Wednesday, July 1, 2026
Google search engine
Homeದೇಶಡಿಕ್ಕಿ ಹೊಡೆದ ಬಸ್‌ ಗೆ ಬೆಂಕಿ ಹೊತ್ತಿಕೊಂಡು 7 ಮಂದಿ ಸಜೀವದಹನ

ಡಿಕ್ಕಿ ಹೊಡೆದ ಬಸ್‌ ಗೆ ಬೆಂಕಿ ಹೊತ್ತಿಕೊಂಡು 7 ಮಂದಿ ಸಜೀವದಹನ

ಟ್ರೇಲರ್‌ ಗೆ ಸ್ಲೀಪರ್‌ ಬಸ್‌ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡಿದ್ದು, ಇದರಿಂದ ಬಸ್‌ ನಲ್ಲಿ 7 ಪ್ರಯಾಣಿಕರು ಸಜೀವದಹನಗೊಂಡು, 22 ಮಂದಿ ಗಾಯಗೊಂಡ ಭೀಕರ ಘಟನೆ ರಾಜಸ್ಥಾನದ ದೆಹಲಿ-ಮುಂಬೈ ಎಕ್ಸ್‌ ಪ್ರೆಸ್‌ ನಲ್ಲಿ ಸಂಭವಿಸಿದೆ.

ರಾಜಸ್ಥಾನದ ದುಸೆರಾದಲ್ಲಿ ಮಂಗಳವಾರ ತಡರಾತ್ರಿ 2.30ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದ್ದು, ರಿಷಿಕೇಶ್‌ ನಿಂದ ಮಧ್ಯಪ್ರದೇಶದ ಇಂದೋರ್‌ ಗೆ ವೇಗವಾಗಿ ತೆರಳುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಸ್‌ ಹಾಗೂ ಟ್ರೇಲರ್‌ (ಉದ್ದದ ಲಾರಿ)ಗೆ ಡಿಕ್ಕಿ ಹೊಡೆದು ಎರಡೂ ವಾಹನಗಳಲ್ಲಿ ಬೆಂಕಿ ಹೊತ್ತಿಕೊಂಡಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬಸ್‌ ನ ಮೇಲಿನ ಅಂತಸ್ತಿನಲ್ಲಿದ್ದ ಪ್ರಯಾಣಿಕರು ಹೊರಗೆ ಹಾರಿ ಬಿದ್ದಿದ್ದಾರೆ.

ದುರಂತದ ವೇಳೆ ಬಸ್‌ ನಲ್ಲಿ ಬಹುತೇಕ ಪ್ರಯಾಣಿಕರು ಮಲಗಿದ್ದರು. 5 ಮಂದಿ ಬಸ್‌ ಗೆ ಹೊತ್ತಿಕೊಂಡ ಬೆಂಕಿಯಿಂದ ಸಜೀವದಹನಗೊಂಡರೆ, ಇಬ್ಬರು ತಲೆಗೆ ಬಿದ್ದ ಬಲವಾದ ಪೆಟ್ಟಿನಿಂದ ಮೃತಪಟ್ಟಿದ್ದಾರೆ.

ಬಸ್‌ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಮತ್ತು ಮಕ್ಕಳು ಇದ್ದರು ಎನ್ನಲಾಗಿದ್ದು, ಗಾಯಗೊಂಡವರನ್ನು ಸ್ಥಳೀಯ ದುಸೆರಾದ ಆಸ್ಪತ್ರೆಗೆ ದಾಖಲಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments