Tuesday, May 26, 2026
Google search engine
Homeಅಪರಾಧನಟಿ ರಮ್ಯಾಗೆ ಖಾಸಗಿ ಅಂಗದ ವೀಡಿಯೊ ಕಳುಹಿಸಿದವ ಸೇರಿ ನಾಲ್ವರು ಅರೆಸ್ಟ್

ನಟಿ ರಮ್ಯಾಗೆ ಖಾಸಗಿ ಅಂಗದ ವೀಡಿಯೊ ಕಳುಹಿಸಿದವ ಸೇರಿ ನಾಲ್ವರು ಅರೆಸ್ಟ್

ನಟಿ ರಮ್ಯಾಗೆ ಅಶ್ಲೀಲ ಸಂದೇಶ ಕಳುಹಿಸಿದ ಪ್ರಕರಣದ ಬೆನ್ನು ಬಿದ್ದಿರುವ ಸೈಬರ್ ಕ್ರೈಂ ಪೊಲೀಸರು ಮತ್ತೆ ನಾಲ್ವರನ್ನು ಬಂಧಿಸಿದ್ದು, ಬಂಧಿತರ ಸಂಖ್ಯೆ 6ಕ್ಕೇರಿದೆ.

ನಟ ದರ್ಶನ್‌ ಫ್ಯಾನ್ಸ್ ಎಂದು ಹೇಳಿಕೊಂಡು ನಟಿ ರಮ್ಯಾ ಅವರಿಗೆ ಫೇಕ್ ಅಕೌಂಟ್‌ಗಳಿಂದ ಅಶ್ಲೀಲ ಮೆಸೇಜ್ ಕಳುಹಿಸಿರುವ ಪ್ರಕರಣಕ್ಕೆ ಸಂಬಂಧಿಸಿ ವಿವಿಧ ಜಿಲ್ಲೆಗಳ ನಾಲ್ವರನ್ನು ಬಂಧಿಸಿದ್ದಾರೆ.

ಚಿಕ್ಕಮಗಳೂರಿನ ಕಡೂರು ನಿವಾಸಿ ರಾಜೇಶ್, ವಿಜಯನಗರದ ಕುಮ್ಮಟ್ಟಿ ಗ್ರಾಮದ ನಿವಾಸಿ ಓಬಣ್ಣ ಟಿ, ಭುವನ್ ಗೌಡ, ಗಂಗಾಧರ್ ಅವರನ್ನು ಬಂಧಿಸಲಾಗಿದೆ.

ರಾಜೇಶ್ ದರ್ಶನ್ ಮತ್ತು ಧನ್ವೀರ್ ಅಭಿಮಾನಿ ಎಂದು ಬಿಂಬಿಸಿಕೊಂಡಿದ್ದರೆ, ರಾಬರ್ಟ್ ರಾಘವ್ ಎಂಬ ಹೆಸರಿನಲ್ಲಿ ನಕಲಿ ಖಾತೆ ಹೊಂದಿದ್ದ ಓಬಣ್ಣ ಎಂಬಾತನನ್ನು ಬಂಧಿಸಲಾಗಿದೆ.

ನಟಿ ರಮ್ಯಾಗೆ ಅಶ್ಲೀಲ ಮೆಸೇಜ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ 12 ಜನರ ಮಾಹಿತಿಯನ್ನು ಇನ್ಸ್ಟಾಗ್ರಾಂ ಸಂಸ್ಥೆ ಪೊಲೀಸರಿಗೆ ನೀಡಿದೆ. ಉಳಿದ ಆರೋಪಿಗಳಲ್ಲಿ ಕೆಲವರು ಪೋನ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.

ಈ ಆರೋಪಿಗಳಲ್ಲಿ ಕಡೂರು ನಿವಾಸಿ ಆರೋಪಿ ರಾಜೇಶ್ ಅತಿ ಹೆಚ್ಚು ಅಶ್ಲೀಲ ಮೆಸೇಜ್ ಮಾಡಿದ್ದೂ ಅಲ್ಲದೇ ತನ್ನದೇ ಖಾಸಗಿ ಅಂಗಾಂಗ ಫೋಟೊ ಮತ್ತು ವೀಡಿಯೊ ಮಾಡಿ ರಮ್ಯಾಗೆ ಕಳಿಸಿದ್ದ.

ರಮ್ಯಾ 43 ಇನ್ ಸ್ಟಾ ಖಾತೆಗಳ ವಿರುದ್ಧ ದೂರು ನೀಡಿದ್ದು, ಇದೀಗ 6 ಮಂದಿಯನ್ನು ಬಂಧಿಸಲಾಗಿದ್ದು, ಉಳಿದ 37 ಮಂದಿಯ ಶೋಧ ಕಾರ್ಯ ಮುಂದುವರಿದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments