Thursday, September 19, 2024
Google search engine
Homeತಾಜಾ ಸುದ್ದಿಅಮೂಲ್ ಹಾಲಿನ ದರ ಲೀಟರ್ ಗೆ 2 ರೂ. ಏರಿಕೆ

ಅಮೂಲ್ ಹಾಲಿನ ದರ ಲೀಟರ್ ಗೆ 2 ರೂ. ಏರಿಕೆ

ಗುಜರಾತ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಅಮೂಲ್ ಹಾಲಿನ ದರ ಲೀಟರ್ ಗೆ 2 ರೂ. ಏರಿಕೆ ಮಾಡಲಾಗಿದೆ.

ಹಾಲಿನ ದರವನ್ನು ಲೀಟರ್ 2 ರೂ. ಅಂದರೆ ಶೇ.3ರಿಂದ 4ರಷ್ಟು ಮಾತ್ರ ಏರಿಸಲಾಗಿದ್ದು, ಇದು ದೇಶದ ಹಣದುಬ್ಬರಕ್ಕಿಂತ ಕಡಿಮೆ ಪ್ರಮಾಣದ್ದಾಗಿದೆ ಎಂದು ಜಿಸಿಎಂಎಂಎಫ್ ಕಂಪನಿ ಪ್ರಕಟಣೆಯಲ್ಲಿ ಹೇಳಿಕೊಂಡಿದೆ.

ಅಮೂಲ್ ಕಂಪನಿಯ ಹಾಲಿನ ದರ ನಿಗದಿ ಮಾಡುವ ಗುಜರಾತ್ ಹಾಲು ಒಕ್ಕೂಟ ಈ ಪ್ರಸ್ತಾಪವನ್ನು ಒಪ್ಪಿಕೊಂಡಿದೆ. ಇದರಿಂದ ಸೋಮವಾರದಿಂದಲೇ ನೂತನ ದರ ಜಾರಿಗೆ ಬಂದಿದೆ.

ಅಮೂಲ್ ಗೋಲ್ಡ್ ಲೀಟರ್ ಗೆ 66 ರೂ., ಅಮೂಲ್ ಟೀ ಸ್ಪೇಷಲ್ ಹಾಲಿನ ದರ 64 ರೂ. ಅಮೂಲ್ ಶಕ್ತಿ 62 ರೂ.ಗೆ ಏರಿಕೆಯಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments