ದೇಶದ ಅತೀ ದೊಡ್ಡ ಐಟಿ ಕಂಪನಿಯಾದ ಟಾಟಾ ಕನ್ಸಲ್ಟೇನ್ಸಿ (ಟಿಸಿಎಸ್) ಸೆಪ್ಟೆಂಬರ್ 30ರ ವೇಳೆಗೆ ಜಾಗತಿಕ ಮಟ್ಟದಲ್ಲಿ 20,000 ಉದ್ಯೋಗಿಗಳನ್ನು ವಜಾಗೊಳಿಸಿದೆ.
ಟಿಸಿಎಸ್ ಕಂಪನಿ ಶೇ.1ರಷ್ಟು ಅಂದರೆ 6000 ಉದ್ಯೋಗಿಗಳನ್ನು ವಜಾ ಮಾಡಲಾಗುತ್ತಿದೆ ಎಂದು ಹೇಳಿಕೊಂಡಿದ್ದು, ಸಂಖ್ಯೆಗಳ ಮೇಲೆ ನಮಗೆ ನಂಬಿಕೆ ಇಲ್ಲ ಎಂದು ಹೇಳಿಕೊಂಡಿತ್ತು.
ಆದರೆ ಸೆಪ್ಟೆಂಬರ್ 30ರ ವೇಳೆಗೆ ಕಂಪನಿ ಜಾಗತಿಕ ಮಟ್ಟದಲ್ಲಿ ಒಟ್ಟಾರೆ 20 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದೆ. ಇದರಿಂದ 6,13,069 ಇದ್ದ ಉದ್ಯೋಗಿಗಳ ಸಂಖ್ಯೆ 5,93,314ಕ್ಕೆ ಇಳಿಕೆಯಾಗಿದೆ.
ಸ್ವಯಂ ಆಗಿ ಅಥವಾ ಅನಿವಾರ್ಯವಾಗಿ ಒಟ್ಟಾರೆ 6000 ಉದ್ಯೋಗಿಗಳನ್ನು ಅಧಿಕೃತವಾಗಿ ಸೇವೆಯಿಂದ ಮುಕ್ತಗೊಳಿಸಿದ್ದೇವೆ ಎಂದು ಹೊಸದಾಗಿ ಮಾನವ ಸಂಪನ್ಮೂಲ ಅಧಿಕಾರಿಯಾಗಿ ನೇಮಕಗೊಂಡ ಸುದೀಪ್ ಕುನ್ನುಮಾಲ್ ಹೇಳಿಕೆ ನೀಡಿದ್ದಾರೆ.
ಕಳೆದ ಜುಲೈನಲ್ಲಿ ಟಿಸಿಎಸ್ ಕಂಪನಿ ಶೇ.2ರಷ್ಟು ಅಂದರೆ 12,000 ಉದ್ಯೋಗಿಗಳ ಕಡಿತದ ಮುನ್ಸೂಚನೆ ನೀಡಿತ್ತು. ಇದರಲ್ಲಿ ಮಧ್ಯಮ ಹಾಗೂ ಹಿರಿಯರ ಮಟ್ಟದಲ್ಲಿ ಎಂದು ಹೇಳಲಾಗಿತ್ತು.
ನಾಸ್ಕೆಂಟ್ ಇನ್ ಫಾರ್ಮೆಷನ್ ಟೆಕ್ನಾಲಜಿ ಎಂಪ್ಲಾಯ್ಸ್ ಸೆನೆಟ್ (NITES) ವೇತನ ಕಡಿತ ಮಾಡಿದ್ದರಿಂದ ಕಂಪನಿ ಹೇಳಿಕೊಂಡಿದ್ದಕ್ಕಿಂತ 8000 ಹೆಚ್ಚಿನ ಉದ್ಯೋಗಿಗಳು ಕೆಲಸ ತೊರೆದಿದ್ದಾರೆ ಎಂದು ಆರೋಪಿಸಿದೆ.
ಟಿಸಿಎಸ್ ಸಂಸ್ಥೆ ಮೊದಲೇ ಹೇಳಿಕೊಂಡಿದ್ದಕ್ಕೂ, ಈಗ ಉದ್ಯೋಗಿಗಳು ವಜಾಗೊಂಡಿರುವುದಕ್ಕೂ ಹೊಂದಾಣಿಕೆ ಆಗುತ್ತಿಲ್ಲ. ಇದರಿಂದ ಕಂಪನಿ ಪಾರದರ್ಶಕತೆ ಕಾಪಾಡಿಕೊಳ್ಳುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.



