Monday, June 29, 2026
Google search engine
Homeದೇಶಇಂದಿನಿಂದ ಯುಪಿಐ ಹೊಸ ನಿಯಮ ಜಾರಿ: ದಿನದ ವಹಿವಾಟು ಮಿತಿಯಲ್ಲಿ ಏರಿಕೆ!

ಇಂದಿನಿಂದ ಯುಪಿಐ ಹೊಸ ನಿಯಮ ಜಾರಿ: ದಿನದ ವಹಿವಾಟು ಮಿತಿಯಲ್ಲಿ ಏರಿಕೆ!

ಯುಪಿಐ ನಿಯಮಗಳಲ್ಲಿ ಬದಲಾವಣೆ ಮಾಡಲಾಗಿದ್ದು, ದಿನದ ವಹಿವಾಟು ಮಿತಿಯಲ್ಲಿ ಏರಿಕೆ ಮಾಡಲಾಗಿದೆ.

ಸೆಪ್ಟೆಂಬರ್ 15 ಅಂದರೆ ಸೋಮವಾರದಿಂದಲೇ ಹೊಸ ನಿಯಮ ಜಾರಿಗೆ ಬಂದಿದ್ದು, 5 ಲಕ್ಷದಿಂದ ಗರಿಷ್ಠ 10 ಲಕ್ಷ ರೂ.ವರೆಗೆ ದಿನದ ವಹಿವಾಟು ಮಿತಿಯನ್ನು ಏರಿಸಲಾಗಿದೆ.

ಇನ್ಷೂರೆನ್ಸ್, ಕ್ರೆಡಿಟ್ ಕಾರ್ಡ್ ಬಿಲ್ ಇತ್ಯಾದಿ ಸೇವೆಗಳಿಗೆ ಹಣ ಪಾವತಿಸಲು ಇದ್ದ ಮಿತಿಯನ್ನು ಕೂಡ ಏರಿಸಲಾಗಿದೆ.

ಯುಪಿಐ ಮೂಲಕ ದೊಡ್ಡ ಮೊತ್ತದ ಹಣ ಪಾವತಿಗೆ ಇದ್ದ ಮಿತಿಯಿಂದ ವಹಿವಾಟುದಾರರು ಚೆಕ್, ಇಂಟರ್ನೆಟ್ ಬ್ಯಾಂಕಿಂಗ್ ಅಥವಾ ನಗದು ಮೊರೆ ಹೋಗಬೇಕಿತ್ತು.  ಈ ನಿಯಮದ ಮೂಲಕ ಫೋನ್ ಪೇ, ಪೇಟಿಎಂ, ಗೂಗಲ್ ಪೇ ಇತ್ಯಾದಿ ಬಳಸಿ ದೊಡ್ಡ ಮೊತ್ತದ ಹಣ ಪಾವತಿಸಬಬಹುದಾಗಿದೆ.

ವಿಮೆ, ಸಾಲ ಮತ್ತು ಇಎಂಐಗೂ ಅನುಕೂಲ

ಹೆಚ್ಚು ಮೊತ್ತದ ವಿಮಾ ಕಂತು, ಸಾಲದ ಕಂತು ಪಾವತಿಸಬಹುದು. ಒಂದೇ ಬಾರಿಗೆ 5,00,000 ರೂವರೆಗೆ ಹಣ ಪಾವತಿಸಬಹುದು. ಒಂದು ದಿನದಲ್ಲಿ 10 ಲಕ್ಷ ರೂವರೆಗೆ ವಿಮಾ ಪ್ರೀಮಿಯಮ್, ಇಎಂಐಗಳನ್ನು ಕಟ್ಟಬಹುದು. ಈ ಮೊದಲಾದರೆ ಐದು ಲಕ್ಷ ರೂ ಪಾವತಿಸಬೇಕಾದರೆ ಹಲವು ಬಾರಿ ಸಣ್ಣ ಸಣ್ಣ ಮೊತ್ತಗಳನ್ನು ಪಾವತಿಸಬೇಕಿತ್ತು.

ಷೇರು ಮಾರುಕಟ್ಟೆಯಲ್ಲೂ ಮಿತಿ ಹೆಚ್ಚಳ

ಷೇರು ಮಾರುಕಟ್ಟೆಯಲ್ಲೂ ಹೂಡಿಕೆದಾರರು ಒಮ್ಮೆಗೇ ಐದು ಲಕ್ಷ ರೂ ಹಣ ಪಾವತಿಸಬಹುದು. ಇಲ್ಲಿಯೂ ಕೂಡ ದಿನಕ್ಕೆ 10 ಲಕ್ಷ ರೂವರೆಗೆ ಪಾವತಿಸಲು ಅವಕಾಶ ಇದೆ.

ಕ್ರೆಡಿಟ್ ಕಾರ್ಡ್ ಬಿಲ್

ಕ್ರೆಡಿಟ್ ಕಾರ್ಡ್ ಬಿಲ್ ಮೊತ್ತ 5 ಲಕ್ಷ ರೂ ಇದ್ದರೆ ಅದನ್ನು ಒಮ್ಮೆಲೇ ಪಾವತಿಸಬಹುದು. ಒಂದು ದಿನದಲ್ಲಿ ಆರು ಲಕ್ಷ ರೂವರೆಗೆ ಪಾವತಿಸಲು ಮಿತಿ ಇರುತ್ತದೆ.

ಇನ್ನು, ಪ್ರಯಾಣಕ್ಕೆ ಸಂಬಂಧಿಸಿದ ಬುಕಿಂಗ್ ಮತ್ತು ವೆಚ್ಚಗಳಿಗೂ ಒಂದೇ ಬಾರಿಗೆ 5,00,000 ರೂವರೆಗೆ ಪಾವತಿಸಲು ಅವಕಾಶ ಇದೆ. ಇಲ್ಲಿ ದಿನದ ಮಿತಿ 10 ಲಕ್ಷ ರೂ ಇದೆ.

ಒಡವೆ, ಅಂಗಡಿಗಳಿಗೆ ಪಾವತಿ

ಒಡವೆಗಳನ್ನು ಖರೀದಿಸುವಾಗ ಒಮ್ಮೆಗೇ ಐದು ಲಕ್ಷ ರೂ ಪಾವತಿಸಬಹುದು. ಇದರಲ್ಲಿ ದಿನಕ್ಕೆ 6,00,000 ರೂ ಮಿತಿ ಇದೆ.

ವರ್ತಕರಿಗೆ ಒಂದೇ ವಹಿವಾಟಿನಲ್ಲಿ ಐದು ಲಕ್ಷ ರೂ ಪಾವತಿಸಬಹುದು. ಇಲ್ಲಿ ದಿನದ ಮಿತಿ ನಿಗದಿ ಮಾಡಲಾಗಿಲ್ಲ.

ವ್ಯಕ್ತಿಯಿಂದ ವ್ಯಕ್ತಿಗೆ ಪಾವತಿ

ವ್ಯಕ್ತಿಯಿಂದ ವ್ಯಕ್ತಿಗೆ ಈ ಮೊದಲು 1 ಲಕ್ಷ ರೂ ಪಾವತಿಸಬಹುದಾಗಿತ್ತು. ಈಗ ಅದೇ ನಿಯಮ ಮುಂದುವರಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments