81,106 ಕೋಟಿಯಿಂದ ರೂ.80,131 ಕೋಟಿಗೆ ಇಳಿದಿದೆ ಎಂದು ಭಾರತೀಯ ರಾಷ್ಟ್ರೀಯ ಪಾವತಿ ನಿಗಮವು ತಿಳಿಸಿದೆ.

👑

JOIN OUR COMMUNITY

✈️
Get Latest Updates, News, Offers & More
ಮುಖ್ಯ ಸಂಪಾದಕರು (Chief Editor) ✍️ 8392 ಲೇಖನಗಳು

Vahini

Vahini ಅವರು ಸಮಕಾಲೀನ ವಿದ್ಯಮಾನಗಳು, ರಾಜ್ಯ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಬರೆಯುವ ಜವಾಬ್ದಾರಿಯುತ ಲೇಖಕರಾಗಿದ್ದಾರೆ.

Leave a comment