Thursday, May 14, 2026
Google search engine
Homeಅಪರಾಧ2ನೇ ಮದುವೆ ಬಯಲು ಮಾಡಿದ ಪತ್ನಿ ಕೊಂದ ಪತಿ!

2ನೇ ಮದುವೆ ಬಯಲು ಮಾಡಿದ ಪತ್ನಿ ಕೊಂದ ಪತಿ!

ಮೊದಲ ಮದುವೆ ಮುಚ್ಚಿಟ್ಟು ಮತ್ತೊಬ್ಬಳನ್ನು ಪ್ರೀತಿಸಿ ಮದುವೆಯಾಗಿ ಎರಡನೇ ಮದುವೆ ಬಯಲಾದ ಹಿನ್ನೆಲೆಯಲ್ಲಿ ಆರಂಭವಾದ ದಂಪತಿ ನಡುವಿನ ಜಗಳ ಪತ್ನಿ ಕೊಲೆಯಲ್ಲಿ ಅಂತ್ಯವಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಯಲಹಂಕದ ಕೆಂಚೇನಹಳ್ಳಿ ಗ್ರಾಮದಲ್ಲಿ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸೆಪ್ಟಂಬರ್ 3ರ ಮುಂಜಾನೆ 3 ಗಂಟೆ ವೇಳೆ ಗಂಭೀರವಾಗಿ ಹಲ್ಲೆಗೊಳಗಾಗಿದ್ದ ಅಮೀನಾ (32) ಮೃತಪಟ್ಟಿದ್ದು, ಪತಿ ಸೈದುಲುನನ್ನು ಯಲಹಂಕ ನ್ಯೂಟೌನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೊಲೆಯಾದ ಮಹಿಳೆ ಅಮೀನಾ ಮತ್ತು ಆರೋಪಿ ಸೈದುಲು ಪಶ್ಚಿಮ ಬಂಗಾಳದ 24 ಪರಗಣ ಜಿಲ್ಲೆಯವರು. 2019ರಲ್ಲಿ ಸೈದುಲು ತನ್ನ ಮೊದಲ ಮದುವೆ ವಿಷಯ ಮುಚ್ಚಿಟ್ಟು ಅಮೀನಾಳನ್ನು ಪ್ರೀತಿಸಿ ಮದುವೆಯಾಗಿದ್ದ.

ಗಂಡನಿಗೆ ಈ ಮೊದಲೇ ಮದುವೆಯಾಗಿದ್ಧ ವಿಚಾರ ತಿಳಿದ ಅಮೀನಾ, ಸೈದುಲು ಜೊತೆ ಜಗಳ ಮಾಡಿದ್ದಳು. ಅಮೀನಾ ಕುಟುಂಬಸ್ಥರು ಇಬ್ಬರಿಗೂ ಬುದ್ಧಿ ಮಾತು ಹೇಳಿ ಇಬ್ಬರನ್ನು ಸಮಾಧಾನಪಡಿಸಿದ್ದರು. ಆದರೆ ಇದೇ ವಿಚಾರ ಮುಂದುವರೆದು ಅಮೀನಾಳ ಕೊಲೆಯಾಗಿದೆ. ಈ ಸಂಬಂಧ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಡಿಸಿಪಿ ಸಂಜೀತ್. ವಿ. ಜೆ, ಕೂಲಿ ಕೆಲಸ ಮಾಡುವ ಸೈದುಲು ಒಂದೂವರೆ ತಿಂಗಳ ಹಿಂದೆ ಯಲಹಂಕದ ಕೆಂಚೇನಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಸೈದುಲು ಮೊದಲ ಮದುವೆ ಮುಚ್ಚಿಟ್ಟ ವಿಚಾರ ಅಮೀನಾಳಿಗೆ ತಿಳಿದ ನಂತರ ಇಬ್ಬರ ನಡುವೆ ಜಗಳವಾಗುತ್ತಿತ್ತು ಎಂದರು.

ಸೆ. 2ರಂದು ಇದೇ ವಿಚಾರಕ್ಕೆ ಪತಿ – ಪತ್ನಿ ನಡುವೆ ಜಗಳವಾಗಿತ್ತು. ಸೆಪ್ಟಂಬರ್ 3ರ ಮುಂಜಾನೆ 3 ಗಂಟೆ ಸಮಯದಲ್ಲಿ ಮರದ ರಿಪೀಸ್​ನಿಂದ ಪತ್ನಿ ಅಮೀನಾಳ ಮೇಲೆ ಸೈದುಲು ಹಲ್ಲೆ ನಡೆಸಿ ಪರಾರಿಯಾಗಿದ್ದ. ತೀವ್ರ ಸ್ವರೂಪದ ಹಲ್ಲೆಗೊಳಗಾದ ಅಮೀನಾ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪರಾರಿಯಾಗಿದ್ದ ಆರೋಪಿ ಸೈದುಲುನನ್ನು ಆಂಧ್ರಪ್ರದೇಶದ ರಾಜಮಂಡ್ರಿಯಲ್ಲಿ ದಸ್ತಗಿರಿ ಮಾಡಲಾಗಿದೆ, ವಿಚಾರಣೆ ಮುಂದುವರೆದಿದೆ ಎಂದು ಮಾಹಿತಿ ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments