Saturday, May 16, 2026
Google search engine
Homeತಾಜಾ ಸುದ್ದಿಸಿಗರೇಟು ಮಾದರಿ ಆಹಾರ ಪೊಟ್ಟಣಗಳ ಪ್ಯಾಕ್ ಮೇಲೂ ಜಾಗೃತಿ ಬರಹ ಕಡ್ಡಾಯ: ಕೇಂದ್ರ ಸರ್ಕಾರ ಮಹತ್ವದ...

ಸಿಗರೇಟು ಮಾದರಿ ಆಹಾರ ಪೊಟ್ಟಣಗಳ ಪ್ಯಾಕ್ ಮೇಲೂ ಜಾಗೃತಿ ಬರಹ ಕಡ್ಡಾಯ: ಕೇಂದ್ರ ಸರ್ಕಾರ ಮಹತ್ವದ ಆದೇಶ

ಧೂಮಪಾನ ಆರೋಗ್ಯಕ್ಕೆ ಹಾನಿಕಾರ. ಸಿಗರೇಟು ಸೇವನೆಯಿಂದ ಕ್ಯಾನ್ಸರ್ ಮುಂತಾದ ಮಾರಣಾಂತಿಕ ಕಾಯಿಲೆಗಳು ಬರುತ್ತವೆ ಎಂದು ಸಿಗರೇಟು ಪ್ಯಾಕ್ ಮೇಲೆ ಬಳಸುವ ಜಾಗೃತಿ ಬರಹ ಮಾದರಿಯಲ್ಲಿ ಆಹಾರ ಪೊಟ್ಟಣಗಳ ಮೇಲೂ ಜಾಗೃತಿ ಬರಹ ಹಾಕಬೇಕು ಎಂದು ಕೇಂದ್ರ ಸರ್ಕಾರ ಆದೇಶಿಸಿದೆ.

ಜನರಲ್ಲಿ ಆರೋಗ್ಯ ಪದ್ಧತಿಯ ಜಾಗೃತಿ ಮೂಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಸಮೋಸ, ಜಿಲೇಬಿ, ವಡಾ ಪಾವ್, ಪಕೋಡಾ ಮತ್ತು ಚಾಯ್ ಬಿಸ್ಕತ್ ಮುಂತಾದ ಪ್ಯಾಕೇಟ್ ಆಹಾರ ಪೊಟ್ಟಣಗಳ ಮೇಲೆ ಜಾಗೃತಿ ಬರಹ ಪ್ರಕಟಿಸಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಆದೇಶ ಹೊರಡಿಸಿದೆ.

ಆಧುನಿಕ ಜೀವನ ಶೈಲಿಯಿಂದ ಆಹಾರ ಪದ್ಧತಿ ಮೇಲೆ ಆಗುತ್ತಿರುವ ದುಷ್ಪರಿಣಾಮಗಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಆಹಾರಗಳಲ್ಲಿ ಹೆಚ್ಚಿನ ಮಟ್ಟದ ಎಣ್ಣೆ, ಸಕ್ಕರೆ ಮತ್ತು ಟ್ರಾನ್ಸ್ ಕೊಬ್ಬಿನಾಂಶ ಬಳಕೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಆದೇಶ ಹೊರಡಿಸಿದೆ.

ಸಿದ್ಧಪಡಿಸಿದ ಆಹಾರ ಪೊಟ್ಟಣಗಳಲ್ಲಿನ ಪೋಷಕಾಂಶಗಳು, ಬೊಜ್ಜಿಗೆ ಕಾರಣವಾಗುವ ಅಂಶಗಳನ್ನು ಕಂಪನಿಗಳು ಪ್ರಕಟಿಸಬೇಕಾಗಿದೆ. ಜನರಲ್ಲಿ ಜಾಗೃತಿ ಮೂಡಿಸುವ ಕೇಂದ್ರದ ಮಹತ್ವದ ಅಭಿಯಾನ ಮಹಾರಾಷ್ಟ್ರದ ನಾಗ್ಪುರದಲ್ಲಿ ಆರಂಭವಾಗುತ್ತಿದೆ.

ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ ಪ್ರಾಯೋಗಿಕವಾಗಿ ನಾಗ್ಪುರದಲ್ಲಿ ಆರಂಭಿಸಲಾಗುತ್ತಿದೆ.
ಶಿಕ್ಷಣ ಸಂಸ್ಥೆಗಳ ಆವರಣದಲ್ಲಿರುವ ಕೆಫೆಟೇರಿಯಾಗಳು ಮತ್ತು ಸಾರ್ವಜನಿಕ ಊಟದ ಸ್ಥಳಗಳು ಆಹಾರ ಕೌಂಟರ್ಗಳ ಪಕ್ಕದಲ್ಲಿ ಪ್ರಕಾಶಮಾನವಾದ, ಓದಲು ಸುಲಭವಾದ ಎಚ್ಚರಿಕೆ ಫಲಕಗಳನ್ನು ಪ್ರದರ್ಶಿಸಲು ಪ್ರಾರಂಭಿಸಲಾಗಿದೆ.

ಕ್ರಮ ಏಕೆ?

ದೇಶದಲ್ಲಿ ಸೇವಿಸುವ ಆಹಾರಗಳ ಮೇಲಿನ ಆಸಕ್ತಿಯಿಂದ ಆರೋಗ್ಯದ ಕಾಳಜಿ ಮರೆಯುತ್ತಿದ್ದಾರೆ. ಇದರಿಂದ ಬೊಜ್ಜು, ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಹೃದ್ರೋಗಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರವು ತಟ್ಟೆಯಲ್ಲಿ ಇರುವ ಆಹಾರ ಎಷ್ಟು ಆರೋಗ್ಯಕರ ಎಂಬ ಅರಿವು ಮೂಡಿಸಲು ಈ ಕ್ರಮಕ್ಕೆ ಮುಂದಾಗಿದೆ.

ಕರಿದ ಮತ್ತು ಸಕ್ಕರೆ ತಿಂಡಿಗಳೇ ಅನಾರೋಗ್ಯಕ್ಕೆ ಕಾರಣ 2050 ರ ವೇಳೆಗೆ, ಅಂದಾಜು 440 ಮಿಲಿಯನ್ ಭಾರತೀಯರು ಅಧಿಕ ತೂಕ ಅಥವಾ ಬೊಜ್ಜು ಹೊಂದಿರಬಹುದು ಎಂದು ದಿ ಲ್ಯಾನ್ಸೆಟ್ ಜರ್ನಲ್ನಲ್ಲಿ ಪ್ರಕಟವಾದ ಜಾಗತಿಕ ವಿಶ್ಲೇಷಣೆ ಅಂದಾಜಿಸಿದೆ.

ಎಚ್ಚರಿಕೆ ಪೋಸ್ಟರ್ಗಳು

ಸಕ್ಕರೆ, ಕೊಬ್ಬು ಮತ್ತು ಟ್ರಾನ್ಸ್ ಕೊಬ್ಬಿನ ಅಂಶದ ಬಗ್ಗೆ ಸ್ಪಷ್ಟ ಮಾಹಿತಿ. ಪದೇ ಪದೇ ಸೇವನೆಯಿಂದ ಉಂಟಾಗುವ ದೀರ್ಘಕಾಲೀನ ಆರೋಗ್ಯ ಅಪಾಯಗಳನ್ನು ವಿವರಿಸುವ ಸಂದೇಶಗಳು ಪ್ರಕಟವಾಗಬೇಕಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments