Sunday, June 14, 2026
Google search engine
Homeಅಪರಾಧ2827 ಕೋಟಿ ರೂ. ಸಂಚಾರಿ ಉಲ್ಲಂಘನೆಯ ದಂಡ ಬಾಕಿ: ವಸೂಲಿಗೆ ವಿಶೇಷ ಕೌಂಟರ್!

2827 ಕೋಟಿ ರೂ. ಸಂಚಾರಿ ಉಲ್ಲಂಘನೆಯ ದಂಡ ಬಾಕಿ: ವಸೂಲಿಗೆ ವಿಶೇಷ ಕೌಂಟರ್!

ಬೆಂಗಳೂರು: ರಾಜ್ಯಾದ್ಯಂತ ಬಾಕಿಯಿರುವ ಸಂಚಾರ ದಂಡ (ಇ-ಚಲನ್) ಪಾವತಿಗೆ ಶೇ 50 ರಿಯಾಯಿತಿ ಅವಕಾಶವನ್ನು ರಾಜ್ಯ ಸರ್ಕಾರ ಘೋಷಿಸಿದೆ.

ಬಾಕಿ ಇರುವ ಸಂಚಾರ ದಂಡವನ್ನು ಶೇ 50 ರಿಯಾಯಿತಿ ದರದಲ್ಲಿ ಜೂನ್ 21ರಿಂದ ಜುಲೈ 10ರ ವರೆಗೆ ಪಾವತಿಸಬಹುದು.

ದಂಡ ಸಂಗ್ರಹಣೆ ಯಶಸ್ವಿಗೊಳಿಸಲು ಬೆಂಗಳೂರು ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಹೆಚ್ಚು ವಾಹನ ಸಂಚಾರವಿರುವ ಪ್ರಮುಖ ಪ್ರದೇಶಗಳಲ್ಲಿ ವಿಶೇಷ ಕೌಂಟರ್‌ಗಳನ್ನು ತೆರೆಯಲು ಬೆಂಗಳೂರು ಸಂಚಾರ ಪೊಲೀಸರು ಯೋಜನೆ ರೂಪಿಸಿದ್ದಾರೆ.

ಕಳೆದ ಜೂನ್ 4ರಂದು ರಾಜ್ಯ ಸರ್ಕಾರ ಪ್ರಕಟಿಸಿರುವ ಆದೇಶದನ್ವಯ 2025ರಲ್ಲಿ ಹಲವು ಬಾರಿ ದಂಡ ಪಾವತಿಗೆ ಅಭಿಯಾನಗಳನ್ನು ನಡೆಸಿದ ಬಳಿಕವೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಮಾಹಿತಿ ಪ್ರಕಾರ, ರಾಜ್ಯದಲ್ಲಿ ಸುಮಾರು 2,827 ಕೋಟಿ ರೂ. ದಂಡ ಬಾಕಿಯಿದೆ. ಆದ್ದರಿಂದ ಸಂಚಾರ ದಂಡ ಪಾವತಿಗೆ ಶೇ 50 ರಿಯಾಯಿತಿ ಅವಕಾಶವನ್ನು ಮತ್ತೊಮ್ಮೆ ನೀಡಲಾಗಿದೆ.

ಈ ಅವಕಾಶದಲ್ಲಿ 2026ರ ಮೇ ತಿಂಗಳಿಗೂ ಮೊದಲು ಪೊಲೀಸ್ ಇಲಾಖೆಯ ಸಂಚಾರ ಇ-ಚಲನ್‌ಗಳಲ್ಲಿ ದಾಖಲಾಗಿ ಬಾಕಿ ಇರುವ ಪ್ರಕರಣಗಳ ದಂಡದ ಮೊತ್ತ ಮತ್ತು ಸಾರಿಗೆ ಇಲಾಖೆಯಲ್ಲಿ 1991ರಿಂದ 2022ರ ಅವಧಿಯಲ್ಲಿ ದಾಖಲಾಗಿರುವ ದಂಡ ಪಾವತಿಸಬಹುದು.

ವಿಶೇಷ ಕೌಂಟರ್ ಸ್ಥಾಪನೆ:

ಸಂಚಾರ ನಿಯಮ ಉಲ್ಲಂಘನೆಗಳಿಗೆ ದಂಡ ಪಾವತಿಸುವಂತೆ ಸಾಮಾಜಿಕ ಜಾಲತಾಣಗಳು ಸೇರಿದಂತೆ ವಿವಿಧ ಮಾಧ್ಯಮಗಳ ಮೂಲಕ ವಿಶೇಷ ಅಭಿಯಾನ ನಡೆಸಲಾಗಿದೆ. ಈ ಬಾರಿ ನಗರದಲ್ಲಿ ಹೆಚ್ಚಿನ ವಾಹನ ಸಂಚಾರವಿರುವ ಪ್ರದೇಶಗಳಲ್ಲಿ ವಿಶೇಷ ಕೌಂಟರ್‌ಗಳನ್ನು ಸ್ಥಾಪಿಸಲಾಗುತ್ತಿದ್ದು, ವಾಹನ ಸವಾರರು ದಂಡ ಪಾವತಿಸಬಹುದು.

ರಿಯಾಯಿತಿ ಅವಕಾಶವಿರುವ ಸಂದರ್ಭದಲ್ಲಿ ನಗರದಲ್ಲಿ ವಾಹನ ತಪಾಸಣೆಯನ್ನು ಮತ್ತಷ್ಟು ತೀವ್ರಗೊಳಿಸಲಾಗುತ್ತದೆ. ತಪಾಸಣೆ ಮಾಡುವ ವೇಳೆ, ಯಾವುದೇ ಬಾಕಿ ದಂಡವಿದ್ದರೆ ಸ್ಥಳದಲ್ಲೇ ಪಾವತಿಸುವಂತೆ ಸೂಚಿಸಲಾಗುತ್ತದೆ ಎಂದು ಬೆಂಗಳೂರು ಸಂಚಾರ ಪೊಲೀಸ್ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ದಾಖಲೆಯ ದಂಡ ಸಂಗ್ರಹ:

ಕಳೆದ ವರ್ಷ ಕೂಡ ಬಾಕಿ ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿಗೆ ಶೇ 50 ರಿಯಾಯಿತಿಯ ಅವಕಾಶ ನೀಡಲಾಗಿತ್ತು. ಆ ವೇಳೆ 89 ಕೋಟಿ‌ ಗೂ ಅಧಿಕ ದಂಡ ಸಂಗ್ರಹವಾಗಿತ್ತು. 30 ಲಕ್ಷ‌ಕ್ಕೂ ಅಧಿಕ ಪ್ರಕರಣಗಳು ಇತ್ಯರ್ಥವಾಗಿದ್ದವು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments