Saturday, May 16, 2026
Google search engine
Homeದೇಶಮೋದಿ ಸಂಪುಟ ಪುನಾರಚನೆ: ಪ್ರಮುಖರಿಗೆ ಸಚಿವ ಸ್ಥಾನ ಕೈ ತಪ್ಪುವ ಭೀತಿ

ಮೋದಿ ಸಂಪುಟ ಪುನಾರಚನೆ: ಪ್ರಮುಖರಿಗೆ ಸಚಿವ ಸ್ಥಾನ ಕೈ ತಪ್ಪುವ ಭೀತಿ

ನವದೆಹಲಿ: ಕೇಂದ್ರ ಸಚಿವ ಸಂಪುಟ ಪುನಾರಚನೆ ಸನ್ನಿಹಿತವಾಗಿದ್ದು, ಹಲವಾರು ಸಚಿವರನ್ನು ಕೈಬಿಡಬಹುದು ಎಂಬ ವದಂತಿಗಳು ಅಧಿಕಾರದ ಕಾರಿಡಾರ್ಗಳಲ್ಲಿ ಹರಿದಾಡುತ್ತಿದೆ.

ಆಗಸ್ಟ್ ಅಂತ್ಯದ ವೇಳೆಗೆ ಸಂಪುಟ ಪುನಾರಚನೆ ನಡೆಯಲಿದೆ ಎಂಬ ಊಹಾಪೋಹಗಳು ಹೆಚ್ಚುತ್ತಿವೆ. ಇದು ಅನೇಕ ಹೊಸ ಮುಖಗಳನ್ನು ಸೇರಿಸಿಕೊಳ್ಳಬಹುದು, ಆದರೆ ಸತತ ಎರಡು ಅವಧಿಯ ಅಧಿಕಾರಾವಧಿಯಲ್ಲಿ ಅತೃಪ್ತಿಕರ ಕಾರ್ಯಕ್ಷಮತೆಯನ್ನು ಹೊಂದಿರುವವರನ್ನು ಕೈಬಿಡಬಹುದು ಎನ್ನಲಾಗುತ್ತಿದೆ.

`ಅನುಭವವನ್ನು ಪರಿಗಣಿಸಿ ಕೆಲ ಸಚಿವರನ್ನು ಸಾಂಸ್ಥಿಕ ಕರ್ತವ್ಯಗಳಿಗೆ ಮರು ನಿಯೋಜಿಸಬಹುದು” ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಸಂಘಟನೆಯೊಳಗೆ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ಅವರ ಪಾತ್ರಗಳನ್ನು ಮರು ವ್ಯಾಖ್ಯಾನಿಸಬಹುದು ಅಥವಾ ಅವರಿಗೆ ವಿಶೇಷ ಪಕ್ಷದ ಹೊಣೆ ನೀಡಬಹುದು ಎಂದು ಅವರು ಹೇಳಿದರು.

ನಿರೀಕ್ಷಿತ ಪುನರ್ರಚನೆಯಲ್ಲಿ, ಅಲ್ಪಸಂಖ್ಯಾತ ವ್ಯವಹಾರಗಳು, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ, ಸಾಮಾಜಿಕ ನ್ಯಾಯ ಮತ್ತು ಈಶಾನ್ಯದ ಅಭಿವೃದ್ಧಿಯಂತಹ ಸಚಿವಾಲಯಗಳಿಗೆ ಪ್ರತ್ಯೇಕ ಸಚಿವರ ನಿಯುಕ್ತಿ ಸಾಧ್ಯತೆ ಇದೆ.

ಹೊಸ ಸಚಿವರನ್ನು ನೇಮಿಸುವುದರೊಂದಿಗೆ ಹಣಕಾಸು ಸಚಿವಾಲಯವು ಹೊಸ ಮಂತ್ರಿಯನ್ನು ಕಾಣಬಹುದು ಎಂಬ ಬಲವಾದ ಊಹಾಪೋಹಗಳಿವೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ರಾಜ್ಯ ಸಚಿವರ ಮಟ್ಟದಲ್ಲಿ ಬದಲಾವಣೆ ಸಾಧ್ಯತೆಯೂ ದಟ್ಟವಾಗಿದೆ ಎಂದು ಮೂಲಗಳು ಹೇಳಿವೆ.

“ಎಂಇಎಯಲ್ಲಿ ಬದಲಾವಣೆಯ ಬಲವಾದ ಸಾಧ್ಯತೆ ಇದೆ, ಕ್ಯಾಬಿನೆಟ್ ಮಟ್ಟದಲ್ಲಿ ಅಲ್ಲದಿದ್ದರೂ, ಖಂಡಿತವಾಗಿಯೂ ಎಂಒಎಸ್ ಮಟ್ಟದಲ್ಲಿ” ಎಂದು ಸಕರ್ಾರದ ಹಿರಿಯ ಮೂಲಗಳು ತಿಳಿಸಿವೆ.
“ಪ್ರತಿಯೊಬ್ಬ ಸಚಿವರ ಕಾರ್ಯಕ್ಷಮತೆಯನ್ನು ಪರಿಶೀಲಿಸಲಾಗುತ್ತಿದೆ, ಏಕೆಂದರೆ ಪ್ರಧಾನಿ ಸಣ್ಣ ಸಡಿಲತೆ ಅಥವಾ ಕಳಪೆ ಕಾರ್ಯಕ್ಷಮತೆಯನ್ನು ಸಹಿಸುವುದಿಲ್ಲ” ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಐಆರ್ಡಿಎಐ ಅಧ್ಯಕ್ಷರಿಗಾಗಿ ಹುಡುಕಾಟ

ಈ ಮಧ್ಯೆ ಕೇಂದ್ರ ಸರಕಾರವು ್ರಮಾಚರ್್ 2025 ರಿಂದ ಖಾಲಿ ಇರುವ ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ (ಐಆರ್ಡಿಎಐ) ಅಧ್ಯಕ್ಷರ ಹುದ್ದೆಯನ್ನು ಭತರ್ಿ ಮಾಡಲು ಸೂಕ್ತ ಅಧಿಕಾರಿಗಾಗಿ ತಲಾಶೆ ಮುಂದುವರಿಸಿದೆ.

ಎಂ.ನಾಗರಾಜು (ಪ್ರಸ್ತುತ ಹಣಕಾಸು ಸೇವೆಗಳ ಇಲಾಖೆಯಲ್ಲಿ), ಅಜಯ್ ಸೇಠ್ (ಹಣಕಾಸು ಕಾರ್ಯದಶರ್ಿ) ಮತ್ತು ಗಿರಿಧರ್ ಅರಮನೆ ಅವರ ಹೆಸರುಗಳು ಸಂಭಾವ್ಯ ಅಭ್ಯಥರ್ಿಗಳಾಗಿ ಹರಿದಾಡುತ್ತಿವೆ.

ನಾಗರಾಜು ಅವರ ಅಪಾರ ಆಡಳಿತಾತ್ಮಕ ಅನುಭವ, ಸಂಬಂಧಿತ ಜವಾಬ್ದಾರಿಗಳ ಜ್ಞಾನ ಮತ್ತು ಕಟ್ಟುನಿಟ್ಟಾದ ಟಾಸ್ಕ್ ಮಾಸ್ಟರ್ ಎಂಬ ಖ್ಯಾತಿಯನ್ನು ಗಮನಿಸಿದರೆ ಅವರು ಮುಂಚೂಣಿಯಲ್ಲಿದ್ದಾರೆ ಎಂದು ಹೇಳಲಾಗುತ್ತದೆ. ನೇಮಕಾತಿ ಈ ಜುಲೈನಲ್ಲಿ ಆಗುವ ಸಾಧ್ಯತೆಯಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments