ಮೂರು ತಿಂಗಳ ಕಾಲ ಹಿರಿಯ ವೈದ್ಯೆಯನ್ನು ಡಿಜಿಟಲ್ ಅರೆಸ್ಟ್ ಮೂಲಕ ಗೃಹ ಬಂಧನದಲ್ಲಿರಿದ್ದ ಸೈಬರ್ ವಂಚಕರು 19 ಕೋಟಿ ರೂ. ವಂಚಿಸಿದ ಘಟನೆ ಗುಜರಾತ್ ನಲ್ಲಿ ನಡೆದಿದೆ.
ಗಾಂಧೀನಗರದ ಹಿರಿಯ ವೈದ್ಯೆಯನ್ನು ಮೂರು ತಿಂಗಳ ಕಾಲ ಡಿಜಿಟಲ್ ಅರೆಸ್ಟ್ ಮಾಡಿದ್ದ ಸೈಬರ್ ವಂಚಕರು ಆಕೆಯ ಖಾತೆಯಲ್ಲಿದ್ದ ಹಣ ಮಾತ್ರವಲ್ಲದೇ ಠೇವಣಿ ಇಟ್ಟಿದ್ದ ಮೊತ್ತ, ಚಿನ್ನದ ಮೇಲಿನ ಹೂಡಿಕೆ ಅಲ್ಲದೇ ಆಕೆಯ ಹೆಸರಲ್ಲಿ ಬ್ಯಾಂಕ್ ನಲ್ಲಿ ಸಾಲ ಮಾಡಿದ್ದೂ ಸೇರಿ ಒಟ್ಟಾರೆ 19 ಕೋಟಿ ರೂ. ವಂಚಿಸಲಾಗಿದೆ.
ವೈದ್ಯೆಯಿಂದ ವಂಚಿಸಿದ ಮೊತ್ತ ೩೦ ಭಿನ್ನ ಖಾತೆಗಳಿಗೆ ಹಂಚಿಕೆ ಮಾಡಲಾಗಿದ್ದು, ವಂಚನೆ ಪ್ರಕರಣ ಬೆನ್ನತ್ತಿದ ಪೊಲೀಸರು ಒಬ್ಬನನ್ನು ಬಂಧಿಸಿದ್ದಾರೆ. ಉಳಿದವರಿಗೆ ಶೋಧ ನಡೆದಿದ್ದು, ಕಳೆದುಕೊಂಡ ಹಣ ವಾಪಸ್ ತರಿಸುವ ಬಗ್ಗೆ ಪ್ರಯತ್ನ ನಡೆದಿದೆ.
ಮಹಿಳೆ ಕಳದ ವಾರದ ಪೊಲೀಸರಿಗೆ ದೂರು ನೀಡಿದ್ದು, ದೂರಿನಲ್ಲಿ ಮಾರ್ಚ್ ನಲ್ಲಿ ಮೊದಲ ಬಾರಿ ಕರೆ ಬಂದಿದ್ದು, ನೀವು ಸಂಕಷ್ಟದಲ್ಲಿದ್ದೀರಿ ಎಂದು ಹಲವು ರೀತಿಯಲ್ಲಿ ಸೈಬರ್ ವಂಚಕರು ಟ್ರ್ಯಾಪ್ ಮಾಡಲು ಪ್ರಯತ್ನಿಸಿದ್ದಾರೆ. ಟೆಲಿಕಮ್ಯೂನಿಕೇಷನ್ ಇಲಾಖೆಯ ಜ್ಯೋತಿ ವಿಶ್ವನಾಥನ್ ಎಂದು ಒಬ್ಬ ಮಹಿಳೆ ಪರಿಚಯಿಸಿಕೊಂಡರೆ, ಇನ್ನು ಕೆಲವರು ಸಬ್ ಇನ್ ಸ್ಪೆಕ್ಟರ್ ಮೋಹನ್ ಸಿಂಗ್ ಮತ್ತು ಸರ್ಕಾರಿ ವಕೀಲ ದೀಪಕ್ ಸೈನಿ ಮತ್ತು ವೆಂಕಟೇಶ್ವರ್ ನೋಟರಿ ಪವನ್ ಕುಮಾರ್ ಎಂದು ಪರಿಚಯಿಸಿಕೊಂಡಿದ್ದಾರೆ.
ಇವರೆಲ್ಲರೂ ನಿಮ್ಮ ಮೊಬೈಲ್ ಫೋನ್ ನಿಂದ ಕಳುಹಿಸಲಾಗಿರುವ ಅಸಭ್ಯ ಫೋಟೊಗಳನ್ನು ತೋರಿಸಿದ್ದಾರೆ. ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ವಿವರ ಪಡೆದ ಅವರು ಅಕ್ರಮ ಹಣದ ವ್ಯವಹಾರ ನಡೆದಿದೆ ಎಂದು ಆರೋಪಿಸಿದ್ದರು. ಇದು ವಾಟ್ಸಪ್ ಕಾಲ್ ಮತ್ತು ವೀಡಿಯೋ ಕಾಲ್ ಮೂಲಕ ಹಲವು ಸುತ್ತಿನಲ್ಲಿ ಈ ರೀತಿ ಟ್ರ್ಯಾಪ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಇದೇ ವೇಳೆ ನಕಲಿ ಜಾರಿ ನಿರ್ದೇಶನಾಲಯದ ದಾಖಲೆಗಳನ್ನು ತೋರಿಸಿದ ಸೈಬರ್ ವಂಚಕರು ನಿಮ್ಮ ವಿರುದ್ಧ ವಿದೇಶೀ ಹಣಕಾಸು ವ್ಯವಹಾರಗಳ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಹೇಳಿದರು. ಈ ರೀತಿ ಮಾರ್ಚ್ 15ರಿಂದ ಜೂನ್ 25ರವರೆಗೆ ಡಿಜಿಟಲ್ ಅರೆಸ್ಟ್ ಮಾಡಿದ್ದ ದುಷ್ಕರ್ಮಿಗಳು ಆಸ್ತಿ ವಿವರ ಸೇರಿದಂತೆ ವಿವಿಧ ದಾಖಲೆಗಳನ್ನು ಪಡೆದಿದ್ದಾರೆ. ಆದರೆ ಈ ಆಸ್ತಿಗಳ ಮೇಲೆ ಬ್ಯಾಂಕ್ ಮೇಲೆ ಸಾಲ ಮಾಡಿ ತನಗೆ ವಂಚಿಸಿದ್ದಾರೆ ಎಂದು ಆರೋಪದಲ್ಲಿ ವಿವರಿಸಲಾಗಿದೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸೊಫೋನ್ ಮೂಲಕ ಹಣ ವರ್ಗಾವಣೆ ಮಾಡಿದ್ದ ಲಾಲ್ ಜಿ ಜಯಂತಿಬಾಯ್ ಬಾಲ್ದಾನಿಯಾ ಅವರನ್ನು ಬಂಧಿಸಿದ್ದು, ಉಳಿದವರಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ.



