Wednesday, September 30, 2026
Google search engine
Homeಮನರಂಜನೆಬಿಗ್ ಬಾಸ್ ಗೆ ಬಿಗ್ ರಿಲೀಫ್: ಜಿಲ್ಲಾಡಳಿತದಿಂದ 10 ದಿನ ಕಾಲವಕಾಶ

ಬಿಗ್ ಬಾಸ್ ಗೆ ಬಿಗ್ ರಿಲೀಫ್: ಜಿಲ್ಲಾಡಳಿತದಿಂದ 10 ದಿನ ಕಾಲವಕಾಶ

ಪರವಾನಗಿ ಪಡೆಯದೇ ಇರುವುದು ಸೇರಿದಂತೆ ಹಲವು ನಿಯಮಗಳನ್ನು ಉಲ್ಲಂಘಿಸಿದ ಜಾಲಿವುಡ್ ಸ್ಟುಡಿಯೋ ಮನವಿ ಮೇರೆಗೆ ಜಿಲ್ಲಾಡಳಿತ 10 ದಿನಗಳ ಕಾಲವಕಾಶ ನೀಡಿದೆ. ಈ ಮೂಲಕ ಬಿಗ್ ಬಾಸ್-12 (bigg boss) ಕಾರ್ಯಕ್ರಮ ಮತ್ತೆ ಮುಂದುವರಿಯುವ ಸಾಧ್ಯತೆ ಇದೆ.

ನಾವು ಪರವಾನಗಿ ಪಡೆದು ಸ್ಟುಡಿಯೋ ನಡೆಸುತ್ತಿದ್ದೇವೆ. ನಮ್ಮ ಸ್ಟುಡಿಯೋನಲ್ಲಿನ ಎಲ್ಲ ಚಟುವಟಿಕೆಗಳಿಗೆ ಪರವಾನಗಿ ಇದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಇಲಾಖೆಯ ಕೆಲವು ನಿಯಮಗಳನ್ನು ನಾವು ಸರಿಯಾಗಿ ಪಾಲಿಸಿಲ್ಲ, ಈ ಬಗ್ಗೆ ನಾವು ವಿಷಾಧ ವ್ಯಕ್ತಪಡಿಸುತ್ತೇವೆ. ತಪ್ಪು ಸರಿಪಡಿಸಿಕೊಳ್ಳಲು ಕಾಲವಕಾಶ ನೀಡಿ ಎಂದು ಜಾಲಿವುಡ್ ಸ್ಟುಡಿಯೋಸ್ ಮನವಿ ಮಾಡಿದೆ.

ಇನ್ನು ಮುಂದೆ ನಾವು ಕೆಎಸ್​​ಪಿಬಿಯ ಎಲ್ಲ ನಿಯಮಗಳನ್ನು ನಾವು ಪಾಲಿಸುತ್ತೇವೆ, ಅದಕ್ಕೆ ಸಂಬಂಧಿಸಿ ದಾಖಲೆಗಳನ್ನು ನಾವು ಕೆಎಸ್​​ಪಿಬಿಗೆ ಸಲ್ಲಿಸುತ್ತೇವೆ. ನಮಗೆ 15 ದಿನಗಳ ಕಾಲಾವಕಾಶ ನೀಡಿ ಅಷ್ಟರಲ್ಲಿ ಎಲ್ಲವನ್ನು ಸರಿಪಡಿಸುತ್ತೇವೆ, ಸದ್ಯಕ್ಕೆ ನಮಗೆ ತಾತ್ಕಾಲಿಕ ಅನುಮತಿಯನ್ನು ನೀಡಿ, ಆ ನಂತರ ಪರಿಶೀಲನೆ ನಡೆಸಿ ಅನುಮತಿಯನ್ನು ನವೀಕರಣಗೊಳಿಸಿ ಎಂದು ಪತ್ರದಲ್ಲಿ ಜಾಲಿವುಡ್ ವೇಲ್ಸ್ ಸ್ಟುಡಿಯೋ ಮನವಿ ಮಾಡಿದೆ.

ಮಾಲಿನ್ಯ ನಿಯಂತ್ರಣ ನಿಯಮಗಳನ್ನು ಜಾಲಿವುಡ್ ಸ್ಟುಡಿಯೋಸ್​​ನವರು ಪಾಲಿಸಿಲ್ಲವೆಂದು ಸ್ಥಳೀಯ ಆಡಳಿತಾಧಿಕಾರಿಗಳು ನಿನ್ನೆ ಜಾಲಿವುಡ್​​ ಸ್ಟುಡಿಯೋಗೆ ಬೀಗ ಹಾಕಿದ್ದಾರೆ. ಜಾಲಿವುಡ್ ಒಳಗಿದ್ದ ಬಿಗ್​​ಬಾಸ್ ಕನ್ನಡ ಶೋ ಅನ್ನು ಸಹ ನಿಲ್ಲಿಸಲಾಗಿದ್ದು, ಸ್ಪರ್ಧಿಗಳನ್ನೆಲ್ಲ ಸ್ಥಳಾಂತರ ಮಾಡಿಸಲಾಗಿದೆ. ಈಗ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದ್ದು, ಜಿಲ್ಲಾಧಿಕಾರಿಗಳು ಯಾವ ನಿರ್ಣಯವನ್ನು ಕೈಗೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ಜಾಲಿವುಡ್ ಸ್ಟುಡಿಯೋ ಮನವಿಯನ್ನು ಪುರಸ್ಕರಿಸಿರುವ ಜಿಲ್ಲಾಡಳಿತ ತಪ್ಪುಗಳನ್ನು ಸರಿಪಡಿಸಿಕೊಳ್ಳಲು 10 ದಿನಗಳ ಕಾಲವಕಾಶ ನೀಡಿದೆ. ಈ ಹಿನ್ನೆಲೆಯಲ್ಲಿ ಜಾಲಿವುಡ್ ಸ್ಟುಡಿಯೋದಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಮುಂದುವರಿಯಲಿದೆ ಎಂದು ಹೇಳಲಾಗಿದೆ.

ಈಗಲ್ಟನ್ ರೆಸಾರ್ಟ್ ನಲ್ಲಿ ಬಿಗ್ ಬಾಸ್ ಸ್ಪರ್ಧಿಗಳು

ಜಾಲಿವುಡ್ ಸ್ಟುಡಿಯೋಗೆ ಮಂಗಳವಾರ ಅಧಿಕಾರಿಗಳು ಬೀಗ ಜಡಿದ ಹಿನ್ನೆಲೆಯಲ್ಲಿ 17 ಸ್ಪರ್ಧಿಗಳನ್ನು ರಾತ್ರೋರಾತ್ರಿ ಬಿಡದಿಯ ಈಗಲ್ಟನ್ ರೆಸಾರ್ಟ್ ನಲ್ಲಿ 12 ಕೊಠಡಿಗಳನ್ನು ಬುಕ್ ಮಾಡಿ ತಂಗಲು ಅವಕಾಶ ನೀಡಲಾಗಿತ್ತು.

ಮಂಗಳವಾರ ರಾತ್ರಿ 7.30ರ ಸುಮಾರಿಗೆ ಬಿಗ್ ಬಾಸ್ ಮನೆಯಿಂದ ಸ್ಪರ್ಧಿಗಳು ಹಾಗೂ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡ ಎಲ್ಲಾ ತಾಂತ್ರಿಕ ವರ್ಗದವರನ್ನು ಹೊರಗೆ ಕಳುಹಿಸಲಾಗಿದ್ದು, ಕೂಡಲೇ ಅವರನ್ನು ಕಠಿಣ ನಿಯಮದ ಅಡಿ ರೆಸಾರ್ಟ್ ನಲ್ಲಿ ತಂಗಲು ಅವಕಾಶ ನೀಡಲಾಗಿದೆ.

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments