ಬಾಂಗ್ಲಾದೇಶ ಸಂಸದ ಅನ್ವರುಲ್ ಅಜಿಮ್ ಅವರನ್ನು ಅಕ್ರಮ ವಲಸಿಗ ಭೀಕರವಾಗಿ ಕೊಲೆಗೈದು ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಕೋಲ್ಕತಾದ ವಿವಿದೆಡೆ ಬಿಸಾಡಿರುವುದು ಸಿಐಡಿ ತನಿಖೆ ವೇಳೆ ಬಹಿರಂಗವಾಗಿದೆ.
ವೈದ್ಯಕೀಯ ಚಿಕಿತ್ಸೆಗಾಗಿ ಕೋಲ್ಕತಾಗೆ ಆಗಮಿಸಿದ್ದ ಬೆನ್ನಲ್ಲೇ ಅನ್ವರುಲ್ ಅಜಿಮ್ ನಾಪತ್ತೆಯಾಗಿದ್ದರು. ಪಶ್ಚಿಮ ಬಂಗಾಳ ಸರ್ಕಾರ ಸಿಐಡಿ ತನಿಖೆಗೆ ಆದೇಶಿಸಿತ್ತು.
ತನಿಖೆ ನಡೆಸಿದ ಸಿಐಡಿ ಅನ್ವರುಲ್ ಅಜಿಮ್ ಅವರನ್ನು ಅಕ್ರಮ ವಲಸಿಗನನ್ನು ಬಂಧಿಸಿದ್ದಾರೆ. ಈತ ಅನ್ವರುಲ್ ಅವರನ್ನು ಕೊಂದು ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ನಗರದ ವಿವಿದೆಡೆ ಬಿಸಾಡಿದ್ದ ಎಂದು ತಿಳಿಸಿದೆ.
ಪ್ರಾಣಿಗಳನ್ನು ಕತ್ತರಿಸುವ ಕಟುಕನ ಕೆಲಸ ಮಾಡುತ್ತಿದ್ದ ಜಿಹಾದ್ ಹವಾಲ್ದಾರ್ ಅನ್ವರುಲ್ ಅವರನ್ನು ಹತ್ಯೆ ಮಾಡಿದ್ದು, ಈತ ಬಾಂಗ್ಲಾದೇಶದ ಖುಲಾನಾ ಜಿಲ್ಲೆಯ ಬಾರಖ್ ಪುರ್ ನಿವಾಸಿಯಾಗಿದ್ದು, ಅಕ್ರಮವಾಗಿ ಭಾರತದೊಳಗೆ ನುಸುಳಿ ಮುಂಬೈನಲ್ಲಿ ವಾಸವಾಗಿದ್ದ.
ಹವಾಲ್ದಾರ್ ನನ್ನು ಅವಾಮಿ ಲೀಗ್ ಸಂಸದ ಸ್ನೇಹಿತ ಕೆಲಸಕ್ಕೆ ಇಟ್ಟುಕೊಂಡಿದ್ದು, ಈತ ಅಮೆರಿಕದ ನಿವಾಸಿಯಾಗಿದ್ದಾನೆ. ಈತ ಎರಡು ತಿಂಗಳ ಹಿಂದೆಯಷ್ಟೇ ಕೋಲ್ಕತಾಗೆ ಭೇಟಿ ನೀಡಿದ್ದ ಎಂದು ಸಿಐಡಿ ಪೊಲೀಸರು ತಿಳಿಸಿದ್ದು, ತನಿಖೆ ಮುಂದುವರಿಸಿದ್ದಾರೆ.