Thursday, July 2, 2026
Google search engine
Homeಕ್ರೀಡೆಸಿಮೊನ್ ಹಾರ್ಮರ್ ದಾಳಿಗೆ ಕುಸಿದ ಭಾರತ: ದ.ಆಫ್ರಿಕಾಗೆ 30 ರನ್ ಅಲ್ಪ ಹಿನ್ನಡೆ

ಸಿಮೊನ್ ಹಾರ್ಮರ್ ದಾಳಿಗೆ ಕುಸಿದ ಭಾರತ: ದ.ಆಫ್ರಿಕಾಗೆ 30 ರನ್ ಅಲ್ಪ ಹಿನ್ನಡೆ

ಸ್ಪಿನ್ನರ್ ಸಿಮೊನ್ ಹಾರ್ಮರ್ ದಾಳಿಗೆ ಭಾರತ ತಂಡ ಅಲ್ಪ ಮೊತ್ತಕ್ಕೆ ಕುಸಿದಿದೆ. ಆದರೂ ಮೊದಲ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 30 ರನ್ ಗಳ ಅಲ್ಪ ಮುನ್ನಡೆ ಪಡೆಯುವಲ್ಲಿ ಯಶಸ್ವಿಯಾಗಿದೆ.

ಕೋಲ್ಕತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಎರಡನೇ ದಿನವಾದ ಶನಿವಾರ 1 ವಿಕೆಟ್ ಗೆ 37 ರನ್ ಗಳಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಭಾರತ ಭೋಜನ ವಿರಾಮದ ನಂತರ ಕೆಲವೇ ಸಮಯದಲ್ಲಿ 189 ರನ್ ಗೆ ಆಲೌಟಾಯಿತು.

ನಾಯಕ ಶುಭಮನ್ ಗಿಲ್ 4 ರನ್ ಗಳಿಸಿದ್ದಾಗ ಗಾಯಗೊಂಡು ನಿವೃತ್ತಿಗೊಂಡಿದ್ದು, ನಂತರ ಮೈದಾನಕ್ಕೆ ಇಳಿಯಲಿಲ್ಲ. ಭಾರತದ ಪರ ಕೆಎಲ್ ರಾಹುಲ್ (39), ವಾಷಿಂಗ್ಟನ್ ಸುಂದರ್ (29), ರಿಷಭ್ ಪಂತ್ (27), ರವೀಂದ್ರ ಜಡೇಜಾ (27) ತಕ್ಕಮಟ್ಟಿಗೆ ಪ್ರದರ್ಶನ ನೀಡಿದರು.

ಸಿಮೊನ್ ಹಾರ್ಮರ್ 30 ರನ್ ನೀಡಿ  ವಿಕೆಟ್ ಪಡೆದರೆ, ಮಾರ್ಕೊ ಜಾನ್ಸೆನ್ 35 ರನ್ ನೀಡಿ 3 ವಿಕೆಟ್ ಗಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments