Saturday, May 16, 2026
Google search engine
Homeದೇಶಕೇಂದ್ರ ಸರ್ಕಾರಿ ನೌಕರರಿಗೆ ಸಿಹಿಸುದ್ದಿ: ಜನವರಿ 1ರಿಂದ 8ನೇ ವೇತನ ಆಯೋಗ ಜಾರಿ?

ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿಸುದ್ದಿ: ಜನವರಿ 1ರಿಂದ 8ನೇ ವೇತನ ಆಯೋಗ ಜಾರಿ?

ನವದೆಹಲಿ: 2026ರ ಹೊಸ ವರ್ಷದ ಆರಂಭದೊಂದಿಗೆ 8ನೇ ವೇತನ ಆಯೋಗವು ಜನವರಿ 1ರಿಂದ ಜಾರಿಗೆ ಬರುವ ಸಾಧ್ಯತೆಯಿದ್ದು,ಇದರಿಂದ ಲಕ್ಷಾಂತರ ಕೇಂದ್ರ ಸರ್ಕಾರಿ ನೌಕರರು ಸಂಬಳ ಹೆಚ್ಚಳದ ನಿರೀಕ್ಷೆಯಲ್ಲಿದ್ದಾರೆ.

ಪ್ರಸ್ತುತ ಸಿಪಿಸಿ, 7ನೇ ವೇತನ ಆಯೋಗದ ಸಿಂಧುತ್ವವು ಡಿಸೆಂಬರ್ 31ರಂದು ಮುಕ್ತಾಯಗೊಳ್ಳುತ್ತದೆ. ಜನವರಿ 1ರಿಂದ 8ನೇ ವೇತನ ಆಯೋಗದ ಇನ್ನೂ ಘೋಷಿಸದ ನಿಬಂಧನೆಗಳು ಜಾರಿಗೆ ಬರಲಿವೆ.

ಈ ವರ್ಷದ ಜನವರಿಯಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು 8ನೇ ವೇತನ ಆಯೋಗವನ್ನು ಘೋಷಿಸಿತು. ಅದಾದ ತಿಂಗಳುಗಳ ನಂತರ ಸಿಪಿಸಿಯ ಸದಸ್ಯರನ್ನು ಘೋಷಿಸಲಾಯಿತು. ಈಗ ನಡೆಯುತ್ತಿರುವ 8ನೇ ವೇತನ ಆಯೋಗದ ಬಗ್ಗೆ ದೊಡ್ಡ ಚರ್ಚೆಗಳು ವೇತನ ಹೆಚ್ಚಳ ಮತ್ತು ಫಿಟ್‌ಮೆಂಟ್ ಅಂಶಕ್ಕೆ ಸಂಬಂಧಿಸಿವೆ. ಫಿಟ್​​ಮೆಂಟ್ ಆಧಾರದ ಮೇಲೆ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಪಾವತಿ ನಿರ್ಧರಿಸಲಾಗುತ್ತದೆ. 7ನೇ ವೇತನ ಆಯೋಗದ ಅಡಿಯಲ್ಲಿ ಫಿಟ್‌ಮೆಂಟ್ ಅಂಶವು 2.57 ಆಗಿದೆ.

8ನೇ ವೇತನ ಆಯೋಗದ ವೇತನ ಹೆಚ್ಚಳವನ್ನು ಯಾವಾಗ ಘೋಷಿಸಲಾಗುತ್ತದೆ ಎಂಬುದರ ಕುರಿತು ಸ್ಪಷ್ಟತೆ ಇಲ್ಲ. ಆದರೆ, ಮೂಲಗಳ ಪ್ರಕಾರ ಹೊಸ ವರ್ಷದಿಂದಲೇ ಇದು ಜಾರಿಗೆ ಬರುವ ಸಾಧ್ಯತೆಯಿದೆ. 8ನೇ ವೇತನ ಆಯೋಗದ ವೇತನ ಹೆಚ್ಚಳವನ್ನು ಫಿಟ್‌ಮೆಂಟ್ ಅಂಶದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಸಿಪಿಸಿಯ ಸದಸ್ಯರು ಫಿಟ್‌ಮೆಂಟ್ ಅಂಶವನ್ನು ಸೂಚಿಸುತ್ತಾರೆ. ಇದು ಸಿಪಿಸಿ ಹೊಸ ಮೂಲ ವೇತನವನ್ನು ಲೆಕ್ಕಾಚಾರ ಮಾಡಲು ಬಳಸುವ ಗುಣಕವಾಗಿದೆ. ಫಿಟ್‌ಮೆಂಟ್ ಅಂಶವನ್ನು ನಿರ್ಧರಿಸಲು 8ನೇ ವೇತನ ಆಯೋಗವು ಹಣದುಬ್ಬರ ಸೇರಿದಂತೆ ಹಲವಾರು ಅಂಶಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆ.

8ನೇ ವೇತನ ಆಯೋಗ ಜಾರಿಗೆ ಬಂದ ನಂತರ ಎಲ್ಲಾ ಸರ್ಕಾರಿ ಉದ್ಯೋಗಿಗಳು ಮತ್ತು ಪಿಂಚಣಿದಾರರ ಮೂಲ ವೇತನವು ಗಣನೀಯವಾಗಿ ಹೆಚ್ಚಾಗುವ ನಿರೀಕ್ಷೆಯಿದೆ. ಅವರ ವೇತನ ಮಟ್ಟವನ್ನು ಅವಲಂಬಿಸಿ ಇದು ಉದ್ಯೋಗಿಯಿಂದ ಉದ್ಯೋಗಿಗೆ ಭಿನ್ನವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಅದರಂತೆ, ಕ್ಯಾಬಿನೆಟ್ ಕಾರ್ಯದರ್ಶಿಯಂತಹ ಉನ್ನತ ಅಧಿಕಾರಿಗಳನ್ನು ಒಳಗೊಂಡ 18ನೇ ಹಂತದ ಸರ್ಕಾರಿ ನೌಕರರಿಗೆ 8ನೇ ವೇತನ ಆಯೋಗದ ಜಾರಿಯಿಂದ ಅತಿ ಹೆಚ್ಚು ವೇತನ ಹೆಚ್ಚಳವಾಗಲಿದೆ.

ಎಕ್ಸ್​ನಲ್ಲಿ 8ನೇ ವೇತನ ಆಯೋಗದ ಜಾರಿಯಿಂದ ಆಗುವ ಸಂಬಳದ ಹೆಚ್ಚಳದ ಬಗ್ಗೆ ತೀವ್ರ ಚರ್ಚೆಗಳು ನಡೆಯುತ್ತಿವೆ. ಇದು ಜಾರಿಯಾದ ಬಳಿಕ ಪೊಲೀಸ್​ ಕಾನ್​ಸ್ಟೆಬಲ್​ಗೂ ಸಾಫ್ಟ್​ವೇರ್ ಇಂಜಿನಿಯರ್​​ ಸಮವಾಗಿ ಸಂಬಳ ಸಿಗಲಿದೆ ಎನ್ನಲಾಗಿದೆ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments