ಬಾಲಿವುಡ್ ನ ಅತ್ಯಂತ ಜನಪ್ರಿಯ ಹಾಗೂ ಕ್ಲಾಸಿಕ್ ಚಿತ್ರ ಎಂದೇ ಖ್ಯಾತವಾದ ಡಾನ್ ಚಿತ್ರದ ನಿರ್ದೇಶಕ ಚಂದ್ರಾ ಬಾರೋಟ್ ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು.
ಅಮಿತಾಬ್ ಬಚ್ಚನ್ ನಟಿಸಿದ್ದ ಡಾನ್ ಚಿತ್ರ ಹಲವು ಮೈಲುಗಲ್ಲುಗಳನ್ನೇ ಸೃಷ್ಟಿಸಿತ್ತು. ಅಲ್ಲದೇ ಈ ಚಿತ್ರದ ಜನಪ್ರಿಯತೆ ಎಷ್ಟಿತ್ತು ಅಂದರೆ ಎಲ್ಲಾ ಭಾಷೆಗಳಲ್ಲಿ ರಿಮೇಕ್ ಆಗಿದ್ದೂ ಅಲ್ಲದೇ ರೀಮೇಡ್ ಚಿತ್ರದಲ್ಲಿ ಶಾರೂಖ್ ಖಾನ್ ನಟಿಸಿದ್ದರು.
ಕಳೆದ 7 ವರ್ಷಗಳಿಂದ ವಯೋ ಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಚಂದ್ರ ಬಾರೋಟ್ ಭಾನುವಾರ ಬೆಳಿಗ್ಗೆ ನಿಧನರಾಗಿದ್ದು, ನಿಧನದ ವಿಷಯವನ್ನು ತಾಯಿ ಹಾಗೂ ಪುತ್ರಿ ದೀಪಾ ಬಾರೋಟ್ ದೃಢಪಡಿಸಿದ್ದಾರೆ.
ಚಂದ್ರಾ ಬಾರೋಟ್ ಗುರುನಾನಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಚಂದ್ರಾ ಬಾರೋಟ್ ಚೊಚ್ಚಲ ನಿರ್ದೇಶನದ ಚಿತ್ರ ಡಾನ್ ಆಗಿದ್ದು, ನಾರಿಮನ್ ಇರಾನಿ 1972ರಲ್ಲಿ ಜಿಂದಗಿ, ಜಿಂದಗಿ ಚಿತ್ರದಿಂದ ಕೈ ಸುಟ್ಟುಕೊಂಡು ನಷ್ಟದ ಹಾದಿಯಲ್ಲಿದ್ದರು. ಈ ವೇಳೆ ಚಂದ್ರಾ ಬಾರೋಟ್ ತಿರಸ್ಕೃತಗೊಂಡಿದ್ದ ಡಾನ್ ಚಿತ್ರವನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಿದ್ದರು. ಈ ಚಿತ್ರವನ್ನು ಒಪ್ಪಿಕೊಳ್ಳಲು ದೇವಾನಂದ್, ಧರ್ಮೆಂದ್ರ, ಜಿತೇಂದ್ರ ಮುಂತಾದವರು ನಿರಾಕರಿಸಿದ್ದರು.
ಡಾನ್ ಚಿತ್ರದ ನಂತ್ ಆಶ್ರಿತಾ (1989 ಮತ್ತು ಪ್ಯಾರ್ ಬರಾ ದಿಲ್ (1991) ನಿರ್ದೇಸಿದರು. ಆದರೆ ನಂತರ ಅವರು ನಿರ್ದೇಶಿಸಿದ ಎಲ್ಲಾ ಚಿತ್ರಗಳು ಬಿಡುಗಡೆ ಆಗಲಿಲ್ಲ. ಆದರೆ 2006ರಲ್ಲಿ ಫರ್ಹಾ ಅಖ್ತರ್ ನಿರ್ದೇಶನದಲ್ಲಿ ಶಾರೂಖ್ ನಟಿಸಿದ ಡಾನ್ ಹೊಸ ರೂಪದೊಂದಿಗೆ ಬಿಡುಗಡೆ ಆಗಿದ್ದು, ಇದೀಗ ಸರಣಿಯ ಮೂರನೇ ಚಿತ್ರ ಬಿಡುಗಡೆ ಆಗಲಿದ್ದು, ರಣವೀರ್ ಸಿಂಗ್ ನಟಿಸುತ್ತಿದ್ದಾರೆ.



