ಸ್ವಿಜರ್ ಲೆಂಡ್ ಮೂಲದ ಆಹಾರ ಮತ್ತು ಪಾನೀಯ ಕಂಪನಿ ನೆಸ್ಟ್ಲೆ ಜಾಗತಿಕ ಮಟ್ಟದಲ್ಲಿ 16000 ಉದ್ಯೋಗಿಗಳನ್ನು ವಜಾಗೊಳಿಸಲು ಮುಂದಾಗಿದೆ.
ನೆಸ್ಪೆರೆಸೊ ಕಾಫಿ, ಪೆರಿಯಾರ್ ವಾಟರ್, ಕಿಟ್ ಕ್ಯಾಟ್ ಚಾಕೊಲೇಟ್ ಮತ್ತು ಪೂರ್ನಿಯಾ ಸಾಕುಪ್ರಾಣಿಗಳ ಆಹಾರ ಮುಂತಾದ ಜನಪ್ರಿಯ ಬ್ರ್ಯಾಂಡ್ ಗಳನ್ನು ಹೊಂದಿರುವ ನೆಸ್ಟ್ಲೆ ಕಂಪನಿ ಮುಂದಿನ 2 ವರ್ಷಗಳಲ್ಲಿ 16 ಸಾವಿರ ಉದ್ಯೋಗಿಗಳ ಕಡಿತಕ್ಕೆ ಮುಂದಾಗಿದೆ.
ನೆಸ್ಟ್ ಲೆ ಕಂಪನಿಗೆ ಹೊಸದಾಗಿ ಸಿಇಓ ಆಗಿ ಬಂದಿರುವ ಫಿಲಿಪ್ ನರ್ವಾಟಿಲ್, ಬದಲಾಗುತ್ತಿರುವ ಕಾಲಘಟ್ಟಕ್ಕೆ ಹೊಂದಿಕೊಳ್ಳಲು ಮಾರುಕಟ್ಟೆ ವಿಸ್ತರಣೆ ಹಾಗೂ ಉದ್ಯೋಗ ಕಡಿತಕ್ಕೆ ಮುಂದಾಗಿದ್ದಾರೆ.
ಸಮಾಜ ಬದಲಾಗುತ್ತಿದೆ. ನಾವು ಅದಕ್ಕೆ ತಕ್ಕಂತೆ ವೇಗವಾಗಿ ಬದಲಾಗಬೇಕಾಗಿದೆ. ತಲೆಗಳನ್ನು ಲೆಕ್ಕ ಮಾಡುವ ಉದ್ದೇಶದಿಂದ ಅತ್ಯಂತ ಕಠಿಣ ನಿರ್ಧಾರ ಕೈಗೊಳ್ಳಬೇಕಾಗಿದೆ ಎಂದು ಫಿಲಿಪ್ ನರ್ವಾಟಿಲ್ ತಿಳಿಸಿದ್ದಾರೆ.
ಉನ್ನತ ಮಟ್ಟದಲ್ಲಿರುವ 12,000 ಉದ್ಯೋಗಿಗಳನ್ನು ವಜಾ ಮಾಡಲಾಗುವುದು. ಈ ವರ್ಷ 1 ಶತಕೋಟಿ ಡಾಲರ್ ಉಳಿತಾಯ ಮಾಡಲು ಉದ್ದೇಶಿಸಿದ್ದು, ಇದು ಕಳೆದ ವರ್ಷಗಳಿಗೆ ಹೋಲಿಸಿದರೆ ದ್ವಿಗುಣವಾಗಲಿದೆ.
ಉದ್ಯೋಗ ಕಡಿತದಿಂದ 2.7 ದಶಲಕ್ಷ ಡಾಲರ್ ಉಳಿಕೆಯಾಗಲಿದೆ. ಈಗಾಗಲೇ 4000 ತಳಮಟ್ಟದ ಉದ್ಯೋಗಿಗಳನ್ನು ವಜಾ ಮಾಡಲಾಗಿದ್ದು, ಹಂತ ಹಂತವಾಗಿ ಉದ್ಯೋಗ ಕಡಿತ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.



