Sunday, June 28, 2026
Google search engine
Homeಕಾನೂನುಜಾನ್ಸನ್ ಅಂಡ್ ಜಾನ್ಸನ್ ಕಂಪನಿಗೆ 8600 ಕೋಟಿ ರೂ. ದಂಡ!

ಜಾನ್ಸನ್ ಅಂಡ್ ಜಾನ್ಸನ್ ಕಂಪನಿಗೆ 8600 ಕೋಟಿ ರೂ. ದಂಡ!

ಜಾನ್ಸನ್ ಅಂಡ್ ಜಾನ್ಸನ್ ಕಂಪನಿಗೆ ಅಮೆರಿಕದ ಕ್ಯಾಲಿಫೋರ್ನಿಯಾ ನ್ಯಾಯಾಲಯ 966 ದಶಲಕ್ಷ ಡಾಲರ್ (ಸುಮಾರು 8600 ಕೋಟಿ ರೂ.) ದಂಡ ವಿಧಿಸಿದೆ.

ಸತತ 15 ವರ್ಷಗಳ ಕಾಲ ಬೇಬಿ ಪೌಡರ್ ಬಳಸಿದ್ದರಿಂದ ಕಾಣಿಸಿಕೊಂಡ ಚರ್ಮದ ಕ್ಯಾನ್ಸರ್ ನಿಂದ ಮಹಿಳೆ ಮೃತಪಟ್ಟ ಪ್ರಕರಣದಲ್ಲಿ ನ್ಯಾಯಾಲಯ ಸಂತ್ರಸ್ತ ಕುಟುಂಬಕ್ಕೆ 966 ದಶಲಕ್ಷ ಡಾಲರ್ ಪಾವತಿಸುವಂತೆ ಸೂಚಿಸಿದೆ.

ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯ ಬೇಬಿ ಪೌಡರ್ ನಲ್ಲಿ ಕ್ಯಾನ್ಸರ್ ಗೆ ಕಾರಣವಾಗುವ ಅಂಶ ಪತ್ತೆಯಾದ ಹಿನ್ನೆಲೆಯಲ್ಲಿ 2023ರಲ್ಲಿ ಈ ಉತ್ಪನ್ನಗಳ ಉತ್ಪಾದನೆ ಹಾಗೂ ಮಾರಾಟವನ್ನು ನಿಷೇಧಿಸಲಾಗಿದೆ.

ಲಾಸ್ ಏಂಜಲೀಸ್ ಸ್ಟೇಟ್ ಜ್ಯೂಡಿಷರಿ 16 ದಶಲಕ್ಷ ಡಾಲರ್ ಅನ್ನು ನಷ್ಟ ತುಂಬಿಕೊಡಲು ಹಾಗೂ 950 ದಶಲಕ್ಷ ಡಾಲರ್ ಅನ್ನು 2021ರಲ್ಲಿ 88ನೇ ವಯಸ್ಸಿಗೆ ನಿಧನರಾದ ಮೋರೆ ಅವರ ಕುಟುಂಬಕ್ಕೆ ಪರಿಹಾರ ಮೊತ್ತವಾಗಿ ನೀಡಲು ಸೂಚಿಸಿತು.

ಮೋರೆ 15 ವರ್ಷಗಳ ಕಾಲ ಸತತವಾಗಿ ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯ ಬೇಬಿ ಪೌಡರ್ ಬಳಸಿದ್ದರಿಂದ ಕ್ಯಾನ್ಸರ್ ಗೆ ತುತ್ತಾಗಿದ್ದರು. ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವುದಾಗಿ ಜಾನ್ಸನ್ ಅಂಡ್ ಜಾನ್ಸನ್ ಕಂಪನಿ ಹೇಳಿದೆ. ಇದೊಂದು ಸಂವಿಧಾನ ಬಾಹಿರ ತೀರ್ಪು ಆಗಿದ್ದು, ಸಂಸ್ಥಗೆ ಧಕ್ಕೆ ತರುವಂತಹ ಏಕಪಕ್ಷೀಯ ತೀರ್ಮಾನವಾಗಿದೆ ಎಂದು ಆರೋಪಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments