Thursday, May 14, 2026
Google search engine
Homeರಾಜ್ಯ5 ಭ್ರಷ್ಟ ಅಧಿಕಾರಿಗಳ ಮನೆಯಲ್ಲಿ 25 ಕೋಟಿ ರೂ. ಅಕ್ರಮ ಆಸ್ತಿ ಪತ್ತೆ!

5 ಭ್ರಷ್ಟ ಅಧಿಕಾರಿಗಳ ಮನೆಯಲ್ಲಿ 25 ಕೋಟಿ ರೂ. ಅಕ್ರಮ ಆಸ್ತಿ ಪತ್ತೆ!

ಬೆಂಗಳೂರು: ರಾಜ್ಯದ ವಿವಿಧೆಡೆ ಏಕಕಾಲದಲ್ಲಿ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು ಐವರು ಭ್ರಷ್ಟ ಸರ್ಕಾರಿ ಅಧಿಕಾರಿಗಳನ್ನು ಬಲೆಗೆ ಕೆಡವಿ 24 ಕೋಟಿ 44 ಲಕ್ಷ 63 ಸಾವಿರದ 728 ರೂ ಮೌಲ್ಯದ ಅಕ್ರಮ ಆಸ್ತಿಪಾಸ್ತಿ ಪತ್ತೆಹಚ್ಚಿದ್ದಾರೆ. ಬೆಂಗಳೂರು, ಹಾಸನ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಸೇರಿದಂತೆ ಸುಮಾರು 10ಕ್ಕೂ ಹೆಚ್ಚು ಕಡೆ ಕಾರ್ಯಾಚರಣೆ ನಡೆಸಿ

ಭ್ರಷ್ಟ ಅಧಿಕಾರಿಗಳ ಮನೆಗಳಲ್ಲಿ ಅಪಾರ ಪ್ರಮಾಣದ ನಗದು, ಚಿನ್ನಾಭರಣ, ಆಸ್ತಿ ದಾಖಲೆಗಳು ಸೇರಿದಂತೆ 24 ಕೋಟಿ 44 ಲಕ್ಷ 63 ಸಾವಿರದ 728 ರೂ ಮೌಲ್ಯದ ಸಂಪತ್ತನ್ನು ಪತ್ತೆ ಹಚ್ಚಿದ್ದಾರೆ.

ಬೆಂಗಳೂರಿನ ದಾಸರಹಳ್ಳಿ ಉಪವಿಭಾಗದ ಬಿಬಿಎಂಪಿ ಕಂದಾಯ ಅಧಿಕಾರಿ ವೆಂಕಟೇಶ್, ಬಿಡಿಎನಲ್ಲಿ ತೋಟಗರಿಕೆ ವಿಭಾಗದ ಸಹಾಯಕ ನಿರ್ದೇಶಕ ಅಧಿಕಾರಿ ಓಂ ಪ್ರಕಾಶ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹಾಸನ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಜಯಣ್ಣ, ಚಿಕ್ಕಬಳ್ಳಾಪುರ ತಾಲ್ಲೂಕು ಪಂಚಾಯಿತಿ ಕಿರಿಯ ಎಂಜಿನಿಯರ್ ಆಂಜನೇಯ ಮೂರ್ತಿ, ಚಿತ್ರದುರ್ಗದ ತಾಲೂಕು ಆರೋಗ್ಯಾಧಿಕಾರಿ ವೆಂಕಟೇಶ್ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆದಿದೆ.

ದಾಳಿಯ ದೊರೆತ ಆಸ್ತಿಪಾಸ್ತಿ ವಿವರ

ಕೆ. ಓಂಪ್ರಕಾಶ್, ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರು, ಬಿ.ಡಿ.ಎ, ಬೆಂಗಳೂರು.

ಇವರ 5 ಸ್ಥಳಗಳಲ್ಲಿ ಶೋಧ ಕೈಗೊಂಡು 2 ನಿವೇಶನ, 2 ವಾಸದ ಮನೆ 5 ಲಕ್ಷ ನಗದು, 60,96,365 ರೂ ಬೆಲೆಯ ಚಿನ್ನಾಭರಣಗಳು, 34 ಲಕ್ಷ ಮೌಲ್ಯದ ವಾಹನಗಳು 48 ಲಕ್ಷ ಬ್ಯಾಂಕ್ ಠೇವಣಿ ಸೇರಿ 6,26,16,365 ರೂ ಮೌಲ್ಯದ ಸಂಪತ್ತು ಪತ್ತೆ ಹಚ್ಚಲಾಗಿದೆ.

ಎನ್. ವೆಂಕಟೇಶ್, ತೆರಿಗೆ ಮೌಲ್ಯಮಾಪಕ, ಶೆಟ್ಟಿಹಳ್ಳಿ ಉಪ-ವಿಭಾಗ, ಬಿಬಿಎಂಪಿ, ಬೆಂಗಳೂರು.

ಇವರ 4 ಸ್ಥಳಗಳಲ್ಲಿ ಶೋಧ ಕೈಗೊಂಡು 2 ನಿವೇಶನ, 3 ವಾಸದ ಮನೆಗಳು, 1 ಫಾರ್ಮ್ ಹೌಸ್, 6 ಎಕರೆ 17 ಗುಂಟೆ ಕೃಷಿ ಜಮೀನು, 2,80,205 ನಗದು,10,85,059 ಬೆಲೆಯ ಚಿನ್ನಾಭರಣಗಳು,3,85 ಲಕ್ಷ ಬೆಲೆ ಬಾಳುವ 15 ಲಕ್ಷ ಮೌಲ್ಯದ ವಸ್ತುಗಳು ಸೇರಿ 2,57,55,264 ರೂ ಮೌಲ್ಯದ ಅಕ್ರಮ ಆಸ್ತಿಪಾಸ್ತಿ ಪತ್ತೆಯಾಗಿದೆ.

ಡಾ. ವೆಂಕಟೇಶ್ ಜಿ, ತಾಲ್ಲೂಕು ವೈಧ್ಯಾಧಿಕಾರಿ, ಹಿರಿಯೂರು ತಾಲ್ಲೂಕು, ಚಿತ್ರದುರ್ಗ ಜಿಲ್ಲೆ.

ಇವರಿಗೆ ಸೇರಿದ 3 ಸ್ಥಳಗಳಲ್ಲಿ ಶೋಧ ಕೈಗೊಂಡು 5 ನಿವೇಶನಗಳು, 2 ವಾಸದ ಮನೆಗಳು, 3 ಎಕರೆ 5 ಗುಂಟೆ ಕೃಷಿ ಜಮೀನು,54,200 ನಗದು, 17,25,300 ಬೆಲೆಯ ಚಿನ್ನಾಭರಣಗಳು 21,40 ಲಕ್ಷ ಬೆಲೆಯ ವಾಹನಗಳು 28,30,250 ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು. ಸೇರಿ 3,54,85,750 ರೂ‌ ಮೌಲ್ಯದ ಸಂಪತ್ತು ಪತ್ತೆ ಮಾಡಲಾಗಿದೆ.

ಜಯಣ್ಣ. ಆರ್, ಕಾರ್ಯಪಾಲಕ ಅಭಿಯಂತರರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಹಾಸನ ವಿಭಾಗ,

ಇವರಿಗೆ ಸೇರಿದ 5 ಸ್ಥಳಗಳಲ್ಲಿ ಶೋಧ ನಡೆಸಿ 17 ನಿವೇಶನಗಳು, 8 ವಾಸದ ಮನೆಗಳು, 1 ಎಕರೆ 36 ಗುಂಟೆ ಕೃಷಿ ಜಮೀನು, 1,36‌ ಲಕ್ಷ ನಗದು,18,99,600 ಬೆಲೆಯ ಚಿನ್ನ,26 ಲಕ್ಷ- ಬೆಲೆಯವಾಹನಗಳು,23ಲಕ್ಷ ಡೆಪಾಸಿಟ್ ಮತ್ತು ಲಾಕರ್ಸ್ ಸೇರಿ 6,28,95,349 ರೂ ಮೌಲ್ಯದ ಆಸ್ತಿಪಾಸ್ತಿ ಪತ್ತೆಯಾಗಿದೆ.

ಆಂಜನೇಯ ಮೂರ್ತಿ. ಎಂ, ಕಿರಿಯ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ಒಳಚರಂಡಿ ಇಲಾಖೆ, ಗೌರಿಬಿದನೂರು, ಚಿಕ್ಕಬಳ್ಳಾಪುರ ಜಿಲ್ಲೆ

ಇವರಿಗೆ ಸೇರಿದ 8 ಸ್ಥಳಗಳಲ್ಲಿ ಶೋಧ ನಡೆಸಿ 5 ನಿವೇಶನಗಳು, 1 ವಾಸದ ಮನೆ, 1 ವಾಣಿಜ್ಯ ಸಂಕೀರ್ಣ, 50 ಲಕ್ಷ ಮೌಲ್ಯದ ಚಿನ್ನಾಭರಣಗಳು,15,65 ಲಕ್ಷ ಬೆಲೆಯ ವಾಹನಗಳು. 28 ಲಕ್ಷದ ಇತರೆ ವಸ್ತುಗಳು, ಸೇರಿ 5,77 ಕೋಟಿ‌ 11 ಸಾವಿರ ಮೌಲ್ಯದ ಮಾಲುಗಳನ್ನು ಪತ್ತೆಹಚ್ಚಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments