Wednesday, June 24, 2026
Google search engine
Homeರಾಜ್ಯRSSಗೆ ಸೆಡ್ಡು: ಒಂದೇ ದಿನ 7 ಸಂಘಟನೆಗಳಿಂದ ಪಥಸಂಚಲನಕ್ಕೆ ಮನವಿ

RSSಗೆ ಸೆಡ್ಡು: ಒಂದೇ ದಿನ 7 ಸಂಘಟನೆಗಳಿಂದ ಪಥಸಂಚಲನಕ್ಕೆ ಮನವಿ

ಕಲಬುರಗಿ: ಸಚಿವ ಪ್ರಿಯಾಂಕ್ ಖರ್ಗೆ ಅವರ ಸ್ವಕ್ಷೇತ್ರ ಚಿತ್ತಾಪುರದಲ್ಲಿ ನವೆಂಬರ್ 2ರಂದು ಪಥಸಂಚಲನ ನಡೆಸಲು ತೀರ್ಮಾನಿಸಿರುವ ಆರ್​ಎಸ್​ಎಸ್ ಗೆ ಸೆಡ್ಡು ಹೊಡೆಯಲು 7 ವಿವಿಧ ಸಂಘಟನೆಗಳು ಅದೇ ದಿನ ಪಥಸಂಚಲನ ನಡೆಸಲು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿವೆ.

ದಲಿತ ಸಂಘಟನೆ ಭೀಮ್ ಆರ್ಮಿ ಸಹ ಅಂದೇ ಪಥಸಂಚಲನಕ್ಕೆ ಅನುಮತಿ ನೀಡಬೇಕೆಂದು ಕಲಬುರಗಿ ಜಿಲ್ಲಾಧಿಕಾರಿಗೆ ಮನವಿ ಮಾಡಿದೆ. ಹಾಗೇ ಕುರುಬ ಸಮುದಾಯ ಸಹ ಎಸ್​​ಟಿ ಮೀಸಲಾತಿಗಾಗಿ ಪ್ರತಿಭಟನೆ ಮಾಡಲು ಮುಂದಾಗಿದೆ. ಇದರ ನಡುವೆ ಇದೀಗ ರೈತ ಸಂಘಟನೆ ಹಾಗೂ ಕ್ರಿಶ್ಚಿಯನ್ ಸಮುದಾಯ ಸಹ ಪಥಸಂಚಲನ ಮಾಡಲು ನಿರ್ಧರಿಸಿರುವುದರಿಂದ ಎಲ್ಲರ ಚಿತ್ತ ಚಿತ್ತಾಪುರದತ್ತ ನೆಟ್ಟಿದೆ.

ಆರ್ ಎಸ್ ಎಸ್ ಪಥಸಂಚಲನ ಮಾಡಲು ಹೈಕೋರ್ಟ್ ಮೆಟ್ಟಿಲೆರಿದೆಯೋ ದಿನಕ್ಕೊಂದು ತಿರುವು ಪಡೆಯುತ್ತಲೇ ಇದೆ. ಸದ್ಯ ಆರ್ ಎಸ್ ಎಸ್ ನವೆಂಬರ್ 2ರಂದು ಪಥಸಂಚಲನ ಮಾಡುತ್ತೇವೆ ಎಂದು ಹೇಳಿದ್ದೇ ತಡ ನಾನು ಮುಂದು ತಾ ಮುಂದು ಎನ್ನುವಂತೆ ಬೇರೆ ಬೇರೆ ಸಂಘಟನೆಗಳು ಆರ್ಜಿ ಸಲ್ಲಿಸುತ್ತಿದ್ದು,ಅದರ ಸಾಲಿಗೆ ರೈತ ಸಂಘಟನೆ ಸೇರಿದೆ.

ರೈತ ಪಥಸಂಚಲನ ಸಂಬಂಧ ರಾಜ್ಯ ರೈತ ಸಂಘಟನೆ ಹಸಿರ ಸೇನೆ ಬಣ ಅನುಮತಿಗಾಗಿ ಆರ್ಜಿ ಹಾಕಿದೆ. ಆರ್ ಎಸ್ ಎಸ್ ರೈತರ ಉದ್ದಾರಕ್ಕಾಗಿ ಮಾಡುತ್ತುಲ್ಲ. ನಾವು ರೈತರಿಗಾಗಿ ಹಾಗೂ ಎನ್ ಡಿಆರ್ ಎಫ್ ನಲ್ಲಿ ಕೇಂದ್ರ ಸರ್ಕಾರ ನಮಗೆ ಕಡಿಮೆ ಅನುದಾನ ನೀಡಿರುವುದನ್ನು ವಿರೋಧಿಸಿ ರೈತ ಪಥಸಂಚಲನ ಮಾಡಲಾಗುವುದು ಎಂದು ತಿಳಿಸಿದೆ.

ಪ್ರಾರ್ಥನ ನಡಿಗೆ:

ನವೆಂಬರ್ 2ರಂದು ಚಿತ್ತಾಪುರದಲ್ಲಿ ಆರ್​​​ಎಸ್​​ಎಸ್​​ ಪಥಸಂಚಲನ ಮಾಡಲು ರಾಜ್ಯ ಕ್ರಿಶ್ಚಿಯನ್ ವೆಲ್ಪೇರ್ ಸೊಸೈಟಿ ಸಹ ಅನುಮತಿಗಾಗಿ ಆರ್ಜಿ ಸಲ್ಲಿಸಿದೆ. ನವೆಂಬರ್ 2 ಭಾನುವಾರ ಆಗಿರುವುದರಿಂದ ಕ್ರಿಶ್ಚಿಯನ್ ಸಮೂದಾಯ ಸಹಜವಾಗೇ ಪ್ರಾರ್ಥನೆ ಮಾಡಲಿದೆ. ಆದರೆ ಅಂದು ಚರ್ಚ್​ ಬದಲಿಗೆ ಪ್ರಾರ್ಥನ ನಡಿಗೆ ಮಾಡುತ್ತೆವೆ ಎಂದು ಆರ್ಜಿ ಸಲ್ಲಿಕೆ ಮಾಡಿದೆ.

ಆರ್ ಎಸ್ ಎಸ್ ಗೆ ಕೌಂಟರ್ ಆಗಿ ನಾವು ಪ್ರಾರ್ಥನ ನಡಿಗೆ ಮಾಡುತ್ತಿಲ್ಲ.ಬದಲಾಗಿ ಶಾಂತಿ ಸುವ್ಯವಸ್ಥೆ ಅರಿವು ಮೂಡಿಸಲು ಮಾಡುತ್ತಿದ್ದೇವೆ. ಇದನ್ನ ಆರ್ ಎಸ್ ಎಸ್ ಕೌಂಟರ್ ಅಂತ ತಿಳಿದುಕೊಂಡರೆ ಸ್ವಾಗತ ಮಾಡುತ್ತೇವೆ ಎಂದು ಕ್ರಿಶ್ಚಿಯನ್ ಸಮೂದಾಯದ ಮುಖಂಡರು ಹೇಳುತ್ತಿದ್ದಾರೆ.

ಪಥಸಂಚಲನಕ್ಕೆ 7 ಅರ್ಜಿ:

ಇಲ್ಲಿವರೆಗೆ ಚಿತ್ತಾಪುರದಲ್ಲಿ ನವೆಂಬರ್ 2ರಂದು ಪಥಸಂಚಲನ ಮಾಡಲು ಒಟ್ಟು ಏಳು ಅರ್ಜಿ ಸಲ್ಲಿಕೆಯಾಗಿವೆ. ಎಲ್ಲಾ ಆರ್ಜಿಗಳನ್ನ ಜಿಲ್ಲಾಧಿಕಾರಿಗಳು ಪೊಲೀಸ್ ಇಲಾಖೆಗೆ ಹಸ್ತಾಂತರ ಮಾಡಿದ್ದಾರೆ.ಅಲ್ಲದೇ ಈ ಬಗ್ಗೆ ಜಿಲ್ಲಾಡಳಿತ ಸಹ ಕೋಟ್೯ ವರದಿ ನೀಡಲಿದ್ದು, ಅದರ ಆದಾರದ ಮೇಲೆ ಕೋಟ್೯ ಇಂದು(ಅ.24) ವಿಚಾರಣೆ ನಡೆಸಲಿದೆ ಇದರಿಂದ ನ್ಯಾಯಾಲಯದಲ್ಲಿ ಯಾರಿಗೆ ಅವಕಾಶ ಸಿಗುತ್ತೆ ಎನ್ನುವುದು ಕೂತುಹಲ ಮೂಡಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments