‘ಪದೇ ಪದೇ ಆದೇಶ ಮಾಡಿದರೂ ಹೀಗ್ಯಾಕೆ ಮಾಡುತ್ತಾರೆ ಚಳಿ ಇದ್ದಾಗ ಕಂಬಳಿ ಕೊಡಬೇಕಲ್ಲವೇ? ಎಂದು ಪೊಲೀಸರ ನಡೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಲಯ ನಟ ದರ್ಶನ್ ಗೆ ಕಂಬಳಿ ಕೊಡಲು ಸೂಚನೆ ನೀಡಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ನಗರದ 5ನೇ7 ಸಿಸಿಹೆಚ್ ನ್ಯಾಯಾಲಯಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ದರ್ಶನ್ ವಿಚಾರಣೆಗೆ ಹಾಜರಾದ ವೇಳೆ ಪೊಲೀಸರು ಕನಿಷ್ಠ ಸೌಲಭ್ಯ ನೀಡದೇ ಇರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ನೀಲಿ ಬಣ್ಣದ ಟಿ ಶರ್ಟ್, ಕಪ್ಪು ಟ್ರ್ಯಾಕ್ ಪ್ಯಾಂಟ್ ಧರಿಸಿದ್ದರು. ಮೊದಲು ಆರೋಪಿಗಳ ಹಾಜರಾತಿ ಪಡೆಯಲಾಯಿತು. ಸಿಆರ್‌ಪಿಸಿ 294 ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಆರೋಪಿಗಳ ಪರ ವಕೀಲರಿಂದ ಕಾಲಾವಕಾಶ ಕೋರಿಕೆ ಸಲ್ಲಿಕೆ ಆಗಿದೆ.
ಈ ವೇಳೆ ಆರೋಪಿ ನಾಗರಾಜ್ ಕೋರ್ಟ್ ಗೆ ಮನವಿ ಮಾಡಿ ‘ಮನೆಯಿಂದ ತಂದುಕೊಟ್ಟ ಕಂಬಳಿ ನೀಡುತ್ತಿಲ್ಲ. ಜಾಸ್ತಿ ಚಳಿ ಇದ್ದರೂ ಹೆಚ್ಚುವರಿ ಕಂಬಳಿ ನೀಡುತ್ತಿಲ್ಲ’ಎಂದರು.
ಇದೇ ವೇಳೆ ನಟ ದರ್ಶನ್ ಕೂಡ ಮಾತನಾಡಿ, ಇಂಗ್ಲೀಷ್ ನಲ್ಲಿ ಮಾತು ಆರಂಭಿಸಿ., ‘ವಿ ಕಾಂಟ್ ಈವನ್ ಸ್ಲೀಪ್’ತುಂಬಾನೇ ಚಳಿ ಇದೆ. ನಾವ್ಯಾರೂ ರಾತ್ರಿ ಮಲಗುತ್ತಿಲ್ಲ. ಹೆಚ್ಚುವರಿ ಕಂಬಳಿ ಕೊಡಿಸಿ’ ಎಂದು ಕೋರ್ಟ್‌ಗೆ ದರ್ಶನ್ ಮನವಿ ಮಾಡಿದರು.
‘ಪದೇ ಪದೇ ಆದೇಶ ಮಾಡಿದರೂ ಹೀಗ್ಯಾಕೆ ಮಾಡುತ್ತಾರೆ ಚಳಿ ಇದ್ದಾಗ ಕಂಬಳಿ ಕೊಡಬೇಕಲ್ಲವೇ’ ಎಂದು ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಧೀಶರು, ಹೆಚ್ಚುವರಿ ಕಂಬಳಿ ಪೂರೈಸುವಂತೆ ಸೂಚಿಸಿ ವಿಚಾರಣೆಯನ್ನು ಡಿ.3ಕ್ಕೆ ಮುಂದೂಡಿದರು.
ಆರೋಪಿ 14 ಪ್ರದೋಷ್ ಮಧ್ಯಂತರ ಜಾಮೀನನ್ನು ನ.22ರವರೆಗೆ ವಿಸ್ತರಣೆ ಮಾಡಲಾಗಿದೆ. ದರ್ಶನ್ ತಮ್ಮ ಮೇಲೆ ಬಂದ ಆರೋಪ ಎಲ್ಲವನ್ನೂ ತಿರಸ್ಕರಿಸಿದ್ದಾರೆ. ಇದರಿಂದ ಅವರು ವಿಚಾರಣೆ ಎದುರಿಸಬೇಕಿದೆ.



