ಭಾರತದ ಅತೀ ದೊಡ್ಡ ಐಟಿ ಸೇವಾ ಕಂಪನಿಯಾದ ಟಾಟಾ ಕನ್ಸಲ್ಟೇನ್ಸಿ ಸೇವಾ ಕಂಪನಿ 2026 ಆರ್ಥಿಕ ವರ್ಷದ ಅಂತ್ಯದೊಳಗೆ ಶೇ.2ರಷ್ಟು ಉದ್ಯೋಗ ಕಡಿತ ಮಾಡಲು ನಿರ್ಧರಿಸಿದ್ದು, 12,000 ಉದ್ಯೋಗ ಕಳೆದುಕೊಳ್ಳಲಿದ್ದಾರೆ.
ಮಧ್ಯಮ ಮತ್ತು ಹಿರಿಯ ಮ್ಯಾನೇಜ್ ಮೆಂಟ್ ಮಟ್ಟದಲ್ಲಿ ಉದ್ಯೋಗ ಕಡಿತ ಮಾಡಲು ನಿರ್ಧರಿಸಲಾಗಿದ್ದು, ಮಾರುಕಟ್ಟೆ ವಿಭಾಗದಲ್ಲಿ ಉದ್ಯೋಗಿಗಳನ್ನು ಉಳಿಸಿಕೊಳ್ಳಲಿದ್ದು, ಆರ್ಟಿಫಿಯಲ್ ಇಂಟಲಿಜೆನ್ಸಿ ಅಳವಡಿಸಿಕೊಳ್ಳಲಿದ್ದು, ಹೊಸ ಮಾರುಕಟ್ಟೆ ವ್ಯಾಖ್ಯಾನದ ಮೂಲಕ ಆವಿಷ್ಕಾರ ಮಾಡಲು ನಿರ್ಧರಿಸಿದೆ.
289 ಶತಕೋಟಿ ಡಾಲರ್ ಮೌಲ್ಯದ ಟಾಟಾ ಕನ್ಸಲ್ಟನ್ಸೆನ್ಸಿ ಕಂಪನಿ ವಾರಪೂರ್ತಿ ಗ್ರಾಹಕರ ಬೇಡಿಕೆ ಹಾಗೂ ಅಗತ್ಯಗಳ ಕುರಿತು ನೀಡುತ್ತಿರುವ ಸೇವೆಯಲ್ಲಿ ಯಾವುದೇ ವ್ಯಾತ್ಯಾಸ ಆಗದಂತೆ ಉಸ್ತುವಾರಿಗಳ ಮಟ್ಟದಲ್ಲಿ ಉದ್ಯೋಗ ಕಡಿತಕ್ಕೆ ಮುಂದಾಗಿದೆ.
ಗ್ರಾಹಕರಿಂದ ಹೊಸ ಪ್ರಾಜೆಕ್ಟ್ ಗಳು ಬರುತ್ತಿದ್ದು, ಇದನ್ನು ಆರಂಭಿಸುವ ಮುನ್ನ ಉದ್ಯೋಗ ಕಡಿತ ಮಾಡಲಾಗುವುದು. ಇದರಿಂದ ಹೊಸ ಗ್ರಾಹಕರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಅವರು ಹೇಳಿದರು.



