ಎಸಿ ಸ್ಫೋಟಗೊಂಡ ಪರಿಣಾಮ ಒಂದೇ ಕುಟುಂಬದ ಮೂವರು ಹಾಗೂ ಸಾಕು ನಾಯಿ ಮೃತಪಟ್ಟಿದ್ದು, ಜೀವ ರಕ್ಷಿಸಿಕೊಳ್ಳಲು ಮಗ ಕಿಟಕಿಯಿಂದ ಹಾರಿದ ಘಟನೆ ಹರಿಯಾಣದ ಫರಿದಾಬಾದ್ ನಲ್ಲಿ ಸಂಭವಿಸಿದೆ.
ಸಚಿನ್ ಕಪೂರ್, ಪತ್ನಿ ರಿಂಕು ಕಪೂರ್ ಮತ್ತು ಪುತ್ರಿ ಸುಜನ್ ಕಪೂರ್ ಮೃತಪಟ್ಟಿದ್ದಾರೆ.
ಸೋಮವಾರ ಮುಂಜಾನೆ1.30ರ ಸುಮಾರಿಗೆ ಎಸಿ ಸ್ಫೋಟಗೊಂಡಿದ್ದು, ಈ ವೇಳೆ ಕುಟುಂಬದ ಸದಸ್ಯರು ಗಾಢ ನಿದ್ರೆಯಲ್ಲಿದ್ದರು.
ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಕುಟುಂಬ ವಾಸವಾಗಿದ್ದ ಅಂತಸ್ತು ಹಾನಿಗೊಳಗಾಗಿದೆ. ಮೊದಲ ಮಹಡಿ ಖಾಲಿಯಾಗಿದ್ದು, ಯಾರೂ ವಾಸಿಸುತ್ತಿರಲಿಲ್ಲ.
ಘಟನೆಯಲ್ಲಿ ಒಂದೇ ಕೊಠಡಿಯಲ್ಲಿದ್ದ ತಂದೆ-ತಾಯಿ ಮಗಳು ಮೃತಪಟ್ಟಿದ್ದರೆ, ಮತ್ತೊಂದು ಕೊಠಡಿಯಲ್ಲಿದ್ದ ಮಗ ಜೀವ ಉಳಿಸಿಕೊಳ್ಳಲು ಕಿಟಕಿಯಿಂದ ಹಾರಿದ್ಧಾನೆ. ಆದರೆ ಗಂಭೀರವಾಗಿ ಗಾಯಗೊಂಡಿರುವ ಆತನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಭಾರೀ ಸ್ಫೋಟದ ಶಬ್ಧ ಕೇಳಿದ ನಂತರ ಅಕ್ಕಪಕ್ಕದವರು ಧಾವಿಸಿ ಬಂದಿದ್ದಾರೆ. ಮೂರನೇ ಮಹಡಿಯಲ್ಲಿ ವಾಸವಾಗಿದ್ದ ಕುಟುಂಬ ರಕ್ಷಣೆ ಅಸಾಧ್ಯವಾಗಿತ್ತು ಎಂದು ನೆರೆಮನೆಯ ಮಯಾಂಕ್ ಎಂಬಾತ ಹೇಳಿಕೆ ನೀಡಿದ್ದಾರೆ.



