Thursday, May 14, 2026
Google search engine
Homeಅಪರಾಧ1.26 ಕೋಟಿ ಮೌಲ್ಯದ ನಕಲಿ ನಂದಿನಿ ತುಪ್ಪ ವಶ: ಕೆಎಂಎಫ್ ಡಿಸ್ಟ್ರಿಬ್ಯೂಟರ್ ಸೇರಿ ನಾಲ್ವರ ಬಂಧನ

1.26 ಕೋಟಿ ಮೌಲ್ಯದ ನಕಲಿ ನಂದಿನಿ ತುಪ್ಪ ವಶ: ಕೆಎಂಎಫ್ ಡಿಸ್ಟ್ರಿಬ್ಯೂಟರ್ ಸೇರಿ ನಾಲ್ವರ ಬಂಧನ

ಬೆಂಗಳೂರು: ನಂದಿನಿ ತುಪ್ಪದ ಬ್ಯಾಂಡ್ ಹೆಸರಲ್ಲಿ ನಕಲಿ ತುಪ್ಪ ಮಾರಾಟ ಮಾಡುತ್ತಿದ್ದ ಜಾಲವನ್ನು ಬೆಂಗಳೂರು ಸಿಸಿಬಿ ಪೊಲೀಸರು ಬೇಧಿಸಿದ್ದು, ನಂದಿನಿ ಉತ್ಪನ್ನಗಳ ಡಿಸ್ಟ್ರಿಬ್ಯೂಟರ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.

ಕೆಎಂಎಫ್ ಡಿಸ್ಟ್ರಿಬ್ಯೂಟರ್ ಮಹೇಂದ್ರ, ಪುತ್ರ ದೀಪಕ್, ಮುನಿರಾಜು ಹಾಗೂ ಅಭಿ ಬಂಧಿತ ಆರೋಪಿಗಳು.

ಕೆಎಂಎಫ್ ಡಿಸ್ಟ್ರಿ ಬ್ಯೂಟರ್ ಮಹೇಂದ್ರ ಒರಿಜಿನಲ್ ನಂದಿನಿ ತುಪ್ಪವನ್ನು ಖರೀದಿಸಿ ತಮಿಳುನಾಡಿಗೆ ಕೊಂಡೊಯ್ದು ಅದಕ್ಕೆ ನಕಲಿ ತುಪ್ಪವನ್ನು ಬೆರೆಸಿ, ನಂದಿನಿ ತುಪ್ಪದ ಬ್ರಾಂಡ್ ಲೇಬಲ್ ಗಳನ್ನು ಅಂಟಿಸಿ ಮಾರಾಟ ಮಾಡುತ್ತಿದ್ದ.

ನಕಲಿ ತುಪ್ಪದ ಮಾಲದ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ನಾಲ್ವರನ್ನು ಬಂಧಿಸಿದ್ದು, 1.26 ಕೋಟಿ ರೂ. ಮೌಲ್ಯದ ನಕಲಿ ತುಪ್ಪ ಹಾಗೂ ನಾಲ್ಕು ವಾಹನ ಹಾಗೂ ಒಂದು ಮಿಷನ್ ಯೂನಿಟ್ ವಶಪಡಿಸಿಕೊಂಡಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಸಿಸಿಬಿ ವಿಶೇಶ ವಿಚಾರಣಾ ದಳ ಹಾಗೂ ಕೆ ಎಂಎಫ್ ಜಾಗೃತ ದಳ ಜಂಟಿ ಕಾರ್ಯಾಚರಣೆ ನಡೆಸಿ ನಕಲಿ ತುಪ್ಪ ತಯಾರಿಸುತ್ತಿದ್ದ ತಮಿಳುನಾಡಿನ ಯೂನಿಟ್ ಮೇಲೆ ದಾಳಿ ನಡೆಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments