Wednesday, May 20, 2026
Google search engine
Homeಕ್ರೀಡೆವಿಶ್ವದಾಖಲೆ ಬರೆದ ಕುಲದೀಪ್‌: ಫಾಲೋಆನ್‌ ಗೆ ತುತ್ತಾದ ವೆಸ್ಟ್‌ ಇಂಡೀಸ್‌

ವಿಶ್ವದಾಖಲೆ ಬರೆದ ಕುಲದೀಪ್‌: ಫಾಲೋಆನ್‌ ಗೆ ತುತ್ತಾದ ವೆಸ್ಟ್‌ ಇಂಡೀಸ್‌

ಸ್ಪಿನ್ನರ್‌ ಕುಲದೀಪ್‌ ಯಾದವ್‌ ಮಾರಕ ದಾಳಿಗೆ ತತ್ತರಿಸಿದ ವೆಸ್ಟ್‌ ಇಂಡೀಸ್‌ ತಂಡ ಎರಡನೇ ಟೆಸ್ಟ್‌ ಪಂದ್ಯದ ಮೊದಲ ಇನಿಂಗ್ಸ್‌ ನಲ್ಲಿ 248 ರನ್‌ ಗೆ ಆಲೌಟಾಗಿದ್ದು, ಫಾಲೋಆನ್‌ ಗೆ ಗುರಿಯಾಗಿದೆ.

ದೆಹಲಿಯಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನವಾದ ಭಾನುವಾರ ವೆಸ್ಟ್‌ ಇಂಡೀಸ್‌ ಚಹಾ ವಿರಾಮಕ್ಕೂ ಮುನ್ನವೇ ಮೊದಲ ಇನಿಂಗ್ಸ್‌ ನಲ್ಲಿ 81.5 ಓವರ್‌ ಗಳಲ್ಲಿ 248 ರನ್‌ ಗೆ ಆಲೌಟಾಯಿತು. ಭಾರತ ತಂಡ ಮೊದಲ ಇನಿಂಗ್ಸ್‌ ನಲ್ಲಿ 5 ವಿಕೆಟ್‌ ಗೆ 518 ರನ್‌ ಗೆ ಡಿಕ್ಲೇರ್‌ ಮಾಡಿಕೊಂಡಿತ್ತು. ವೆಸ್ಟ್‌ ಇಂಡೀಸ್‌ ಇದೀಗ 270 ರನ್‌ ಗಳ ಭಾರೀ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್‌ ಆಡಬೇಕಿದೆ.

ಮೊದಲ ಟೆಸ್ಟ್‌ ಪಂದ್ಯಕ್ಕೆ ಹೋಲಿಸಿದರೆ ವೆಸ್ಟ್‌ ಇಂಡೀಸ್‌ ಬ್ಯಾಟ್ಸ್‌ ಮನ್‌ ಗಳು ಸುಧಾರಿತ ಪ್ರದರ್ಶನ ನೀಡಿದರಾದರೂ ಫಾಲೋಆನ್‌ ನಿಂದ ತಪ್ಪಿಸಿಕೊಳ್ಳಲು ಆಗಲಿಲ್ಲ. ಕುಲದೀಪ್‌ ಯಾದವ್‌ ಮಾರಕ ದಾಳಿ ಸಂಘಟಿಸಿ 82 ರನ್‌ ನೀಡಿ 5 ವಿಕೆಟ್‌ ಕಬಳಿಸಿದರು. ರವೀಂದ್ರ ಜಡೇಜಾ 3 ವಿಕೆಟ್‌ ಪಡೆದು ಉತ್ತಮ ಬೆಂಬಲ ನೀಡಿದರು.

ಕುಲದೀಪ್‌ ಯಾದವ್‌ 15 ಟೆಸ್ಟ್‌ ಪಂದ್ಯಗಳಲ್ಲಿ 5ನೇ ಬಾರಿ 5 ವಿಕೆಟ್‌ ಗೊಂಚಲು ಪಡೆದ ಸಾಧನೆ ಮಾಡಿದರು. ಅಲ್ಲದೇ ಅತ್ಯಂತ ವೇಗವಾಗಿ 5 ಬಾರಿ 5 ವಿಕೆಟ್‌ ಗೊಂಚಲು ಪಡೆದ ಸ್ಪಿನ್ನರ್ ಎಂಬ ವಿಶ್ವದಾಖಲೆಗೆ ಪಾತ್ರರಾದರು. ಇದಕ್ಕೂ ಮುನ್ನ ಜಾನಿ ವಾಡ್ಲೆ 28 ಟೆಸ್ಟ್‌ ಗಳಲ್ಲಿ 5 ಬಾರಿ ಈ ಸಾಧನೆ ಮಾಡಿದರೆ, ವೆಸ್ಟ್‌ ಇಂಡೀಸ್‌ ನ ಪಾಲ್‌ ಆಡಮ್ಸ್‌ 45 ಪಂದ್ಯಗಳಲ್ಲಿ 4 ಬಾರಿ 5 ವಿಕೆಟ್‌ ಪಡೆದ ಸಾಧನೆ ಮಾಡಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments