ನಟ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಸರ್ಜಾ ತಮಿಳು ನಟ ಉಮಾಪತಿ ಜೊತೆ ಅವರನ್ನು ಮದುವೆ ಆಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಚೆನ್ನೈ ಹನುಮಾನ್ ದೇವಸ್ಥಾನದಲ್ಲಿ ಐಶ್ವರ್ಯಾ ಮತ್ತು ಉಮಾಪತಿ ಮದುವೆ ಸೋಮವಾರ ಜರುಗಿದೆ. ಹಲವು ವರ್ಷಗಳ ಪ್ರೀತಿಗೆ ಮದುವೆಯೆಂಬ ಹೊಸ ಬಂಧಕ್ಕೆ ಈ ಜೋಡಿ ಕಾಲಿಟ್ಟಿದೆ.
ನಿನ್ನೆ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾಳ ಹಳದಿ ಮತ್ತು ಮೆಹಂದಿ ಶಾಸ್ತ್ರ ಸಂಭ್ರಮದಿಂದ ಜರುಗಿದೆ. ಮದುವೆ ಸಂಭ್ರಮದಲ್ಲಿರುವ ಪುತ್ರಿಗೆ ಅರ್ಜುನ್ ಸರ್ಜಾ ಮುತ್ತು ಕೊಟ್ಟು ಮುದ್ದು ಮಾಡುತ್ತಿರುವ ಫೋಟೋ ಗಮನ ಸೆಳೆದಿತ್ತು.